ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿದಿನ 1 ಲಕ್ಷ ಕೊರೊನಾ ಕೇಸ್: ಮತ್ತೊಮ್ಮೆ ಎಚ್ಚರಿಕೆ ನೀಡಿದ WHO

|
Google Oneindia Kannada News

ದೆಹಲಿ, ಜೂನ್ 16: ಕಳೆದ ಎರಡು ವಾರಗಳಿಂದ ಜಗತ್ತಿನಲ್ಲಿ ಕೊರೊನಾ ವೈರಸ್ ಕೇಸ್‌ಗಳ ಪ್ರಮಾಣ ಪ್ರತಿದಿನ ಒಂದು ಲಕ್ಷ ದಾಟುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

Recommended Video

ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

ಅಮೆರಿಕಾ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚು ಕೊವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಭವಿಷ್ಯದ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ ಎಂದು ಎಚ್ಚರಿಸಿದ್ದಾರೆ.

2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ

ಟೆಡ್ರೊಸ್ ಅಥಾನಮ್ ಈ ಬಗ್ಗೆ ಮಾತನಾಡಿ ''ಚೀನಾದ ಬೀಜಿಂಗ್‌ನಲ್ಲಿ ಹೊಸ ಪ್ರಕರಣಗಳು ದಾಖಲಾಗಿ ಸುಮಾರು 50 ದಿನ ಕಳೆದಿತ್ತು. ಬಹಳಷ್ಟು ಸಮಯದ ಬಳಿಕ ಮತ್ತೆ ಕೊವಿಡ್ ಸೋಂಕು ವರದಿಯಾಗಿದೆ. ಹಾಗಾಗಿ, ಹೊಸ ಕೇಸ್‌ಗಳ ಮೂಲಗಳು ಬಗ್ಗೆ ತನಿಖೆ ಮಾಡಲಾಗುತ್ತಿದೆ'' ಎಂದು ಹೇಳಿದ್ದಾರೆ.

More Then 100000 coronavirus cases have been reported worldwide each day

'ಚೀನಾದ ಅಧಿಕಾರಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಹೆಚ್ಚುವರಿ ಬೆಂಬಲ ನೀಡಿದೆ. ಮುಂದಿನ ದಿನಗಳಲ್ಲಿ ಡಬ್ಲ್ಯುಎಚ್‌ಒ ಚೀನಾದಲ್ಲಿ ತನ್ನ ತಂಡವನ್ನು ಬಲಪಡಿಸಬಹುದು' ಎಂದು ಡಬ್ಲ್ಯುಎಚ್‌ಒನ ತುರ್ತು ಮುಖ್ಯಸ್ಥ ಡಾ. ಮೈಕೆಲ್ ರಯಾನ್ ಮಾಹಿತಿ ನೀಡಿದ್ದಾರೆ

ಆರಂಭದಲ್ಲಿ ಒಂದು ಲಕ್ಷ ಕೊರೊನಾ ಪ್ರಕರಣ ದಾಖಲಾಗಲು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿತ್ತು. ಆದ್ರೀಗ, ಪ್ರತಿದಿನ ಒಂದು ಲಕ್ಷ ಕೇಸ್ ವರದಿಯಾಗುತ್ತಿದೆ. ದೈನಂದಿನ ಒಟ್ಟು ಕೇಸ್‌ಗಳ ಪೈಕಿ ಮುಕ್ಕಾಲು ಭಾಗದಷ್ಟು ಕೇಸ್‌ಗಳು ಹತ್ತು ದೇಶಗಳಿಂದ ವರದಿಯಾಗುತ್ತಿದೆ ಎಂದು ಟೆಡ್ರೊಸ್ ಅಥಾನಮ್ ಹೇಳಿದ್ದಾರೆ.

ಪ್ರಸ್ತುತ ಹೊಸ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ. ಮೂರನೇ ಸ್ಥಾನದಲ್ಲಿ ಭಾರತ. ನಾಲ್ಕನೇ ಸ್ಥಾನದಲ್ಲಿ ರಷ್ಯಾ ಇದೆ.

English summary
More Then 100000 coronavirus cases have been reported worldwide each day from past two weeks. south asia and america that have most cases reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X