• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮಾರ್ಟ್ ಸಿಟಿ ಯೋಜನೆ: ಕರ್ನಾಟಕದ 6 ಪ್ರದೇಶಗಳು ಆಯ್ಕೆ

By Vanitha
|

ನವದೆಹಲಿ , ಜೂ 24 : ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕ ರಾಜ್ಯದ 6 ಪ್ರದೇಶಗಳಿಗೆ ಹಸಿರು ನಿಶಾನೆ ದೊರೆತಿದೆ.

ಲೋಕಸಭಾ ಚುನಾವಣೆಯ ಪ್ರಚಾರದ ಅವಧಿಯಲ್ಲಿ ಬಿಜೆಪಿ ಈ ಯೋಜನೆಯನ್ನು ಹಾಕಿಕೊಂಡಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ಕೇಂದ್ರ ಸರ್ಕಾರ ಹಾಕಿಕೊಂಡ 100 ಸ್ಮಾರ್ಟ್ ಸಿಟಿ, ೫೦೦ ಅಮೃತ್ ನಗರ ಯೋಜನೆಯ ಸಾಕಾರಕ್ಕಾಗಿ ನಗರಗಳ ಆಯ್ಕೆ ಪಟ್ಟಿ ಪ್ರಕಟವಾಗಿದೆ. ಜೊತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಎಲ್ಲಾ ಯೋಜನೆಯು ಅಟಲ್ ಮಿಷನ್ ಫಾರ್ ರೆಜುವೆನೇಷನ್ ಮತ್ತು ಅರ್ಬನ್ ಟ್ರಾನ್ಸ್ ಫರ್ಮೇಶನ್ ಯೋಜನೆಯ ಅಡಿಯಲ್ಲಿ ಸಾಕಾರಗೊಳ್ಳಲಿದೆ. [ಮೋದಿ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ 11 ನಗರ]

ಸುಮಾರು 48 ಕೋಟಿ ವೆಚ್ಚದ ಈ ಯೋಜನೆಗೆ ಮುಖ್ಯವಾಗಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜಾರಾತ್, ತಮಿಳುನಾಡು, ನವದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಆಂಧ್ರ ಪ್ರದೇಶ ಇನ್ನು ಮುಂತಾದ ರಾಜ್ಯಗಳು ಆಯ್ಕೆಯಾಗಿವೆ. ನಾಮಾಂಕಿತಗೊಂಡ ರಾಜ್ಯಗಳಲ್ಲಿ ಉತ್ತರ ಪ್ರದೇಶದ 13 ನಗರಗಳು ಈ ಯೋಜನೆಯ ಪಾಲನ್ನು ಪಡೆದುಕೊಳ್ಳಲಿವೆ.

ಕರ್ನಾಟಕದ ಗುಲ್ಬಗಾ, ಬೀದರ್, ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಬಿಜಾಪುರ ಜಿಲ್ಲೆಗಳು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಬರುವ ಅಮೃತ್ ಯೋಜನೆಯ ಮೂಲಕ ಪೂರ್ಣಗೊಳ್ಳಲಿದೆ. ಉಳಿದಂತೆ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ತಲಾ 4, ಬಿಹಾರ, ಆಂಧ್ರಪ್ರದೇಶ ಮತ್ತು ಪಂಜಾಬ್‌ ತಲಾ 3, ಒಡಿಶಾ, ಹರಿಯಾಣ, ತೆಲಂಗಾಣ ಮತ್ತು ಛತ್ತೀಸ್‌ಗಢ ತಲಾ 2, ಜಮ್ಮು ಮತ್ತು ಕಾಶ್ಮೀರ, ಕೇರಳ, ಜಾರ್ಖಂಡ್‌, ಅಸ್ಸಾಂ, ಹಿಮಾಚಲಪ್ರದೇಶ, ಗೋವಾ, ಅರುಣಾಚಲಪ್ರದೇಶ, ಚಂಡೀಗಢ ಮತ್ತು ದೆಹಲಿ ತಲಾ 1 ನಗರಗಳ ನಾಮಾಂಕಿತಕ್ಕೆ ಅವಕಾಶ ಲಭ್ಯವಾಗಲಿದೆ. ಉಳಿದಂತೆ ಉತ್ತರಾಖಂಡ, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಇತರ ಕೆಲ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ 25 ಹೆಸರು ಸೂಚಿಸುವ ಅವಕಾಶ ನೀಡಲಾಗಿದೆ.

ಏನಿದು ಅಮೃತ್‌?
ಯುಪಿಎ ಸರ್ಕಾರದ ನರ್ಮ್ ಯೋಜನೆಯಲ್ಲಿ ಬದಲಾವಣೆ ಮಾಡಿ ತರಲಾಗಿರುವ ಯೋಜನೆಯ ಹೆಸರು "ಅಮೃತ್‌' (ಅಟಲ್‌ ಮಿಷನ್‌ ಫಾರ್‌ ರಿಜ್ಯುವಿನೇಷನ್‌ ಆ್ಯಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೆàಷನ್‌ ಸ್ಕೀಮ್‌). ಅಟಲ್‌ ನಗರ ನವೀಕರಣ ಯೋಜನೆಯಡಿ ದೇಶಾದ್ಯಂತ 500 ನಗರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೂ ಕೂಡಾ ನಗರಗಳ ಹೆಸರು ಸೂಚಿಸುವ ಅವಕಾಶವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The number of cities nominate under the 100 Smart cities Especially Karnataka have taken 6 places like gulbarga, Bidar, Badaam, patadakal, Bijaapur, Mahaakuta. This project has been given the opportunity to nominate 13 cities developed as smart cities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more