ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಿಂದ ವಿವಿಧೆಡೆ ಹೆಚ್ಚುವರಿ ವಿಮಾನ : ಕೇಂದ್ರದ ಭರವಸೆ

|
Google Oneindia Kannada News

ನವದೆಹಲಿ, ಡಿಸೆಂಬರ್ 20 : ಕುವೈತ್ ಮತ್ತು ಮಂಗಳೂರು ನಡುವೆ ಸಂಚರಿಸುವ ವಿಮಾನದ ವೇಳಾಪಟ್ಟಿಯ ಸಮಸ್ಯೆಯನ್ನು ಪರಿಹರಿಸುವಂತೆ ಮತ್ತು ಮಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಹೆಚ್ಚುವರಿ ವಿಮಾನ ನೀಡುವಂತೆ ಆಗ್ರಹಿಸಿ ಕೇಂದ್ರ ವಿಮಾನ ಯಾನ ಸಚಿವರೊಂದಿಗೆ ಚರ್ಚಿಸಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ನಿಯೋಗದ ಮನವಿಗೆ ಸ್ಪಂದಿಸಿದ ಗೋವಾ ಸರ್ಕಾರಸಂಸದ ನಳಿನ್ ಕುಮಾರ್ ಕಟೀಲ್ ನಿಯೋಗದ ಮನವಿಗೆ ಸ್ಪಂದಿಸಿದ ಗೋವಾ ಸರ್ಕಾರ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ವಿಮಾನ ಯಾನ ಖಾತೆಯ ಕಾರ್ಯದರ್ಶಿ ಉಷಾ ಪಧಿ ಅವರೊಂದಿಗೆ ಚರ್ಚಿಸಿದರು. ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರ ನಿರ್ದೇಶನದಂತೆ ನಡೆದ ಈ ಸಭೆಯಲ್ಲಿ ವಿಮಾನ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾಗಳು ಭಾಗವಹಿಸಿದ್ದವು.

ಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನ ಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನ

ಸಭೆಯಲ್ಲಿ ಮಂಗಳೂರಿನಿಂದ ನವದೆಹಲಿ, ಮುಂಬೈ, ಬೆಂಗಳೂರು, ತಿರುವನಂತಪುರಂ, ಪಣಜಿ (ಗೋವಾ) ಹಾಗೂ ಪುಣೆ ಮಧ್ಯೆ ವಿಶೇಷ ವಿಮಾನ ಹೊರಡಿಸುವ ಕುರಿತು ಚರ್ಚಿಸಲಾಯಿತು. ಇದಕ್ಕೆ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ವಿಮಾನ ಸಂಸ್ಥೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

More flight service from Mangaluru to other places in India

ಇದಲ್ಲದೇ ಸಂಸದರು ಮಂಗಳೂರು-ಕುವೈತ್ ಮಧ್ಯೆ ಸಂಚರಿಸುವ ವಿಮಾನದ ವೇಳಾಪಟ್ಟಿಯ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಗಳಿಗೆ ಸೂಚಿಸಿದರು. ಸಂಸದರ ಸೂಚನೆಗೆ ಸ್ಪಂದಿಸಿರುವ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿದ್ದಾರೆ.

English summary
Dakshina Kannada MP Nalin Kumar Kateel met Union Civil Aviation secretary Usha Padhee to provide more flight service from Mangaluru to other places in India and also to fix flight timetable problem between Mangaluru and Kuwait. Indigo, Air India and Spicejet officials attended the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X