ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನ: ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು

|
Google Oneindia Kannada News

ನವದೆಹಲಿ, ಜುಲೈ 18: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಮುಂಗಾರು ಅಧಿವೇಶನ ಇಡೀ ದೇಶದ ಗಮನ ಸೆಳೆದಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ(ಜು.18) ಆರಂಭವಾಗಲಿದ್ದು, ಆಗಸ್ಟ್ 10 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ 40 ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಲಿದ್ದು, ಇವುಗಳಲ್ಲಿ ತ್ರಿವಳಿ ತಲಾಖ್, ಒಬಿಸಿ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ, ವೈದ್ಯಕೀಯ ಶಿಕ್ಷಣದ ರಾಷ್ಟ್ರೀಯ ಆಯೋಗ ಮಸೂದೆ ಮುಂತಾದವು ಸೇರಿವೆ.

ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಉಪಾಧ್ಯಕ್ಷರ ಆಯ್ಕೆ ಕುತೂಹಲ!ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಉಪಾಧ್ಯಕ್ಷರ ಆಯ್ಕೆ ಕುತೂಹಲ!

ಮುಂಗಾರು ಅಧಿವೇಶನಕ್ಕೂ ಮುನ್ನ ನಿನ್ನೆ(ಜು.17) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನವದೆಹಲಿಯಲ್ಲಿ ನಡೆದಿದೆ. ಇಂದಿನಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು ಯಾವವು ಎಂಬ ಪಟ್ಟಿ ಇಲ್ಲಿದೆ.

123ನೇ ಸಾಂವಿಧಾನಿಕ ತಿದ್ದುಪಡಿ ವಿಧೇಯಕ- 2017

123ನೇ ಸಾಂವಿಧಾನಿಕ ತಿದ್ದುಪಡಿ ವಿಧೇಯಕ- 2017

123 ನೇ ಸಾಂವಿಧಾನಿಕ ತಿದ್ದುಪಡಿ ವಿದೇಯಕ ಮಂಡನೆಯಾಗಲಿದ್ದು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ಇದಾಗಿದೆ.

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಸಂವಿಧಾನ(ಪರಿಶಿಷ್ಟ ಜಾತಿ ಮತ್ತು ಪಂಗಡ) ಆರ್ಡರ್ಸ್ (ತಿದ್ದುಪಡಿ) ಮಸೂದೆ-2016

ಸಂವಿಧಾನ(ಪರಿಶಿಷ್ಟ ಜಾತಿ ಮತ್ತು ಪಂಗಡ) ಆರ್ಡರ್ಸ್ (ತಿದ್ದುಪಡಿ) ಮಸೂದೆ-2016

ಜಾರ್ಖಂಡದ ಭೊಗಾತ ಸಮುದಾಯವನ್ನು ಪರಿಶಿಷ್ಟ ಜಾತಿಯಿಂದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ದಿ ಕಾನ್ಸ್ಟಿಟ್ಯೂಶ್ನಲ್ ಆರ್ಡರ್ಸ್ ಮಸೂದೆ (ಪರಿಶಿಷ್ಟ ಜಾತಿ ಮತ್ತು ಪಂಗಡ) ಇದಾಗಿದೆ. ಈ ಮಸೂದೆಯಲ್ಲಿ ಅಸ್ಸಾಂ, ಛತ್ತೀಸ್ ಗಢ, ಜಾರ್ಖಂಡ್, ತಮಿಳುನಾಡು ಮತ್ತು ತ್ರಿಪುರದ ಹಲವು ಪರಿಶಿಷ್ಟ ಪಂಗಡವನ್ನೂ ಸೇರಿಸುವ ಪ್ರಸ್ತಾಪವೂ ಇದೆ.

ಮುಸ್ಲಿಂ ಮಹಿಳೆಯರ ರಕ್ಷಣಾ ಮಸೂದೆ(ವಿವಾಹ ಹಕ್ಕಿನ ರಕ್ಷಣೆ) -2017

ಮುಸ್ಲಿಂ ಮಹಿಳೆಯರ ರಕ್ಷಣಾ ಮಸೂದೆ(ವಿವಾಹ ಹಕ್ಕಿನ ರಕ್ಷಣೆ) -2017

ಮುಸ್ಲಿಂ ಮಹಿಳೆಯರ ರಕ್ಷಣಾ ಮಸೂದೆ(ವಿವಾಹ ಹಕ್ಕಿನ ರಕ್ಷಣೆ) ಅತ್ಯಂತ ಚರ್ಚೆಗೆ ಈಡಾದ ಮಸೂದೆ. ತ್ರಿವಳಿ ತಲಾಖ್ ಅನ್ನು ಕಾನೂನು ಬಾಹಿರ ಎನ್ನುವ ಈ ಮಸೂದೆ ಸಹ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ತ್ರಿವಳಿ ತಲಾಖ್ ಕಾನೂನು ಬಾಹಿರ ಎಂಬುದನ್ನು ಸುಪ್ರೀಂ ಕೋರ್ಟ್ ಸಹ ಇತ್ತೀಚೆಗೆ ಒಪ್ಪಿಕೊಂಡಿತ್ತು.

ಬಾಡಿಗೆ ತಾಯ್ತನ(ನಿಯಂತ್ರಣ)ದ ಮಸೂದೆ -2016

ಬಾಡಿಗೆ ತಾಯ್ತನ(ನಿಯಂತ್ರಣ)ದ ಮಸೂದೆ -2016

ಬಾಡಿಗೆ ತಾಯ್ತನ(ನಿಯಂತ್ರಣ)ದ ಮಸೂದೆ ನವೆಂಬರ್ 2016 ರಿಂದ ಮಂಡನೆಯಾಗದೆ ಕೂತಿದೆ. ಈ ಮಸೂದೆಯ ಪ್ರಕಾರ ಮಕ್ಕಳನ್ನು ಹೊಂದಲಾಗದ ತಂದೆ ತಾಯಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯಬಹುದು.

ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ-2017

ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ-2017

2017 ರಲ್ಲೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಚರ್ಚೆಗೆ ಬಂದಿತ್ತಾದರೂ ಈ ಕುರಿತು ಯಾವುದೇ ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಭಾರತದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಕೆಲವು ಬದಲಾವಣೆಯನ್ನು ತಂದು, 83 ವರ್ಷ ಹಳೆಯ ವೈದ್ಯಕೀಯ ಕೌನ್ಸಿಲ್ ಅನ್ನು ಬದಲಿಸುವ ವಿಧೇಯಕ ಇದಾಗಿದೆ.

ಮಂಡನೆಯಾಗಲಿರುವ ಇತರ ಪ್ರಮುಖ ಮಸೂದೆಗಳು

ಮಂಡನೆಯಾಗಲಿರುವ ಇತರ ಪ್ರಮುಖ ಮಸೂದೆಗಳು

* ತೃತಿಯ ಲಿಂಗಿಗಳ(ಹಕ್ಕು ರಕ್ಷಣೆ) ಮಸೂದೆ-2016
* ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2017
* ಸರಕು ಮತ್ತು ಸೇವಾ ತೆರಿಗೆ ಕಾನೂನಿನಲ್ಲಿ ತಿದ್ದುಪಡಿ ಮಸೂದೆ-2018
* ಅತೀ ಸಣ್ಣ, ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಮಸೂದೆ-2018
* ಅನ್ ರೆಗ್ಯುಲೇಟೆಡ್ ಡೆಪಾಸಿಟ್ ಯೋಜನೆಯ ನಿಷೇಧ ಮಸೂದೆ-2018
* ದಿ ನೆಗೋಶಿಯೇಬಲ್ ಇನ್ಶುರೆನ್ಸ್ (ತಿದ್ದುಪಡಿ) ಮಸೂದೆ-2017
* ಗ್ರಾಹಕ ರಕ್ಷಣಾ ಕಾಯ್ದೆ-2018
* ಜನ ಪ್ರತಿನಿಧಿತ್ವ (ತಿದ್ದುಪಡಿ)ಮಸೂದೆ-2018
* ಆರ್ಥಿಕ ದೇಶಭ್ರಷ್ಟ(fugitive) ಅಪರಾಧಿ ಮಸೂದೆ-2018
* ಮೋಟಾರ್ ವಾಹನ(ತಿದ್ದುಪಡಿ) ಮಸೂದೆ-2017 ಮುಂತಾದ 40 ಕ್ಕೂ ಹೆಚ್ಚು ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿವೆ.

English summary
Monsoon session 2018 starts from July 18 and continues till August 10. More than 40 bills to be passed in this session. Triple talaq, National medical commission bill others are among them. Here are the list of important bills which will be passed in this session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X