ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನ LIVE: ನೂತನ ಸ್ಪೀಕರ್ ನಮ್ಮ ಹೆಮ್ಮೆ ಎಂದ ಮೋದಿ

|
Google Oneindia Kannada News

ನವದೆಹಲಿ, ಜೂನ್ 19: ಮುಂಗಾರು ಅಧಿವೇಶನದ ಮೂರನೇ ದಿನವಾದ ಬುಧವಾರ, ಹದಿನೇಳನೇ ಲೋಕಸಭೆಯ ಸ್ಪೀಕರ್ ಆಗಿ ಬಿಜೆಪಿ ಓಂ ಬಿರ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2019 ರ ಲೋಕಸಭೆ ಚುನಾವಣೆಯ ನಂತರ ಭರ್ಜರಿ ಜನಾದೇಶದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಮುಂಗಾರು ಅಧಿವೇಶನ ಇದಾಗಿರುವುದರಿಂದ ಸಾಕಷ್ಟು ಮಹತ್ವ ಪಡೆದಿದೆ.

ಅಧಿವೇಶನದ 2ನೇದಿನದ ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಎನ್ಡಿಎ ಅಭ್ಯರ್ಥಿಅಧಿವೇಶನದ 2ನೇದಿನದ ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಎನ್ಡಿಎ ಅಭ್ಯರ್ಥಿ

ಮೂರನೇ ದಿನವಾದ ಇಂದು ಸ್ಪೀಕರ್ ಆಯ್ಕೆಯ ಜೊತೆಗೆ ಇನ್ನಿತರ ಹಲವು ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.

Monsoon Session: 17th Lok Sabha Session Live updates on June 19

ಅಧಿವೇಶನದ LIVE ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಬಹುತೇಕ ಖಚಿತಅಧಿವೇಶನದ LIVE ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಬಹುತೇಕ ಖಚಿತ

ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹಲವರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದು, ಗೈರಾದ ಕೆಲವರ ಪ್ರಮಾಣ ವಚನ ಬಾಕಿ ಇದೆ.

Newest FirstOldest First
12:41 PM, 19 Jun

"ಸ್ಪೀಕರ್ ಎಂದರೆ ನೀರಿನಲ್ಲಿರುವ ತಾವರೆಯ ಹಾಗೆ. ನೀವು ಬಿಜೆಪಿಯವರಿರವಬಹುದು. ಆದರೆ ನೀರಿಗೆ ಅಂತಿಕೊಳ್ಳದ ತಾವರೆಯ ಹಾಗಿರಬೇಕು" - ಟಿ.ಆರ್. ಬಾಲು, ಡಿಎಂಕೆ ಮುಖಂಡ
12:30 PM, 19 Jun

"ಕೆಳಮನೆಯ ಉಸ್ತುವಾರಿ ಹೊತ್ತಿರುವ ನೀವು ಅದರ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದೀರಿ. ಕಾಂಗ್ರೆಸ್ ಎಂದಿಗೂ ಇದರಲ್ಲಿ ಋಣಾತ್ಮಕ ಪಾತ್ರ ವಹಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ"- ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಪಕ್ಷದ ಲೋಕಸಭೆ ನಾಯಕ
12:27 PM, 19 Jun

"ಲೋಕಸಭೆಯಲ್ಲಿ ಎಂಥ ಸನ್ನಿವೇಶ ಎದುರಾದರೂ ಹೇಗೆ ನಗುನಗುತ್ತ ಅದನ್ನು ಸ್ವೀಕರಿಸಬೇಕು ಮತ್ತು ಹೇಗೆ ತಾಳ್ಮೆ ಕಳೆದುಕೊಳ್ಳದೆ ಇರಬೇಕು ಎಂಬುದನ್ನು ಈ ಹಿಂದಿನ ಸ್ಪೀಕರ್(ಸುಮಿತ್ರಾ ಮಹಾಜನ್) ತೋರಿಸಿಕೊಟ್ತಿದ್ದಾರೆ"- ನರೇಂದ್ರ ಮೋದಿ, ಪ್ರಧಾನಿ
11:52 AM, 19 Jun

"ಓಂ ಬಿರ್ಲಾ (ಸ್ಪೀಕರ್)ಅವರೊಂದಿಗೆ ನಾನು ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದು ನನಗೆ ವೈಯಕ್ತಿಕವಾಗಿ ನೆನಪಿದೆ. ಅವರು ಸಾರ್ವಜನಿಕ ಬದುಕಿನಲ್ಲಿ ಹಲವು ವರ್ಷಗಳಿಂದ ಇದ್ದವರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ನಾಯಕರಾಗಿ ಬೆಳೆದು, ಸಮಾಜ ಸೇವೆಯಲ್ಲಿ ತೊಡಗಿದರು. ಇಂದಿಗೂ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ"- ನರೇಂದ್ರ ಮೋದಿ, ಪ್ರಧಾನಿ
11:48 AM, 19 Jun

ಲೋಕಸಭೆಯ ಹದಿನೇಳನೇ ಸ್ಪೀಕರ್ ಆಗಿ ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದ ಸಂಸದ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ .
11:48 AM, 19 Jun

ನೂತನ್ ಸ್ಪೀಕರ್ ಅನ್ನು ಆಯ್ಕೆಯ ನಂತರ ಪ್ರಧಾನಿ ನರೇಂದ್ರ ಮೊದಿ ಅವರು ಬಿರ್ಲಾ ಅವರನ್ನು ಅಭಿನಂದಿಸಿ, 'ಅವರು ನಮ್ಮ ಹೆಮ್ಮೆ' ಎಂದರು.
11:47 AM, 19 Jun

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಓಂ ಬಿರ್ಲಾ ಅವಿರೋಧವಾಗಿ ಆಯ್ಕೆಯಾದರು.
Advertisement
11:47 AM, 19 Jun

ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಹ ತನ್ನ ಬೆಂಬಲ ಸೂಚಿಸಿತ್ತು. ಅಕಸ್ಮಾತ್ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದರೂ, ಸಂಸದರ ಕೊರತೆ ಇದ್ದಿದ್ದರಿಂದ ಸ್ಪೀಕರ್ ಆಯ್ಕೆ ಕಾಂಗ್ರೆಸ್ ಗೆ ಸಾಧ್ಯವಿರಲಿಲ್ಲ

English summary
Monsoon Session: 17th Lok Sabha Session Live updates on June 19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X