ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೀದಿ ಸುಟ್ಟು ಹಿಂದು ಧ್ವಜ ಹಾರಿಸಿದ ವಿಡಿಯೋ ದೆಹಲಿಯದ್ದೇ

|
Google Oneindia Kannada News

ನವದೆಹಲಿ, ಫೆಬ್ರವರಿ 26: ದೆಹಲಿ ಹಿಂಸಾಚಾರದ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಸೀದಿಗೆ ಬೆಂಕಿ ಹಚ್ಚಿ ಮಸೀದಿಯ ಮೇಲೆ ಮೂವರು ಯುವಕರು ಹತ್ತಿ ಇಸ್ಲಾಂ ಚಿಹ್ನೆ ಕಿತ್ತು ಹಿಂದು ಹನುಮಾನ್ ಧ್ವಜ ಹಾಗೂ ಭಾರತದ ಧ್ವಜ ಕಟ್ಟುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು.

ದೆಹಲಿಯ ಅಶೋಕ್ ವಿಹಾರ್‌ದಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋವನ್ನು ಹಲವು ಮಂದಿ ಶೇರ್ ಮಾಡಿದ್ದರು, ಆದರೆ ಈ ವಿಡಿಯೋ ಎರಡು ವರ್ಷದ ಹಿಂದಿನದ್ದು ಎಂದು ಕೆಲವರು ವಾದಿಸಿದ್ದರು. ಪೊಲೀಸರು ಸಹ ''ಅಶೋಕ್ ವಿಹಾರದಲ್ಲಿ ಯಾವುದೇ ಮಸೀದಿಗೆ ಬೆಂಕಿ ಹಚ್ಚಲಾಗಿಲ್ಲ'' ಎಂದಿದ್ದರು.

ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಶಿಸ್ತುಕ್ರಮ ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಶಿಸ್ತುಕ್ರಮ

ಆದರೆ ಮಸೀದಿಗೆ ಬೆಂಕಿ ಹಚ್ಚಿ ಅದರ ಮೇಲೆ ಹತ್ತಿ ಇಸ್ಲಾಂ ಚಿಹ್ನೆ ಕಿತ್ತಿರುವ ಘಟನೆ ನಡೆದಿರುವುದು ದೆಹಲಿಯಲ್ಲಿಯೇ. ಆದರೆ ಪೊಲೀಸರು ಹೇಳಿದಂತೆ ಅಶೋಕ್ ವಿಹಾರದಲ್ಲಿ ಅಲ್ಲ ಬದಲಿಗೆ ದೆಹಲಿಯ ಅಶೋಕ್ ನಗರದಲ್ಲಿ. ವೆಬ್ಸೈಟ್ ವಿಳಾಸ : https://www.sadgurusai.in/

ಫೆಬ್ರವರಿ 25 ರಂದು ಈ ಘಟನೆ ನಡೆದಿದೆ

ಫೆಬ್ರವರಿ 25 ರಂದು ಈ ಘಟನೆ ನಡೆದಿದೆ

ಹಲವು ಫ್ಯಾಕ್ಟ್ ಚೆಕ್ ಮಾಧ್ಯಮಗಳು ಈ ಬಗ್ಗೆ ಸತ್ಯಾಂಶದ ತನಿಖೆ ನಡೆಸಿದ್ದು, ಫೆಬ್ರವರಿ 25 ರಂದು ಅಶೋಕ್ ನಗರದ 'ಬಡೀ ಮಸೀದಿ' ಹೆಸರಿನ ಮಸೀದಿಗೆ ಮೊದಲಿಗೆ ಬೆಂಕಿ ಹಚ್ಚಿ ನಂತರ ಕೆಲವು ಕಿಡಿಗೇಡಿಗಳು ಅದರ ಗುಮ್ಮಟದ ಮೇಲೆ ಏರಿ ಅಲ್ಲಿದ್ದ ಇಸ್ಲಾಂ ಧಾರ್ಮಿಕ ಚಿಹ್ನೆಯನ್ನು ಕಿತ್ತು ಆ ಸ್ಥಾನಕ್ಕೆ ಹನುಮಾನ್ ಚಿತ್ರವಿರುವ ಹಿಂದು ಧ್ವಜವನ್ನು ನೆಟ್ಟಿದ್ದಾರೆ.

ಘಟನೆ ನಡೆದಿರುವುದು ನಿಜವೇ ಆಗಿದೆ

ಘಟನೆ ನಡೆದಿರುವುದು ನಿಜವೇ ಆಗಿದೆ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಶೋಕ್ ವಿಹಾರದಲ್ಲಿ ಮಸೀದಿ ಗೆ ಬೆಂಕಿ ಹಾಕಲಾಗಿಲ್ಲ ಎಂದು ಪೊಲೀಸರು ಹೇಳಿದ ನಂತರ, ಮಸೀದಿಯ ವಿಡಿಯೋ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿತ್ತು ಆದರೆ ಈಗ ಬಂದಿರುವ ಮಾಹಿತಿಯಂತೆ ಆ ಘಟನೆ ನಡೆದಿರುವುದು ನಿಜವೇ ಆಗಿದೆ.

ಹಲವು ವಿಡಿಯೋಗಳು ವೈರಲ್ ಆಗಿವೆ

ಹಲವು ವಿಡಿಯೋಗಳು ವೈರಲ್ ಆಗಿವೆ

ದೆಹಲಿ ಹಿಂಸಾಚಾರ ಕುರಿತ ಹಲವು ವಿಡಿಯೋಗಳು ವೈರಲ್ ಆಗುತ್ತಿದ್ದು, ವಿಡಿಯೋಗಳ ಅಸಲೀಯತ್ತು ತಿಳಿದುಕೊಳ್ಳುವುದು ನೆಟ್ಟಿಗರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಆಲ್ಟ್ ನ್ಯೂಸ್ ನಂತಹಾ ಕೆಲವು ಸಂಸ್ಥೆಗಳು ವಿಡಿಯೋ, ಚಿತ್ರಗಳ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ನೀಡುತ್ತಿವೆ.

ಪೊಲೀಸರ ಕುಕೃತ್ಯದ ವಿಡಿಯೋ ಸಹ ಅಸಲಿ

ಪೊಲೀಸರ ಕುಕೃತ್ಯದ ವಿಡಿಯೋ ಸಹ ಅಸಲಿ

ಗಾಯಗೊಂಡ ಐದು ಮಂದಿ ಯುವಕರನ್ನು ರಸ್ತೆಯ ಮೇಲೆ ಮಲಗಿಸಿ ಅವರನ್ನು ಥಳಿಸುತ್ತಾ, 'ವಂದೇ ಮಾತರಂ' ಹೇಳು ಎಂದು ಪೊಲೀಸರು ಒತ್ತಾಯಿಸುತ್ತಿರುವ ವಿಡಿಯೋ ಸಹ ಹರಿದಾಡಿತ್ತು, ಅದನ್ನೂ ಸಹ ಫೇಕ್ ವಿಡಿಯೋ ಎನ್ನಲಾಗಿತ್ತು, ಆದರೆ ಅದೂ ಸಹ ದೆಹಲಿ ಹಿಂಸಾಚಾರಕ್ಕೆ ಸೇರಿದ್ದು ಎಂದು ತನಿಖೆಯಿಂದ ಗೊತ್ತಾಗಿದೆ.

English summary
Mosque vandalized video is circulating in social media is from Delhi. First police said it is fake but investigation confirmed that Mosque vandalized in Ashok Nagar Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X