ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಶ್ವಾಸ ನಿರ್ಣಯ: ಲೋಕಸಭೆಗೆ ಹಾಜರಾಗದೆ ತಟಸ್ಥವಾಗುಳಿದ ಶಿವಸೇನಾ

|
Google Oneindia Kannada News

ನವದೆಹಲಿ, ಜುಲೈ 20: ಬಿಜೆಪಿ ನೇತೃತ್ವದ ಕೇಂದ್ರ ಎನ್ ಡಿಎ ಮೈತ್ರಿಕೂಟದ ಸರ್ಕಾರದ ವಿರುದ್ಧ ಇಂದು ಮಂಡನೆಯಾಗುತ್ತಿರುವ ಅವಿಶ್ವಾಸ ನಿರ್ಣಯಕ್ಕೆ ಶಿವಸೇನೆ ತಟಸ್ಥವಾಗಿರಲು ನಿರ್ಧರಿಸಿದೆ.

ಅವಿಶ್ವಾಸ ನಿರ್ಣಯ LIVE: ಇದು ಮೋದಿ ಆಡಳಿತ ವಿರುದ್ಧ ಧರ್ಮಯುದ್ಧ ಅವಿಶ್ವಾಸ ನಿರ್ಣಯ LIVE: ಇದು ಮೋದಿ ಆಡಳಿತ ವಿರುದ್ಧ ಧರ್ಮಯುದ್ಧ

ಆ ಕಾರಣದಿಂದಲೇ ಇಂದು ಲೋಕಸಭೆಗೇ ಹಾಜರಾಗದೆ, ಹಾಜರಿ ಪಟ್ಟಿಯಲ್ಲೂ ಸಹಿ ಮಾಡದೆ ಅದು ತನ್ನ ನಿಲುವನ್ನು ಈ ರೀತಿ ಸ್ಪಷ್ಟಪಡಿಸಿದೆ.

Monsoon Session: No confidence motion: Shiv Sena will not attend Lok Sabha

ಮುಂಗಾರು ಅಧಿವೇಶನಕ್ಕೂ ಮುನ್ನ, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವ ವಿಪಕ್ಷಗಳಿಗೆ ಶಿವಸೇನಾ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ಗೊಂದಲದಲ್ಲೇ ಇತ್ತು. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಿವಸೇನಾ ಮುಖಂಡರನ್ನು ಬೇಟಿ ಮಾಡಿ ಮಾತನಾಡಿದ ನಂತರ ಶಿವಸೇನಾ, ಎನ್ ಡಿಎಯನ್ನು ಬೆಂಬಲಿಸುತ್ತದೆ ಎನ್ನಲಾಗಿತ್ತು.

ಸಂಸತ್ತಿನಲ್ಲಿ ಭೂಕಂಪ! ಇದು ರಾಹುಲ್ ಗಾಂಧಿ ಭಾಷಣದ ಎಫೆಕ್ಟ್! ಸಂಸತ್ತಿನಲ್ಲಿ ಭೂಕಂಪ! ಇದು ರಾಹುಲ್ ಗಾಂಧಿ ಭಾಷಣದ ಎಫೆಕ್ಟ್!

ಆದರೆ ಇದುವರೆಗೂ ತನ್ನ ಅಧಿಕೃತ ನಿರ್ಧಾರವನ್ನು ಶಿವಸೇನಾ ತಿಳಿಸಿರಲಿಲ್ಲ. ಅಧಿವೇಶನ ಆರಂಭಕ್ಕೂ ಮುನ್ನ ಸಭೆ ನಡೆಸಿದ ಶಿವಸೇನಾ ಮುಖಂಡರು ಅಧಿವೇಶನಕ್ಕೆ ಹಾಜರಾಗದೆ ತಮ್ಮ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಶಿವಸೇನೆಯಿಂದ 2014 ರ ಲೋಕಸಭಾ ಚುನಾವಣೆಯಲ್ಲಿ 18 ಸಂಸದರು ಆಯ್ಕೆಯಾಗಿದ್ದರು.

English summary
Monsoon Session: No confidence motion against BJP led NDA government. Shiv sena will not attend Lok Sabha today, sources said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X