ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇಟಲಿ ಎಫೆಕ್ಟ್ ಸೋನಿಯಾ-ರಾಹುಲ್‌ಗೆ ಕೊರೊನಾ ಪರೀಕ್ಷೆ ಮಾಡಿ'

|
Google Oneindia Kannada News

ದೆಹಲಿ, ಮಾರ್ಚ್ 5: ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದೆ. ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬರ್ತಿವೆ. ಈ ವೈರಸ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ನಾಗ್ಪುರ ಸಂಸದ ಹನುಮಾನ್ ಬೆನಿವಾಲ್, ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಟೀಕೆ ಮಾಡಿದ್ದಾರೆ.

ಇಟಲಿ ದೇಶದಲ್ಲಿ ಕೊರೊನಾ ವೈರಸ್ ಹೆಚ್ಚು ಪ್ರಭಾವ ಬೀರಿದೆ. ಹಾಗಾಗಿ, ಇಟಲಿ ಮೂಲದವರಾದ ಸೋನಿಯಾ ಗಾಂಧಿ ಕುಟುಂಬವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಎಂದು ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.

ಭಾರತದಲ್ಲಿ 29 ಮಂದಿಗೆ ಕೊರೊನಾ: ವಿಶ್ವದಲ್ಲಿ 3,285ಕ್ಕೂ ಹೆಚ್ಚು ಮಂದಿ ಬಲಿ ಭಾರತದಲ್ಲಿ 29 ಮಂದಿಗೆ ಕೊರೊನಾ: ವಿಶ್ವದಲ್ಲಿ 3,285ಕ್ಕೂ ಹೆಚ್ಚು ಮಂದಿ ಬಲಿ

ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕುಟುಂಬವನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಿ ಎಂದು ಸಂಸದ ಹೇಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ ಆರಂಭವಾಗುತ್ತಿದ್ದಂತೆ ಅಧಿವೇಶನವನ್ನು ಮುಂದೂಡಲಾಯಿತು.

MP Hanuman Beniwal Says Test Sonia Gandhi For Coronavirus

ಇಟಲಿಯಲ್ಲಿ ಇದುವರೆಗೂ 3089ಕ್ಕೂ ಕೊರೊನಾ ವೈರಸ್ ಪ್ರಕರಣಗಳ ದಾಖಲಾಗಿದೆ. ಅದರಲ್ಲಿ 107 ಜನರು ಸಾವನ್ನಪ್ಪಿದ್ದಾರೆ. ಚೀನಾ ಬಿಟ್ಟರೆ ವಿಶ್ವದಲ್ಲಿ ಅತಿ ಹಚ್ಚು ಜನರು ಕೊರೊನಾ ವೈರಸ್ ಗೆ ಬಲಿಯಾಗಿರುವುದು ಇಟಲಿಯಲ್ಲಿ.

ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?

ಇತ್ತೀಚಿಗಷ್ಟೆ ಇಟಲಿಯಿಂದ ಭಾರತಕ್ಕೆ ಬಂದಿಳಿದ ಪ್ರವಾಸಿಗರಲ್ಲೂ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಒಟ್ಟು 21 ಜನರು ಇಟಲಿಯಿಂದ ದೆಹಲಿಗೆ ಬಂದರು. ಅವರಲ್ಲಿ 15 ಮಂದಿಗೆ ಕೊರೊನಾ ಪತ್ತೆಯಾಗಿತ್ತು.

English summary
Rashtriya Loktantrik Party MP Hanuman Beniwal argued to test AICC President sonia gandhi family for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X