ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?

|
Google Oneindia Kannada News

Recommended Video

ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಅಪ್ಪಿಕೊಂಡ ರಾಹುಲ್ ಗಾಂಧಿ ಬಗ್ಗೆ ಗಣ್ಯರು ಏನಂತಾರೆ? | Oneindia Kannada

ನವದೆಹಲಿ, ಜುಲೈ 20: 'ಮೊಮೆಂಟ್ ಆಫ್ ದಿ ಮಾನ್ಸೂನ್ ಸೆಶನ್' ಯಾವುದು ಎಂದು ಕೇಳಿದರೆ ಥಟ್ ಅಂತ ಹೊಳೆಯುವ ಉತ್ತರ, 'ಅಪ್ಪುಗೆ ಮತ್ತು ಕಣ್ಣು ಮಿಟುಕಿಸಿದ್ದು!'

ರಾಹುಲ್ ಗಾಂಧಿಯವರ ಈ ವರ್ತನೆಯನ್ನು ಬಿಜೆಪಿ ಮುಖಂಡರು ಟೀಕಿಸಿ, ಇದೊಂದು ಬಾಲಿಶ ವರ್ತನೆ ಎಂದಿದ್ದರೆ, ರಾಹುಲ್ ಗಾಂಧಿ ತಮ್ಮ ರಾಜಕೀಯ ಶತ್ರುವನ್ನೂ ಪ್ರೀತಿಸುತ್ತಾರೆ ಎಂದು ಅವರ ಅಭಿಮಾನಿಗಳು ಹೊಗಳಿಕೆಯ ಮಹಾಪೂರ ಸುರಿಸಿದ್ದಾರೆ.

ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!

ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟರು. ನಂತರ ಮೋದಿಯವರನ್ನು ಅಪ್ಪಿಕೊಂಡು ತಾವು ಎಲ್ಲರನ್ನೂ ಪ್ರೀತಿಸುವುದಾಗಿ ಹೇಳಿದರು. ಅದಾದ ಕೆಲವೇ ಹೊತ್ತಲ್ಲಿ ಕಣ್ಮಿಟುಕಿಸಿ ನಕ್ಕರು. ಈ ಎಲ್ಲಾ ಪ್ರಹಸನ ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಹುಲ್ ಗಾಂಧಿಯವರ ಅಪ್ಪುಗೆಯನ್ನು ಪ್ರಬುದ್ಧತೆ ಎಂದು ಕರೆದವರೆ, ಅವರ ಕಣ್ಣೇಟನ್ನು ಬಾಲಿಶತನ ಎಂದು ಕರೆಯುವಂತಾಯಿತು.

ಈ ಕುರಿತು ಗಣ್ಯರ ಪ್ರತಿಕ್ರಿಯೆ ಏನು? ಓದಿ...

ಇದೊಂದು ಬಾಲಿಶ ವರ್ತನೆ

ಇದೊಂದು ಬಾಲಿಶ ವರ್ತನೆ

ರಾಹುಲ್ ಗಾಂಧಿ ಅವರ ವರ್ತನೆ ನಿಜಕ್ಕೂ ಬಾಲಿಶ. ಅವರಿಗೆ ವಯಸ್ಸಾಗಿದೆ, ಆದರೆ ಪ್ರಬುದ್ಧತೆ ಇಲ್ಲ. ಕಾಂಗ್ರೆಸ್ಸಿನ ಅಧ್ಯಕ್ಷರು ಇಷ್ಟೆಲ್ಲ ಅಪ್ರಬುದ್ಧ ಮತ್ತು ತಿಳಿವಳಿಕೆ ಇಲ್ಲದವರು ಎಂಬುದು ನಿಜಕ್ಕೂ ದುರದೃಷ್ಟ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

Array

ಚೆನ್ನಾಗಿ ಪಾಠ ಕಲಿಸಿದ್ದೀರಿ!

ಆಹ್ಹಾ! ಎಂಥ ಕಣ್ಣೇಟು! ಚೆನ್ನಾಗಿ ಪಾಠ ಕಲಿಸಿದ್ದೀರಿ. ಬಿಜೆಪಿಯವರ ಸುಳ್ಳನ್ನು ತೋರಿಸಿಕೊಟ್ತಿದ್ದಕ್ಕೆ ಅಭಿನಂದನೆಗಳು. ನಿಮ್ಮ ಭಾಷಣ ಅತ್ಯದ್ಭುತ ಎಂದಿದ್ದಾರೆ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್.

ಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿ

ರಾಹುಲ್ ಗಾಂಧಿ ಬಾಲಿವುಡ್ಡಿಗೆ ಹೋಗಬೇಕು!

ರಾಹುಲ್ ಗಾಂಧಿ ಬಾಲಿವುಡ್ಡಿಗೆ ಹೋಗಬೇಕು!

ರಾಹುಲ್ ಗಾಂಧಿ ಅವರಿಗೆ ನಾಚಿಕೆಯಾಗಬೇಕು. ಅವರು ಯಾವ ಸಾಕ್ಷಿಯಿಲ್ಲದೆ ನಮ್ಮ ಸಚಿವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಅವರು ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡು ನಾಟಕ ಮಾಡಿದ್ದಾರೆ. ನನ್ನ ಪ್ರಕಾರ ಅವರ ಮುಂದಿನ ಹೆಜ್ಜೆ ಬಾಲಿವುಡ್ ಅನ್ನಿಸುತ್ತದೆ! ನಾವು ಅವರನ್ನು ಅಲ್ಲಿಗೇ ಕಳಿಸಬೇಕು ಎಂದು ಬಿಜೆಪಿ ಸಂಸದೆ ಕಿರಣ್ ಖೇರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಗೆದ್ದಿದ್ದಾರೆ!

ಇದು ಇಲ್ಲಿಗೇ ಮುಗಿಯಲಿ. ಏಕೆಂದರೆ ಒಬ್ಬರು ನರೇಂದ್ರ ಮೋದಿ ಅವರನ್ನು ಸೋಲಿಸಿದ್ದಾರೆ. ಇದು ನಿಜಕ್ಕೂ ಅತ್ಯುತ್ತಮ ನಡೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೆದ್ದಿದ್ದಾರೆ ಎಂದಿದ್ದಾರೆ ಮುಸ್ಲಿಂ ಮುಖಂಡ ಇಯಾದ್ ಎಲ್ ಬಗಾಡಿ.

ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ

ಸಂಸತ್ತಿನಲ್ಲಿ ನಾಟಕ ಮಾಡಿದ ರಾಹುಲ್!

ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಅಪ್ಪಿಕೊಳ್ಳುವ ಮೂಲಕ ಇಡೀ ದೇಶದ ಗಮನ ಸೆಳೆದು ಸಂಸತ್ತಿನಲ್ಲಿ ನಾಟಕ ಮಾಡಿದರು. ನಂತರ 353 ರ ನಿಯಮವನ್ನು ಮುರಿದು ಸುಳ್ಳು ಆರೋಪಗಳನ್ನು ಮಾಡಿದರು ಎಂದಿದ್ದಾರೆ ಸಂಸದ ಪ್ರಲ್ಹಾದ್ ಜೋಶಿ.

Array

ಇದೊಂದು ಐತಿಹಾಸಿಕ ಘಳಿಗೆ

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಭಾಷಣ ಐತಿಹಾಸಿಕ. ತಮ್ಮ ಮಾತಿನ ಮೂಲಕ ಅವರು ಬಿಜೆಪಿಯ ಸಾಚಾತನವನ್ನು ತೋರಿಸಿಕೊಟ್ಟಿದ್ದಾರೆ. ಅವರ ಅಪ್ಪುಗೆಯ ಅರ್ಥ, ರಾಜಕೀಯ ವಿರೋಧದ ಹೊರತಾಗಿಯೂ ಪರಸ್ಪರರನ್ನು ಗೌರವಿಸುವುದು, ಮತ್ತು ಸಹಕಾರಕ್ಕೆ ಪ್ರೋತ್ಸಾಹ ನೀಡುವುದು ಎಂದಿದ್ದಾರೆ ಕಾಂಗ್ರೆಸ್ ಸಂಸದ ರಾಜೀವ್ ಸತವ್ .

ರಾಹುಲ್ ಪ್ರಧಾನಿಯಾದರೆ ಏನು ಕತೆ?

ಒಬ್ಬ ಸಂಸದರಾಗಿ, ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಹೀಗೆ ವರ್ತಿಸಿದರೆ ಇನ್ನು ಅವರೇನಾದರೂ ಈ ದೇಶದ ಪ್ರಧಾನಿಯಾಗಿಬಿಟ್ಟರೆ ಏನು ಕತೆ? ಎಂದು ಪ್ರಶ್ನಿಸಿದ್ದಾರೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ.

English summary
Monsoon session 2018: No confidence motion against BJP led NDA government by Congress led opposition parties. Here is leaders' reaction on Rahul Gandhi's hug and wink gesture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X