• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭೆಯಲ್ಲಿ ಪುಟ್ಬಾಲ್ ಆಡಿದ ಕರ್ನಾಟಕ ಸಂಸದರು

|

ನವದೆಹಲಿ, ಮಾರ್ಚ್ 11: ಲೋಕಸಭೆ ಅಧಿವೇಶನದಲ್ಲಿ ಸಂಸದರಿಗೆ ಸಾಕಷ್ಟು ಕೆಲಸದ ಒತ್ತಡ ಇರುತ್ತೆ. ಅಧಿವೇಶನಕ್ಕೆ ಹಾಜರಾಗಿ ಪ್ರಶ್ನೆ ಕೇಳಬೇಕು ಎಂಬ ಉಮೇದಿನಲ್ಲಿರುತ್ತಾರೆ. ಆದರೆ, ಎಲ್ಲ ಸಂಸದರಿಗೆ ಅವಕಾಶ ಸಿಗುವುದು ಅಪರೂಪ.

ಇದರಿಂದ ನಿರಾಶರಾಗಿ ತಮ್ಮ ಕ್ಷೇತ್ರದ ಪೈಲ್‌ಗಳನ್ನು ತೆಗೆದುಕೊಂಡು ಇಲಾಖೆಗಳಿಗೆ ಅಲೆದಾಡುವುದುಂಟು. ಆದರೆ, ಕರ್ನಾಟಕದ ಯುವ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ್ ಸಿಂಹ ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡು, ಬಿಡುವು ಸಿಕ್ಕಾಗ ಪುಟ್ಬಾಲ್ ಆಟ ಆಡಿ ಗಮನ ಸೆಳೆದಿದ್ದಾರೆ.

ದೆಹಲಿ ಹಿಂಸಾಚಾರ; ಲೋಕಸಭೆಯಲ್ಲಿ ಅಮಿತ್ ಶಾ ಉತ್ತರ

ಈ ಕುರಿತು ವಿಡಿಯೋ ಒಂದನ್ನು ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯಾ ಅವರು, ಲೋಕಸಭೆಯಲ್ಲಿ ಪ್ರಶ್ನೆ ಕೇಳಿ ಪಾಯಿಂಟ್ಸ್ ತೆಗೆದುಕೊಳ್ಳಲು ಸಮಯ ಸಿಗದಿದ್ದರೂ, ಪುಟ್ಬಾಲ್ ಆಟ ಆಡಿ ಪಾಯಿಂಟ್ಸ್ ಗಳಿಸಿಕೊಂಡೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಹಿಂಸಾಚಾರದ ಬಗ್ಗೆ ವಿರೋಧ ಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ. ಪ್ರಚೋದಿತ ದೆಹಲಿ ಗಲಭೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಿಂದ ಹಿಂಸಾಚಾರ ವ್ಯಾಪಿಸಲಿಲ್ಲ ಎಂದು ದೆಹಲಿ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ.

English summary
MP Tejaswi Surya And Pratap Simha Played Football In Parliment Outside. Tejaswi Surya posted a video in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X