ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿನ ಸದ್ದು!

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಕಣ್ಣೀರು ಲೋಕಸಭೆಯಲ್ಲೂ ಜಗಜ್ಜಾಹೀರು | Oneindia Kannada

ನವದೆಹಲಿ, ಜುಲೈ 20: ಎಚ್ ಡಿ ಕುಮಾರಸ್ವಾಮಿಯವರ ಕಣ್ಣೀರು ಕರ್ನಾಟಕದ ಗಡಿಯನ್ನೂ ದಾಟಿ, ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ!

ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳು ಸಿದ್ಧವಾಗಿವೆ. ಈ ಸಂದರ್ಭದಲ್ಲಿ ಟಿಡಿಪಿ ಸಂಸದ ಜಯದೇವ್ ಗಲ್ಲಾ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಉತ್ತರಿಸುತ್ತಿದ್ದ ಬಿಜೆಪಿ ಸಂಸದ ರಾಕೇಶ್ ಸಿಂಗ್, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಹೆಸರನ್ನು ಪ್ರಸ್ತಾಪಿಸಿದರು.

ಅವಿಶ್ವಾಸ ನಿರ್ಣಯ LIVE: ಮೋದಿ 'ಮೋಸಗಾಡು' ಎಂದ ಜಯದೇವ್ ವಿರುದ್ಧ ನಿರ್ಮಲಾ ಕಿಡಿಅವಿಶ್ವಾಸ ನಿರ್ಣಯ LIVE: ಮೋದಿ 'ಮೋಸಗಾಡು' ಎಂದ ಜಯದೇವ್ ವಿರುದ್ಧ ನಿರ್ಮಲಾ ಕಿಡಿ

"ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದನ್ನು ಇಡೀ ದೇಶವೂ ನೋಡಿದೆ. ಕಾಂಗ್ರೆಸ್ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡ ಪರಿಣಾಮ ಅದು. ಕಾಂಗ್ರೆಸ್ ಗೆ ಬೆಂಬಲ ನೀಡಿ ಇನ್ನೆಷ್ಟು ಪಕ್ಷಗಳು ವಿಷ ಸೇವಿಸಬೇಕೋ" ಎಂದು ರಾಕೇಶ್ ಸಿಂಗ್ ಹೇಳಿದರು.

Monsoon session: BJP MP Rakesh CM HD Kumaraswamy in his speech.

ಇದೇ ಸಂದರ್ಭದಲ್ಲಿ ಹಲವು ದಶಕಗಳಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿದ ಭ್ರಷ್ಟಾಚಾರದ ಬಗ್ಗೆ ಅವರು ಮಾತನಾಡಿದರು. ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ, 'ಆ(ಕಾಂಗ್ರೆಸ್) ಪಕ್ಷವನ್ನು ಇಷ್ಟೆಲ್ಲ ಸಮರ್ಥಿಸಿಕೊಂಡರೂ ನಿಮಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ' ಎಂದು ಟಾಂಗ್ ನೀಡಿದರು! ಈ ಸಸಂದರ್ಭದಲ್ಲಿ ಕೆಲಕಾಲ ಅಧಿವೇಶನದಲ್ಲಿ ಗಲಾಟೆ ಎದ್ದಿತ್ತು.

ಅತ್ತಿದ್ದು ಕಾಂಗ್ರೆಸ್‌ನಿಂದಲ್ಲ, ಅದು ಮಾಧ್ಯಮಗಳ ಸೃಷ್ಟಿಯಷ್ಟೆ: ಕುಮಾರಸ್ವಾಮಿಅತ್ತಿದ್ದು ಕಾಂಗ್ರೆಸ್‌ನಿಂದಲ್ಲ, ಅದು ಮಾಧ್ಯಮಗಳ ಸೃಷ್ಟಿಯಷ್ಟೆ: ಕುಮಾರಸ್ವಾಮಿ

ಮೋದಿ ಸರ್ಕಾರದ ಯಶಸ್ವೀ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ರಾಕೇಶ್ ಸಿಂಗ್, ಕಳೆದ ನಾಲ್ಕು ವರ್ಷದಿಂದ ನಾವು ಸ್ವಚ್ಛ ಮತ್ತು ಜನಪರ ಆಡಳಿತ ನೀಡಿದ್ದೇವೆಂದು ಹೆಮ್ಮೆಯಿಂದ ಹೇಳಬಲ್ಲೆ ಎಂದರು.

ತಾಯಿಯನ್ನು ಬದುಕಿಸದಿದ್ದರೆ ಬಿಜೆಪಿಗೆ ಶಾಪ : ಮೋದಿ ಮೇಲೆ ವಾಗ್ದಾಳಿತಾಯಿಯನ್ನು ಬದುಕಿಸದಿದ್ದರೆ ಬಿಜೆಪಿಗೆ ಶಾಪ : ಮೋದಿ ಮೇಲೆ ವಾಗ್ದಾಳಿ

ರಾಕೇಶ್ ಸಿಂಗ್ ಅವರ ಭಾಷಣದ ಮುಖ್ಯಾಂಶ ಇಲ್ಲಿದೆ:

* ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇರವುದು ಅಲ್ಪಸಂಖ್ಯಾತರಿಗೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಬಡವರಿಗೆ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ ಎಂದರು- ರಾಕೇಶ್ ಸಿಂಗ್

* ಅಸಹನೆ ಮತ್ತು ಹತಾಶೆಯೇ ಈ ಅವಿಶ್ವಾಸ ನಿರ್ಣಯಕ್ಕೆ ಮೊದಲ ಕಾರಣ- ರಾಕೇಶ್ ಸಿಂಗ್

* ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಹೊಸ ದೃಷ್ಟಿ ನೀಡಿದ್ದಾರೆ- ರಾಕೇಶ್ ಸಿಂಗ್
* ಮುಂದಿನ ಅವಧಿಯಲ್ಲೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ- ರಾಕೇಶ್ ಸಿಂಗ್
* ಮೋದಿ ಸರ್ಕಾರ ಭ್ರಷ್ಟಾಚಾರದ ಜಾಗದಲ್ಲಿ ಪ್ರಾಮಾಣಿಕತೆಯನ್ನು ತಂದಿದೆ- ರಾಕೇಶ್ ಸಿಂಗ್

* ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಸೇರಿದಂತೆ ಇತರ ಹಲವು ರಾಜ್ಯಗಳು ಶೀಘ್ರ ಅಭಿವೃದ್ಧಿ ಹೊಂದಿವೆ.

English summary
Monsoon Session 2018: No confidence motion against BJP led NDA government by Congress led opposition parties. BJP MP Rakesh Singh mentions Karnataka Chief minister HD Kumaraswamy in his speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X