ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಚಳವಳಿ: ರಾಕೇಶ್ ಟಿಕಾಯತ್

|
Google Oneindia Kannada News

ನವದೆಹಲಿ ಡಿಸೆಂಬರ್ 5: ಸೋಮವಾರ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಂಬಂಧಿಸಿದ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುವ ನಿರೀಕ್ಷೆ ಇದ್ದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧ ಪ್ರತಿಭಟನೆಗೆ ಸೂಚಿಸಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ಯಶಸ್ವಿ ಆಂದೋಲನದ ನಂತರ ರೈತ ಮುಖಂಡ ರಾಕೇಶ್ ಟಿಕಾಯತ್ ಈ ಸಂದೇಶವನ್ನು ರವಾನಿಸಿದ್ದಾರೆ.

ವಿಶೇಷವೆಂದರೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಲವು ವಿಧೇಯಕಗಳನ್ನು ಮಂಡಿಸಿದ್ದು, ಇನ್ನೂ ಹಲವು ವಿಧೇಯಕಗಳನ್ನು ಮಂಡಿಸಲು ಚಿಂತನೆ ನಡೆದಿದೆ. ಈ ಅನುಕ್ರಮದಲ್ಲಿ ಈಗ ಮೋದಿ ಸರ್ಕಾರವು ಸೋಮವಾರ ಸಂಸತ್ತಿನಲ್ಲಿ ಬ್ಯಾಂಕುಗಳ ಖಾಸಗೀಕರಣದ ಮಸೂದೆಯನ್ನು ಮಂಡಿಸಬಹುದು. ಇದರ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ರಾಷ್ಟ್ರವ್ಯಾಪಿ ಚಳವಳಿಗೆ ಕರೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಟಿಕಾಯತ್ ಹೊಸ ವಿಚಾರದಲ್ಲಿ ಮೋದಿ ಸರ್ಕಾರದ ವಸೂದೆ ವಿರುದ್ಧ ರೈತರು ಧ್ವನಿ ಎತ್ತಲಿದ್ದಾರೆ ಎಂದಿದ್ದಾರೆ.

ಇದೇ ಸಮಯದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ ಕೂಡ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡಿಸಲಿರುವ ಮಸೂದೆಯನ್ನು ವಿರೋಧಿಸಿದ್ದಾರೆ. ರಾಕೇಶ್ ಟಿಕಾಯತ್ ಅವರ ಟ್ವೀಟ್‌ಗೆ ಅವರು ಸಮ್ಮತಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರಿದಿದ್ದು, ಈ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಸದ್ದು ಗದ್ದಲ ನಡೆಯುತ್ತಿದೆ. ಶುಕ್ರವಾರ ಪ್ರತಿಪಕ್ಷಗಳ ಗದ್ದಲದ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

Movement Against Privatization of Banks: Rakesh Tikayat

ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾವನೆಯನ್ನು ವಿರೋಧಿಸಿ ಒಂಭತ್ತು ಬ್ಯಾಂಕ್ ಒಕ್ಕೂಟಗಳ ಪ್ರಾತಿನಿಧಿಕ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ಪ್ರಸ್ತುತ ನಡೆಯುತ್ತಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (ಡಿಸೆಂಬರ್ 6) ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ -2021 ಮಂಡಿಸೋ ಸಾಧ್ಯತೆ ಇದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳನ್ನುಖಾಸಗೀಕರಣಗೊಳಿಸೋದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಕಳೆದ ಫೆಬ್ರವರಿಯಲ್ಲಿ 2021-22ನೇ ಸಾಲಿನ ಬಜೆಟ್ ಅಧಿವೇಶನದ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು. 1.75ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸೋ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ನಿರ್ಧರಿಸಿದೆ.

Movement Against Privatization of Banks: Rakesh Tikayat

ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ನಿಜಕ್ಕೂ ನಡೆದರೆ, ಆನಂತರದಲ್ಲಿ ಬ್ಯಾಂಕುಗಳಲ್ಲಿ ಸರ್ಕಾರದ ಹೂಡಿಕೆ ಪಾಲುಗಾರಿಕೆ ಶೇಕಡ ಐದಕ್ಕಿಳಿಯುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ ಲಾಭವೇ ಮುಖ್ಯ ಆಗಿರುವುದರಿಂದ ಪ್ರತಿ ಶಾಕೆಯ ಮರು ಸಮೀಕ್ಷೆ ನಡೆಯಬಹುದು. ಲಾಭಗಳಿಸುವ ಮತ್ತು ಬ್ಯಾಲೆನ್ಸ್ ಶೀಟ್‌ಗೆ ಹೊರೆಯಾದ ಶಾಖೆಗಳನ್ನು ಮುಚ್ಚಬಹುದು ಅಥವಾ ಅವನ್ನೂ ಮತ್ತೊಂದು ಬ್ಯಾಂಕ್ ನಲ್ಲಿ ವಿಲೀನಮಾಡಬಹುದು. ನಿರ್ವಹಣಾ ವೆಚ್ಚತಗ್ಗಿಸಲು ಈಗ ಖಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಹಲವು ಕೆಲಸಗಳನ್ನು ಹೊರಗುತ್ತಿಗೆಗೆ ನೀಡಬಹುದು. ಬ್ಯಾಂಕ್ ಖಾತೆಗಳು ಕಾರ್ಪೋರೇಟ್ ಗೆ ಕೊಡಬಹುದು. ಈಗಿರುವ ಜಿಲ್ಲಾ ಶಾಖೆ, ಪ್ರಾದೇಶಿಕ ಶಾಖೆಗಳಂಥ ಕಂಟ್ರೋಲಿಂಗ್ ಆಪೀಸುಗಳ ಸಂಖ್ಯೆ ಕಡಿಮೆ ಆಗಬಹುದು ಹೀಗೆ ಹಲವಾರು ರೀತಿಯ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಇದಕ್ಕೆ ವಿರೋಧ ವ್ಯಕ್ತವಾಗಿದೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
it is being said that on Monday, the central government can introduce a bill related to privatization of banks in the Lok Sabha. the leader of the Bharatiya Kisan Union, Rakesh Tikait, has indicated to protest against the privatization of banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X