ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲಿಘಿ ಜಮಾತ್ ಸಭೆಗೆ ಬಂದವರು 16 ಸಾವಿರಕ್ಕೂ ಅಧಿಕ

|
Google Oneindia Kannada News

ನವದೆಹಲಿ, ಮೇ 03 : ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಸುಮಾರು 16 ಸಾವಿರ ಜನರು ಪಾಲ್ಗೊಂಡಿದ್ದರು. ಧಾರ್ಮಿಕ ಕಾರ್ಯಕ್ರಮದ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಈ ಕುರಿತು ವರದಿಯನ್ನು ಸಿದ್ಧಪಡಿಸಿದ್ದಾರೆ.

ಮಾರ್ಚ್ 13 ರಿಂದ 24ರ ತನಕ ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡು ವಿವಿಧ ರಾಜ್ಯಗಳಿಗೆ ಮರಳಿದ ಅನೇಕರಿಗೆ ಕೊರೊನಾ ಸೋಂಕು ತಗುಲಿದೆ.

ದೆಹಲಿ ಪೊಲೀಸರಿಂದ ತಬ್ಲಿಘಿ ಮುಖ್ಯಸ್ಥನಿಗೆ 4ನೇ ಬಾರಿ ನೋಟಿಸ್ದೆಹಲಿ ಪೊಲೀಸರಿಂದ ತಬ್ಲಿಘಿ ಮುಖ್ಯಸ್ಥನಿಗೆ 4ನೇ ಬಾರಿ ನೋಟಿಸ್

ಮರ್ಕಜ್ ನಿಜಾಮುದ್ದೀನ್ ಮಸೀದಿಯ ಪೋನ್ ಕರೆಗಳನ್ನು ಆಧರಿಸಿ ಈ ವರದಿಯನ್ನು ತಯಾರು ಮಾಡಲಾಗಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ದೆಹಲಿ ಪೊಲೀಸ್ ವಿಭಾಗದ ಎಲ್ಲಾ ಸಿಬ್ಬಂದಿಗಳು ಇಲ್ಲಿಗೆ ಆಗಮಿಸಿದವರು ಯಾರನ್ನು ಸಂಪರ್ಕಿಸಿದ್ದರು ಎಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

 ಮಂಡ್ಯಕ್ಕೆ ಕಂಟಕವಾದ ಮಳವಳ್ಳಿ ತಬ್ಲಿಘಿ ಸಂಪರ್ಕ ಮಂಡ್ಯಕ್ಕೆ ಕಂಟಕವಾದ ಮಳವಳ್ಳಿ ತಬ್ಲಿಘಿ ಸಂಪರ್ಕ

More Than 16000 Visited Tablighi Jamaat Headquarters

ಮಾರ್ಚ್ 13ರ ಬಳಿಕ ನಿಜಾಮುದ್ದೀನ್ ಮಸೀದಿಗೆ ಬಂದವರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಈ ಕಾರ್ಯಕ್ರಮ ಮಗಿಸಿ ರಾಜ್ಯಗಳಿಗೆ ಜನರು ಮರಳಿದ ಮೇಲೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.

ಮನಿ ಲಾಂಡರಿಂಗ್ ಪ್ರಕರಣ: ತಬ್ಲಿಘಿ ಮುಖ್ಯಸ್ಥನ ವಿರುದ್ಧ FIR ದಾಖಲಿಸಿದ ಇಡಿಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮಾರ್ಚ್ 29 ರಿಂದ 31ರ ತನಕ 2,300ಕ್ಕೂ ಅಧಿಕ ಜನರನ್ನು ನಿಜಾಮುದ್ದೀನ್ ಮಸೀದಿಯಿಂದ ಹೊರಗೆ ಕಳಿಸಿದ್ದಾರೆ. ತಬ್ಲಿಘಿ ಜಮಾತ್ ಸಂಘಟನೆಯ ಅನೇಕರು ದೆಹಲಿಯ ವಿವಿಧ ಮಸೀದಿಗಳಲ್ಲಿ ಅಡಗಿದ್ದರು.

ದೆಹಲಿಯಲ್ಲಿಯಯೇ 200 ತಬ್ಲಿಘಿ ಜಮಾತ್ ಸಂಘಟನೆಯ ಸದಸ್ಯರು ಅಡಗಿದ್ದರು ಎಂಬುದು ಪೊಲೀಸರ ವರದಿಯಿಂದ ಬಹಿರಂಗವಾಗಿದೆ. ಈ ಕಾರ್ಯಕ್ರಮದ ಕುರಿತು ಈಗಾಗಲೇ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

English summary
Delhi police in its report said that over 16,000 visited the Tablighi Jamaat's headquarters in Nizamuddin between March 13 and 24. The report has been submitted to the central and state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X