ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ತುಂಬಾ 'ರಾಧೆ' ಸದ್ದು ಮೊಳಗಿಸಿದ ಹೇಮಾ ಮಾಲಿನಿ

|
Google Oneindia Kannada News

ನವದೆಹಲಿ, ಜೂನ್ 18: ಮಳೆಗಾಲದ ಅಧಿವೇಶನದ ಎರಡನೆಯ ದಿನವಾದ ಮಂಗಳವಾರ ಕೂಡ ಅನೇಕ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನದ ವೇಳೆ ಜೈ ಶ್ರೀರಾಂ ಮಂತ್ರ, ವಂದೇ ಮಾತರಂ ಘೋಷಣೆಯಂತಹ ಘಟನೆಗಳು ನಡೆದವು.

ಇವುಗಳ ನಡುವೆ ಎರಡನೆಯ ಬಾರಿಗೆ ಸಂಸದೆಯಾಗಿ ಆಯ್ಕೆಯಾದ ಹೇಮಾ ಮಾಲಿನಿ ಅವರ ಪ್ರಮಾಣ ವಚನ ಕೂಡ ಗಮನ ಸೆಳೆಯಿತು. ಮಥುರಾ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಹೇಮಾ ಮಾಲಿನಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ಸಿನ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧುರಿ ಕಾಂಗ್ರೆಸ್ಸಿನ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧುರಿ

ಬಾಲಿವುಡ್‌ನ ಡ್ರೀಮ್ ಗರ್ಲ್ ತಮ್ಮ ಪ್ರಮಾಣ ವಚನವನ್ನು ಅಂತ್ಯಗೊಳಿಸಿದ್ದು 'ರಾಧೆ ರಾಧೆ! ಕೃಷ್ಣಂ ವಂದೇ ಜಗದ್ಗುರು' ಎಂದು. ಅವರ ಪ್ರಮಾಣ ವಚನ ಸ್ವೀಕಾರ ಮುಗಿಯುತ್ತಿದ್ದಂತೆಯೇ ಬಿಜೆಪಿ ಸಂಸದರು ಮೇಜು ಕುಟ್ಟಿ 'ರಾಧೆ ರಾಧೆ' ಎಂದು ಜಪಿಸಿದರು.

monsoon session hema malini radhe oath

ಇಡೀ ಸದನದಲ್ಲಿ 'ರಾಧೆ' ಪದ ಪ್ರತಿಧ್ವನಿಸಿತು. ಈ ವೇಳೆ ಬಿಜೆಪಿ ಸಂಸದರ ಮುಖದಲ್ಲಿ ನಗು ಮೂಡಿತ್ತು.

ಪ್ರಮಾಣವಚನದ ಬಳಿಕ ಅನಂತ್ ಕುಮಾರ್ ನೆನೆದ ಪ್ರತಾಪ್ ಸಿಂಹ ಪ್ರಮಾಣವಚನದ ಬಳಿಕ ಅನಂತ್ ಕುಮಾರ್ ನೆನೆದ ಪ್ರತಾಪ್ ಸಿಂಹ

ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಹೇಮಾ ಮಾಲಿನಿ ಸತತ ಎರಡನೆಯ ಬಾರಿಗೆ ಗೆದ್ದಿದ್ದರು. ಆರ್‌ಎಲ್‌ಡಿಯ ನರೇಂದ್ರ ಸಿಂಗ್ ಮತ್ತು ಕಾಂಗ್ರೆಸ್‌ನ ಮಹೇಶ್ ಪಾಠಕ್ ವಿರುದ್ಧ ಅವರು ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಹೇಮಾ ಮಾಲಿನಿ ಅವರು ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.

ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಹೇಮಾ ಮಾಲಿನಿ ಅವರ ಮಲಮಗ ಸನ್ನಿ ಡಿಯೋಲ್ ಕೂಡ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.

English summary
BJP MP's chanted Radhe Radhe! after Hema Malini took oath as MP in Lok Sabha on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X