ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನ LIVE: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ

|
Google Oneindia Kannada News

ನವದೆಹಲಿ, ಜೂನ್ 20: ಮುಂಗಾರು ಅಧಿವೇಶನದ ನಾಲ್ಕನೇ ದಿನವಾದ ಗುರುವಾರ, ಹದಿನೇಳನೇ ಲೋಕಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ.

ಅಧಿವೇಶನದ 2ನೇದಿನದ ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಎನ್ಡಿಎ ಅಭ್ಯರ್ಥಿಅಧಿವೇಶನದ 2ನೇದಿನದ ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಎನ್ಡಿಎ ಅಭ್ಯರ್ಥಿ

2019 ರ ಲೋಕಸಭೆ ಚುನಾವಣೆಯ ನಂತರ ಭರ್ಜರಿ ಜನಾದೇಶದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಮುಂಗಾರು ಅಧಿವೇಶನ ಇದಾಗಿರುವುದರಿಂದ ಸಾಕಷ್ಟು ಮಹತ್ವ ಪಡೆದಿದೆ.

ಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿ ಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿ

ಮೂರನೇ ದಿನವಾದ ನಿನ್ನೆ ಸ್ಪೀಕರ್ ಆಯ್ಕೆ ಬಡೆದಿತ್ತು. ಹದಿನೇಳನೇ ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ನೇಮಿಸಲಾಗಿತ್ತು.

Monsoon Session: 17th Lok Sabha Session Live updates on June 20

ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹಲವರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದು, ಗೈರಾದ ಕೆಲವರ ಪ್ರಮಾಣ ವಚನ ಬಾಕಿ ಇದೆ.

Newest FirstOldest First
11:51 AM, 20 Jun

ಮಹಿಳೆಯರಿಗೆ ಸಮಾನ ಹಕ್ಕು ನೀಡಲು ತ್ರಿವಳಿ ತಲಾಖ್ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಅಗತ್ಯ: ರಾಮನಾಥ್ ಕೋವಿಂದ್
11:46 AM, 20 Jun

ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆಯಿಂದ ಸಾಲ ಮಾಡಿ, ಆರ್ಥಿಕ ಅಪರಾಧ ಎಸಗಿ ಓಡಿಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
11:42 AM, 20 Jun

ಜಿಎಸ್ಟಿ ಪರಿಚಯಿಸಿದ್ದರಿಂದ ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ಎಂಬ ಪರಿಕಲ್ಪನೆ ವಾಸ್ತವಕ್ಕೆ ಬಂದಿದೆ. ತೆರಿಗೆ ನೀತಿಯನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನ ಹೀಗೆಯೇ ಮುಂದುವರಿಯಲಿದೆ- ರಾಮನಾಥ್ ಕೋವಿಂದ್
11:35 AM, 20 Jun

ಪ್ರಸ್ತುತ ಭಾರತವು ವಿಶ್ವದ ಪ್ರಮುಖ ಸ್ಟಾರ್ಟ್ ಅಪ್ ದೇಶಗಳಲ್ಲಿ ಮುಂಚೂಣಿಯಲ್ಲಿದೆ. 2024 ರ ವೊಳಗಾಗಿ 50,000 ಸ್ಟಾರ್ಟ್ ಅಪ್ ಗಳನ್ನು ಆರಂಭಿಸುವುದು ನಮ್ಮ ಗುರಿ-ರಾಮನಾಥ್ ಕೋವಿಂದ್
11:33 AM, 20 Jun

ಸರ್ಕಾರವು ಬಡಯುವಕರಿಗೆ 10 ಪ್ರತಿಶಸತ ಮೀಸಲಾತಿಯನ್ನು ನೀಡಿದ್ದು, ಇದು ಅವರಿಗೆ ಉದ್ಯೋಗ ಮತ್ತು ಶಿಕ್ಷಣ ವಲಯದಲ್ಲಿ ಅವಕಾಶ ಹೆಚ್ಚಿಸುವಂತೆ ಮಾಡಿದೆ- ರಾಮನಾಥ್ ಕೋವಿಂದ್
11:31 AM, 20 Jun

ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆಯಡಿಯಲ್ಲಿ 19 ಕೋಟಿಯಷ್ಟು ಸಾಲವನ್ನು ಸ್ವ ಉದ್ಯೋಗಕ್ಕಾಗಿ ನೀಡಲಾಗಿದೆ. ಇದನ್ನು 30 ಕೋಟಿಗೆ ಹೆಚ್ಚಿಸಲಾಗುತ್ತಿದೆ- ರಾಮನಾಥ್ ಕೋವಿಂದ್
11:28 AM, 20 Jun

ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಮೊದಲ ಆದ್ಯತೆ. ಮಹಿಳೆಯರು ಸಮಾಜದಲ್ಲಿ ಮತ್ತು ಅರ್ಥವ್ಯವಸ್ಥೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವುದು ಸಮಾಜದ ಅಭಿವೃದ್ಧಿಗೆ ಮೂಲಕಾರಣ ಎಂದು ನಾವು ನಂಬಿದ್ದೇವೆ -ರಾಮನಾಥ್ ಕೋವಿಂದ್
Advertisement
11:18 AM, 20 Jun

"ದೇಶದ ಎಲ್ಲ ರೈತರಿಗೂ ಪ್ರಧಾನ ಮಂತ್ರಿ ಸಮ್ಮಾನ್ ನಿಧಿಯನ್ನು ಕೊಡಮಾಡುವ ಯೋಜನೆ ಮತ್ತಷ್ಟು ವಿಸ್ತಾರಗೊಳ್ಳಲಿ"- ರಾಮನಾಥ್ ಕೋವಿಂದ್
11:16 AM, 20 Jun

ನವ ಭಾರತದ ಪರಿಕಲ್ಪನೆ ಕೇರಳದ ಮಹಾನ್ ಕವಿ ನಾರಾಯಣ ಗುರು, ಬಂಗಾಳದ ಮಹಾನ್ ಕವಿ ರವೀಂದ್ರನಾಥ್ ಠಾಗೂರರ ಕವನಗಳಿಂದ ಸ್ಪೂರ್ತಿ ಪಡೆದಿವೆ- ರಾಮನಾಥ್ ಕೊವಿಂದ್
11:14 AM, 20 Jun

ಸಂಸತ್ತಿನಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದರು ಮೊದಲ ಬಾರಿಗೆ ಆಯ್ಕೆಯಾದವರು. ಜೊತೆಗೆ ಅತೀ ಹೆಚ್ಚು ಮಹಿಳಾ ಸಂಸದರನ್ನೂ ಈ ಲೋಕಸಭೆ ಹೊಂದಿದೆ. ಈ ಮೂಲಕ ಹೊಸ ಭಾರತದ ಇತಿಹಾಸ ನಿರ್ಮಾಣವಾಗಿದೆ- ರಾಮನಾಥ್ ಕೊಂವಿಂದ್
11:12 AM, 20 Jun

ಜನರ ಅಗತ್ಯಕ್ಕೆ ತಕ್ಕ ಹಾಗೆ, ಅವರ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರವು ಸದೃಢ, ಸಮೃದ್ಧಿಯ ಭಾರತ ನಿರ್ಮಾಣದಲ್ಲಿ ತೊಡಗಿದೆ. ಈ ಯಾತ್ರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ತತ್ತ್ವದಿಂದ ಸ್ಪೂರ್ತಿ ಪಡೆದು ಮುಂದೆ ಸಾಗುತ್ತಿದೆ- ರಾಮನಾಥ್ ಕೋವಿಂದ್
11:10 AM, 20 Jun

61 ಕೋಟಿಗೂ ಹೆಚ್ಚು ಜನ ಮತಚಲಾಯಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತಕ್ಕೆ ಸ್ಪಷ್ಟ ಜನಾದೇಶ ನೀಡಿದ್ದಾರೆ- ರಾಮನಾಥ್ ಕೋವಿಂದ್
Advertisement
11:08 AM, 20 Jun

ಈ ಬಾರಿ ಮತದಾರರರು ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅತ್ಯುತ್ತಮ ಜನಾದೇಶ ನೀಡಿದ್ದಾರೆ. ಸರ್ಕಾರದ ಮೊದಲ ಅವಧಿಯ ಉತ್ತಮ ಕಾರ್ಯದಿಂದಾಗಿ ಎರಡನೇ ಅವಕಾಶ ನೀಡಿದ್ದಾರೆ. ಭವಿಷ್ಯದಲ್ಲಿ ಭಾರತ ನಿರ್ಮಾಣಕ್ಕಾಗಿ ಎಲ್ಲರೊಂದಿಗೆ ಎಲ್ಲರ ವಿಕಾಸ್, ಎಲ್ಲರ ವಿಶ್ವಾಸ(ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್) ಎಂಬ ತತ್ತ್ವದಲ್ಲಿ ಜನರು ನಂಬಿಕೆ ಇರಿಸಿದ್ದಾರೆ- ರಾಮನಾಥ್ ಕೋವಿಂದ್, ರಾಷ್ಟ್ರಪತಿ
11:05 AM, 20 Jun

ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಆರಂಭ
11:05 AM, 20 Jun

ರಾಷ್ಟ್ರಪತಿ ಭವನದಿಂದ ಸಂಸತ್ತಿಗೆ ಆಗಮಿಸಿದ ರಾಮನಾಥ್ ಕೋವಿಂದ್
11:05 AM, 20 Jun

ಜಂಟಿ ಅಧಿವೇಶನ ಉದ್ದೇಶಿಸಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ
11:05 AM, 20 Jun

ನಿನ್ನೆ ಲೋಕಸಭೆಯ ಹದಿನೇಳನೇ ಸ್ಪೀಕರ್ ಆಗಿ ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದ ಸಂಸದ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ .

English summary
Monsoon Session: 17th Lok Sabha Session Live updates on June 20, President Ram Nath Kovind to address the joint session of both the Houses today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X