ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಂಜೆ 6 ಗಂಟೆಗೆ ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆ

|
Google Oneindia Kannada News

ನವದೆಹಲಿ, ಮೇ 19: ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್ ಇಂದು ಸಂಜೆ 6 ಗಂಟೆಯಿಂದ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜನಪ್ರತಿನಿಧಿ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿರ್ದೇಶನದ ಮೊದಲ ಹಂತದ ಮತದಾನಕ್ಕೆ 48 ಗಂಟೆಗಳಿರುವ ಮುಂಚೆ ಹಾಗೂ ಕೊನೆಯ ಹಂತದ ಮತದಾನ ಅಂತ್ಯವಾಗುವವರೆಗೂ ಯಾವುದೇ ರೀತಿಯ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಸಮೀಕ್ಷೆಯನ್ನು ಮಾಡಕೂಡದು.

Flashback : 2014ರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಅವಲೋಕನ Flashback : 2014ರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಅವಲೋಕನ

ಹೀಗಾಗಿ ಕಳೆದ 40ದಿನಗಳಿಂದ ನಡೆಯುತ್ತಿರುವ ಮತೋತ್ಸವದ ಫಲಿತಾಂಶದ ಬಗ್ಗೆ ಕೋಟ್ಯಂತರ ಮತದಾರರಲ್ಲಿ ಕುತೂಹಲ ಮೂಡಿಸಿದೆ.

Most expected exit polls will be telecast after 6 pm

ಮೇ 23ಕ್ಕೆ ಫಲಿತಾಂಶವಿದ್ದರೂ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಅಂದಾಜು ಲೆಕ್ಕಾಚಾರ ಈ ಎಕ್ಸಿಟ್ ಪೋಲ್ ವರದಿ ಮಾಡಲಿದೆ.

ಎಕ್ಸಿಟ್ ಪೋಲ್ ಹಿನ್ನೆಲೆ: 1960ರ ದಶಕದಲ್ಲಿ ಸಿಎಸ್‌ಡಿಎಸ್ ಎನ್ನುವ ಸಂಸ್ಥೆ ಮೂಲಕ ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆ ಆರಂಭವಾಯಿತು. ಆದರೆ 1998ರವರೆಗೂ ಮಾಧ್ಯಮ ವಲಯದಲ್ಲಿ ಗಂಭೀರ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿರಲಿಲ್ಲ.

ಲೋಕಸಭೆ ಚುನಾವಣೆ LIVE: ಸೂಳೂರಿನಲ್ಲಿ 103 ವರ್ಷದ ಮಹಿಳೆಯಿಂದ ಮತದಾನಲೋಕಸಭೆ ಚುನಾವಣೆ LIVE: ಸೂಳೂರಿನಲ್ಲಿ 103 ವರ್ಷದ ಮಹಿಳೆಯಿಂದ ಮತದಾನ

1999-2004, 20092014ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭಾರತದಲ್ಲಿ ಪ್ರಕಟವಾಗಿದೆ.

ಈ ನಾಲ್ಕು ಲೋಕಸಭಾ ಚುನಾವಣೆಯ ಪೈಕಿ 99 ಹಾಗೂ 2014ರಲ್ಲಿ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದರೆ 2004, 2009ರಲ್ಲಿ ಸುಳ್ಳಾಗಿದೆ ಹೀಗಾಗಿ ಈ ಬಾರಿ ಯಾವ ಮಾಧ್ಯಮ ಹಾಗೂ ಏಜೆನ್ಸಿಗಳು ನಿಖರ ಫಲಿತಾಂಶ ಅಂದಾಜಿಸುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.

English summary
Most Awaited Exit polls of the general elections will be telecast after 6 o colock Today.Most of the channels announce their numbers Today evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X