ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆಯಲ್ಲಿ ಮತ್ತೆ ಇಳಿಕೆ, ಜನಸಾಮಾನ್ಯ ಕೊಂಚ ನಿರಾಳ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಸತತ ಎಂಟನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕನಲ್ಲಿ ಕೊಂಚ ನಿರಾಳತೆಯನ್ನುಂಟು ಮಾಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕೊಂಚ ಇಳಿಕೆಯಾದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗುತ್ತಿದೆ.

ತೈಲ ದರದಲ್ಲಿ ಇಳಿಕೆ, ಗ್ರಾಹಕನ ಮೊಗದಲ್ಲಿ ಅಲ್ಪ ಚೇತರಿಕೆತೈಲ ದರದಲ್ಲಿ ಇಳಿಕೆ, ಗ್ರಾಹಕನ ಮೊಗದಲ್ಲಿ ಅಲ್ಪ ಚೇತರಿಕೆ

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80.45 ರೂ. ಇದ್ದರೆ ಡೀಸೆಲ್ ಬೆಲೆ ಲೀ.ಗೆ 75.38 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 85.93 ರೂ. ಆದರೆ, ಡೀಸೆಲ್ ಬೆಲೆ 77.96 ರೂ. ಆಗಿದೆ.

More relief to common man as fuel prices continue to decrease

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 38 ಪೈಸೆಯಷ್ಟು ಕಡಿಮೆಯಾಗಿದ್ದರೆ, ಮುಂಬೈಯಲ್ಲಿ ಪ್ರತಿ ಲೀಟರ್ ಗೆ 60 ಪೈಸೆಯಷ್ಟು ದರ ಕಡಿಮೆಯಾಗಿದೆ.

ಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ

ಸರ್ಕಾರಿ ಸ್ವಾಮ್ಯದ ತೈಲ ಕಂಫನಿಗಳು ಕಳೆದ ಕೆಲ ದಿನಗಳಿಂದ ಪೈಸೆಗಳ ಲೆಕ್ಕದಲ್ಲಿ ತೈಲ ದರವನ್ನು ಇಳಲಿಸುತ್ತಿರುವುದರಿಂದ ಕಳೆದ ಒಂದು ವಾರದಿಂದ ತೈಲ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬರುತ್ತಿದೆ.

ಗಗನಮುಖಿಯಾಗಿದ್ದ ತೈಲ ಬೆಲೆ ಸದ್ಯಕ್ಕೆ ಇಳಿಕೆ ಕಂಡುಬರುತ್ತಿರುವುದು ಜನಸಾಮಾನ್ಯನ ಮೊಗದಲ್ಲಿ ನಿರಾಳತೆಯನ್ನುಂಟು ಮಾಡಿದೆ.

English summary
Fuel prices saw a further reduction on Saturday with petrol seeing a 40 paise cut per litre while diesel registered a 35 paise fall in the capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X