ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ ಯಾರು? ಸಮೀಕ್ಷೆ ಏನನ್ನುತ್ತೆ?

|
Google Oneindia Kannada News

Recommended Video

ನೂತನ ಪ್ರಧಾನಿ ಹುದ್ದೆಗೆ ಇವರಲ್ಲಿ ಯಾರು ಉತ್ತಮ? | Oneindia Kannada

ನವದೆಹಲಿ, ಆಗಸ್ಟ್ 20: ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇತ್ತೀಚೆಗಷ್ಟೆ ಚರ್ಚೆ ಎದ್ದಿತ್ತು. ಆದರೆ ಚುನಾವಣೆಗೂ ಮುನ್ನ ಅದನ್ನು ಬಹಿರಂಗಪಡಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು.

India Today-Karvy Mood of the Nation(MOTN) ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನ ಅತ್ಯುತ್ತಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂಬುದನ್ನು ಹೆಚ್ಚು ಜನರು ಅನುಮೋದಿಸಿದ್ದಾರೆ.

ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!

2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗಲು ಯಾರು ಸೂಕ್ತ ಎಂಬ ಪ್ರಶ್ನೆಗೆ ಶೇ. 52 ಜನರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆರಿಸಿದ್ದಾರೆ! ಈ ರೇಸ್ ನಲ್ಲಿದ್ದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಪಿ ಚಿದಂಬರಂ ಮುಂತಾದ ನಾಯಕರು ರಾಹುಲ್ ಗಾಂಧಿ ಅವರ ಮುಂದೆ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕಾಗಿ ತೀರಾ ಕಡಿಮೆ ಅಂಕ ಪಡೆದಿದ್ದಾರೆ!

ರಾಹುಲ್ ಗಾಂಧಿ ಬೆಸ್ಟ್!

ರಾಹುಲ್ ಗಾಂಧಿ ಬೆಸ್ಟ್!

ಮೂಡ್ ಆಫ್ ದಿ ನೇಶನ್ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಶೇ.52 ಜನ ಬೆಂಬಲ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸಂಚರಿಸಿ, ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣಕ್ಕೆ ರಾಹುಲ್ ಗಾಂಧಿ ಅವರಿಗೆ ಹೆಚ್ಚು ಜನಬೆಂಬಲ ಸಿಕ್ಕಿದೆ. ಅದೂ ಅಲ್ಲದೆ, ರಾಹುಲ್ ಗಾಂಧಿಯವರನ್ನು ಬಿಟ್ಟರೆ ಕಾಂಗ್ರೆಸ್ಸಿನಲ್ಲಿ ಪ್ರಧಾನಿ ಅಭ್ಯರ್ಥಿಗೆ ಸೂಕ್ತವಾಗುವಂಥ ಯುವ ನಾಯಕರು ಇಲ್ಲ.

ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಯಾರಿಗೆ ಎಷ್ಟು ಮಾರ್ಕ್ಸು?!ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಯಾರಿಗೆ ಎಷ್ಟು ಮಾರ್ಕ್ಸು?!

ಸೋನಿಯಾ ಗಾಂಧಿಗೆ ಎಷ್ಟು ಅಂಕ?

ಸೋನಿಯಾ ಗಾಂಧಿಗೆ ಎಷ್ಟು ಅಂಕ?

ಯುಪಿಎ ಚೇರ್ ಮನ್ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಬೇಕೇ ಎಂಬುದಕ್ಕೆ ಶೇ.13ರಷ್ಟು ಜನ ಬೆಂಬಲ ನೀಡಿದ್ದಾರೆ. ಯುಪಿಎ ಮೈತ್ರಿಕೂಟಕ್ಕಾಗಿ ವಿರೋಧ ಪಕ್ಷಗಳೆಲ್ಲವನ್ನೂ ಎನ್ ಡಿಎ ವಿರುದ್ಧ ಒಟ್ಟುಗೂಡಿಸುತ್ತಿರುವ ಸೋನಿಯಾ ಗಾಂಧಿ ಅವರು 2004 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಯುಪಿಎ ಮೈತ್ರಿಕೂಟ ಬಹುಮತ ಪಡೆದಾಗ ಪ್ರಧಾನಿ ಸ್ಥಾನಕ್ಕೆ ಒಲ್ಲೆ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪ್ರಿಯಾಂಕಾ ಗಾಂಧಿಗೆ 7 %!

ಪ್ರಿಯಾಂಕಾ ಗಾಂಧಿಗೆ 7 %!

ಇನ್ನು ಗಾಂಧಿ ಕುಟುಂಬದ ಮತ್ತೋರ್ವ ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಅಭ್ಯರ್ಥಿಯಾಗಿಯಾಗಬೇಕೆ ಎಂಬುದಕ್ಕೆ ಶೇ.7 ಜನ ಮಾತ್ರ ಬೆಂಬಲ ನೀಡಿದ್ದಾರೆ. ಉತ್ತಮ ನಾಯಕತ್ವದ ಗುಣಗಳಿದ್ದರೂ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಪ್ರಿಯಾಂಕಾ ಅವರು ಹೆಚ್ಚೆಚ್ಚು ಕಾಣಿಸಿಕೊಳ್ಳದೆ, ಸಹೋದರ ರಾಹುಲ್ ಗಾಂಧಿ ಅವರಿಗೇ ಬೆಂಬಲ ನೀಡುತ್ತಿರುವುದರಿಂದ ಅವರ ಜನಪ್ರಿಯತೆಯೂ ಕಡಿಮೆಯಾದಂತಿದೆ.

ಪಿ ಚಿದಂಬರಂ ಪ್ರಧಾನಿ ಅಭ್ಯರ್ಥಿಯಾಗಬೇಕೆ?

ಪಿ ಚಿದಂಬರಂ ಪ್ರಧಾನಿ ಅಭ್ಯರ್ಥಿಯಾಗಬೇಕೆ?

ಮಾಜಿ ವಿತ್ತ ಸಚಿವ ಪಿ ಚಿದಂಬರಂ ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿಯಾಗಬೇಕೆ ಎಂಬುದಕ್ಕೆ ಶೇ.06 ಜನ ಮಾತ್ರ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಕಾಂಗ್ರೆಸ್ಸಿನ ಯುವ ಮುಖಂಡರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಶೇ.3, ಸಚಿನ್ ಪೈಲೆಟ್ ಅವರಿಗೆ ಶೇ.2 ಮತ್ತು ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕಮಲ್ ನಾಥ್ ಅವರಿಗೆ ಶೇ.2 ರಷ್ಟು ಜನ ಬೆಂಬಲ ನೀಡಿದ್ದಾರೆ.

English summary
According to India Today-Karvy Mood of the Nation(MOTN) survey Congress president Rahul Gandhi is the best prime minister candidate for the Congress for Lok Sabha elections 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X