ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಭೂಕಂಪ! ಇದು ರಾಹುಲ್ ಗಾಂಧಿ ಭಾಷಣದ ಎಫೆಕ್ಟ್!

|
Google Oneindia Kannada News

Recommended Video

Monsoon Session in Parliament : ರಾಹುಲ್ ಗಾಂಧಿ ಭಾಷಣವನ್ನ ಭೂಕಂಪಕ್ಕೆ ಹೋಲಿಸಿದ ಟ್ವಿಟ್ಟಿಗರು|Oneindia Kannada

ನವದೆಹಲಿ, ಜುಲೈ 20: "ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಭೂಕಂಪಾನಾ..? ಅಯ್ಯೋ ದೇವರೇ... ಸಮಸ್ತ ಭಾರತೀಯರ ಶಕ್ತಿಕೇಂದ್ರ ಸಂಸತ್ತು ನಡುಗಿಬಿಡುತ್ತಾ...?! ಇದು ಆ ಭೂಕಂಪವಲ್ಲ ಮಾರ್ರೆ.., ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತಿನ ಭೂಕಂಪ!

"ಭೂಕಂಪ್ ಆನೇ ವಾಲಾ ಹೇ(#BhookampAaneWalaHai )" ಹ್ಯಾಶ್ ಟ್ಯಾಗ್ ಇದೀಗ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ರಾಹುಲ್ ಗಾಂಧಿ ಅವರನ್ನು ಸಖತ್ತಾಗಿ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಈ ಭೂಕಂಪಕ್ಕೂ, ಮುಂಗಾರು ಅಧಿವೇಶನಕ್ಕೂ, ರಾಹುಲ್ ಗಾಂಧಿ ಅವರಿಗೂ ಏನು ಸಂಬಂಧ?"

ಅವಿಶ್ವಾಸ ನಿರ್ಣಯ LIVE: ಯುಪಿಎ vs ಎನ್ಡಿಎ ಬಲಾಬಲದ ಪರೀಕ್ಷೆ ಅವಿಶ್ವಾಸ ನಿರ್ಣಯ LIVE: ಯುಪಿಎ vs ಎನ್ಡಿಎ ಬಲಾಬಲದ ಪರೀಕ್ಷೆ

ಅದು 2016 ರ ಅಪನಗದೀಕರಣದ ಸಮಯ. ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ 'ನೋಟ್ ಬ್ಯಾನ್ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗಿಬಿಡುತ್ತದೆ' ಎಂಬ ಹೇಳಿಕೆ ನೀಡಿದ್ದರು. ಅಪನಗದೀಕರಣದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು 'ಭೂಕಂಪ' ಎಂಬ ಪದಪ್ರಯೋಗ ಮಾಡಿದ್ದ ರಾಹುಲ್ ಗಾಂಧಿ ಆಗಲೂ ನಗೆಪಾಟಲಾಗಿದ್ದರು ಎಂಬುದು ಬೇರೆ ಮಾತು. ಆದರೆ ಇದೀಗ ಅವಿಶ್ವಾಸ ನಿರ್ಣಯದ ಹೊತ್ತಲ್ಲಿ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಟ್ವಿಟ್ಟಿಗರು ಅವರನ್ನು ಮತ್ತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

BhookampAaneWalaHai ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ಆಗಿದೆ.

ಭೂಕಂಪಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ!

ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಭೂಕಂಪಕ್ಕಾಗಿ ನಾವೆಲ್ಲ ಕಾತರದಿಂದ ಕಾಯುತ್ತಿದ್ದೇವೆ. ಇದಕ್ಕೆ ಕಾರಣ ರಾಹುಲ್ ಗಾಂಧಿ ಎಂದು ಟ್ವೀಟ್ ಮಾಡಿದ್ದಾರೆ ದೀಪಕ್ ಅರೋರಾ.

ಅವಿಶ್ವಾಸ ನಿರ್ಣಯ : ಲೋಕಸಭೆಯಲ್ಲಿ ಸಂಭವಿಸಲಿದೆಯಾ 'ಭೂಕಂಪ'? ಅವಿಶ್ವಾಸ ನಿರ್ಣಯ : ಲೋಕಸಭೆಯಲ್ಲಿ ಸಂಭವಿಸಲಿದೆಯಾ 'ಭೂಕಂಪ'?

ರಾಕಿಂಗ್ ನ್ಯೂಸ್

ರಾಕಿಂಗ್ ನ್ಯೂಸ್: ಇಂದು ದೆಹಲಿಯಲ್ಲಿ ಭೂಕಂಪ ಸಂಭವ. ಭೂಕಂಪ ಕೇಂದ್ರ ಸಂಸತ್ತು! ಕಂಪನದ ಅನುಭವ ಇಡೀ ಭಾರತಕ್ಕೂ ಆಗಲಿದೆ.

ಕಾರಣ: ರಾಹುಲ್ ಗಾಂಧಿ ಅವರು ಅರ್ಧ ಗಂಟೆಯ ಕಾಲ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ ಎಂದಿದ್ದಾರೆ ಪ್ರಸೂನ್ ತಿವಾರಿ.

ಇದೀಗ ಹವಾಮಾನ ಮುನ್ಸೂಚನೆ..!

ಹವಾಮಾನ ಮುನ್ಸೂಚನೆ: ನನ್ನ ಎಲ್ಲಾ ದೇಶಬಾಂಧವರಲ್ಲೂ ಒಂದು ವಿನಂತಿ. ದಯವಿಟ್ಟು ಎಲ್ಲರೂ ಎಚ್ಚರಿಕೆಯಿಂದಿರಿ. ಇಂದು ಬಿರುಗಾಳಿ, ಚಂಡಮಾರುತ, ಗುಡುಗು, ಸಿಡಿಲು ಆರಂಭವಾಗುತ್ತದೆ. ಏಕೆಂದರೆ ಒಬ್ಬ ಅತ್ಯುತ್ತಮ ವಾಗ್ಮಿ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ ಎಂದಿದ್ದಾರೆ ಸಂಜೀವ್ ಜೈನ್.

ಆಕಾಶದಲ್ಲೂ ಭೂಕಂಪದ ಎಫೆಕ್ಟ್!

ಹವಾಮಾನ ಇಲಾಖೆಯಿಂದ ಈಗಷ್ಟೇ ಮಾಹಿತಿ ಬಂತು. ಇಂದಿನ ಭೂಕಂಪದ ಪರಿಣಾಮ ಭೂಮಿಗಷ್ಟೇ ಅಲ್ಲ, ಆಕಾಶಕ್ಕೂ ಆಗಬಹುದಂತೆ. ಅದಕ್ಕೇ ವಿಮಾನದಲ್ಲಿ ಓಡಾಡುವವರು ಮರೆಯದೇ ಸೀಟ್ ಬೆಲ್ಟ್ ಧರಿಸಿ ಎಂದಿದ್ದಾರೆ ಶಿರಿಶ್ ಸ್ವರಾಜ್.

English summary
Monsoon Session 2018: Ruling BJP led NDA government will be facing No-confidence motion in parliament. As Congress president Rahul Gandhi is expected to speak on No-confidence motion, BhookampAaneWalaHai hashtag is trending on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X