ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿಂದು ಮುಂಗಾರು ಮಳೆ: ಆರೆಂಜ್ ಅಲರ್ಟ್ ಜಾರಿ

|
Google Oneindia Kannada News

ನವದೆಹಲಿ ಜೂನ್ 30: ಮಾನ್ಸೂನ್ ಅಂತಿಮವಾಗಿ ದೆಹಲಿಯನ್ನು ತಲುಪಿದೆ. ಕಳೆದ ವಾರದಿಂದ ಅಧಿಕ ತಾಪಮಾನವನ್ನು ಕಂಡ ರಾಷ್ಟ್ರ ರಾಜಧಾನಿ ಗುರುವಾರ ಲಘು ಮಳೆಯನ್ನು ಕಂಡಿದೆ. ದೆಹಲಿಯಲ್ಲಿ ಬುಧವಾರ ಹೆಚ್ಚಿನ ತಾಪಮಾನ ದಾಖಲಾಗಿದ್ದು ಜನ ಹೈರಾಣಾಗಿದ್ದಾರೆ. ದೆಹಲಿಯ ನಿನ್ನೆ ಗರಿಷ್ಠ ತಾಪಮಾನವು 40.9 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಇದು ಮಂಗಳವಾರದ ಗರಿಷ್ಠಕ್ಕಿಂತ 0.6 ಡಿಗ್ರಿ ಕಡಿಮೆ. ಇದು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಎರಡು ಗಂಟೆಗಳಲ್ಲಿ ದೆಹಲಿಯ ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಘಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಮನೇಸರ್, ಬಲ್ಲಭಗಢ ನಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಹಾಗೂ ಗುಡುಗು ಸಹಿತ ಮಳೆಯಾಗಲಿದೆ.

ಜೊತೆಗೆ ಕೈತಾಲ್, ರಾಜೌಂಡ್, ಅಸ್ಸಂದ್, ಸಫಿಡೋನ್, ಪಾಣಿಪತ್, ಗೊಹಾನಾ, ಗನ್ನೌರ್, ಮೆಹಮ್, ಸೋನಿಪತ್, ರೋಹ್ಟಕ್, ಖಾರ್ಖೋಡಾ, ಭಿವಾನಿ, ಚರ್ಕಿ ದಾದ್ರಿ, ಮಟ್ಟನ್‌ಹೈಲ್, ಝಜ್ಜರ್, ಫರೂಖ್‌ನಗರ, ಕೊಸಾಲಿ, ಮಹೇಂದರ್‌ಗಢ, ಸೋಹಾನಾ, ಪಲ್ವಾಲ್, ರೇವಾರಿ, ರೇವಾರಿ, ಪಾಲ್‌ವಾಲ್, ಗೊಹಾನಾ, ಗ್ನೌರ್ ಬವಾಲ್, ನುಹ್, ಔರಂಗಾಬಾದ್ (ಹರಿಯಾಣ) ಸಹರಾನ್‌ಪುರ್, ದಿಯೋಬಂದ್, ನಾಜಿಬಾಬಾದ್, ಮುಜಾಫರ್‌ನಗರ, ಬಿಜ್ನೌರ್, ಖತೌಲಿ, ಸಕೋಟಿ ತಾಂಡಾ, ಹಸ್ತಿನಾಪುರ, ಚಂದ್‌ಪುರ, ಬರೌತ್, ದೌರಾಲಾ, ಬಾಗ್‌ಪತ್, ಮೀರತ್, ಖೇಕ್ರಾ, ಮೋದಿನಗರ, ಕಿಥೋರ್, ಅಮ್ರೋಹಾ, ಮೊರಾದಾಬಾದ್, ಗರ್ಮುಕ್ , ಹಾಪುರ್, ಸಂಭಾಲ್, ಬಿಲ್ಲಾರಿ, ಮಿಲಾಕ್, ಚಂದೌಸಿ, ಬಹಜೋಯ್, ಬರೇಲಿ, ಸಹಸ್ವಾನ್, ಬಡಾಯುನ್, ಇಗ್ಲಾಸ್, ಸಿಕಂದರಾ ರಾವ್, ರಾಯ, ಹತ್ರಾಸ್, ಮಥುರಾ, ಸದಾಬಾದ್, ತುಂಡ್ಲಾ, ಆಗ್ರಾ (ಯು.ಪಿ.) ಭಿವಾರಿ, ತಿಜಾರಾ, ಖೈರ್ತಾಲ್, ಕೊಟ್‌ಪುಟ್ಲಿ, ಅಲ್ವಾರ್, ವಿರಾಟ್‌ನಗರ, ದೀಗ್, ಲಕ್ಷ್ಮಣಗಢ, ರಾಜ್‌ಗಢ (ರಾಜಸ್ಥಾನ)ನಲ್ಲಿ ಮುಂದಿನ 2 ಗಂಟೆಗಳಲ್ಲಿ ಮಳೆಯಾಗಲಿದೆ.

ತಾಪಮಾನ ಇಳಿಕೆ ಸಾಧ್ಯತೆ

ತಾಪಮಾನ ಇಳಿಕೆ ಸಾಧ್ಯತೆ

IMD ಪ್ರಕಾರ, ದೆಹಲಿ ತನ್ನ ಮೊದಲ ಮಾನ್ಸೂನ್ ಮಳೆಯನ್ನು ಗುರುವಾರ ಅಥವಾ ಶುಕ್ರವಾರ ಪಡೆಯುವ ಸಾಧ್ಯತೆಯಿದೆ. ಜೂನ್ 30 ರಂದು ನಗರದಲ್ಲಿ ಸಾಧಾರಣ ಮಳೆಯಾಗುವ ಎಚ್ಚರಿಕೆಯನ್ನು IMD ನೀಡಿದ್ದು, ಜುಲೈ 1 ರ ವೇಳೆಗೆ ದೆಹಲಿ ತಾಪಮಾನವು 33-34 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಇಂದು ಅಥವಾ ನಾಳೆ ರಾಷ್ಟ್ರ ರಾಜಧಾನಿಗೆ ಆಗಮಿಸಲಿದೆ.

ಎಲ್ಲೋ ಅಲರ್ಟ್ ಘೋಷಣೆ

ಎಲ್ಲೋ ಅಲರ್ಟ್ ಘೋಷಣೆ

IMD ಯ ಮುನ್ಸೂಚನೆಯ ಪ್ರಕಾರ, ನೈಋತ್ಯ ಮಾನ್ಸೂನ್ ಮುಂದಿನ 48 ಗಂಟೆಗಳಲ್ಲಿ ಇಡೀ ದೆಹಲಿಯನ್ನು ಆವರಿಸುವ ನಿರೀಕ್ಷೆಯಿದೆ. ಗುರುವಾರ ಅಥವಾ ಶುಕ್ರವಾರದಂದು ಮುಂಗಾರು ಪ್ರಾರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ IMD ಗುರುವಾರ ಎಲ್ಲೋ ಅಲರ್ಟ್ ಘೋಷಿಸಿದೆ. ಏಕೆಂದರೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಮತ್ತು ಗಾಳಿಯ ವೇಗವು ಹಗಲಿನಲ್ಲಿ 40 km/hr ಅನ್ನು ಮುಟ್ಟಬಹುದು ಎಂದು ಹೇಳಲಾಗಿದೆ. ಶುಕ್ರವಾರ, 'ಹಳದಿ' ಅಲರ್ಟ್ ಘೋಷಿಸಲಾಗಿದ್ದು ಮಳೆ ಮತ್ತೆ ದಾಖಲಾಗಬಹುದು.

ವಿಜ್ಞಾನಿ ಆರ್.ಕೆ ಜೆನಮಣಿ ಸೂಚನೆ

ವಿಜ್ಞಾನಿ ಆರ್.ಕೆ ಜೆನಮಣಿ ಸೂಚನೆ

"ಗುರುವಾರ ಮತ್ತು ಶುಕ್ರವಾರ, ದೆಹಲಿಯು ಸಾಕಷ್ಟು ಮಳೆಯನ್ನು ನೋಡಲಿದೆ. ಗುರುವಾರ ಗರಿಷ್ಠ ತೀವ್ರತೆಯನ್ನು ನಿರೀಕ್ಷಿಸಲಾಗಿದೆ. ಭಾನುವಾರದ ವೇಳೆಗೆ, ತೀವ್ರತೆಯು ಕಡಿಮೆಯಾಗಲಿದೆ ಮತ್ತು ಲಘು ಮಳೆಯನ್ನು ಮಾತ್ರ ನಿರೀಕ್ಷಿಸಲಾಗಿದೆ. ನಂತರ ಸೋಮವಾರ ಪ್ರತ್ಯೇಕವಾದ ತುಂತುರು ಮಳೆ ಬೀಳಲಿದೆ ಎಂದು IMD ಯ ವಿಜ್ಞಾನಿ ಆರ್.ಕೆ ಜೆನಮಣಿ ಹೇಳಿದ್ದಾರೆ. ಆದ್ದರಿಂದ ದೆಹಲಿಯ ತಾಪಮಾನ ಕುಸಿಯಲಿದೆ. ವಾತಾವರಣ ತಂಪಾಗುವ ಸಾಧ್ಯತೆ ಇದೆ.

ಮಾನ್ಸೂನ್ ಆಗಮನದ ನಿರೀಕ್ಷೆ

ಮಾನ್ಸೂನ್ ಆಗಮನದ ನಿರೀಕ್ಷೆ

IMD ನಗರದಲ್ಲಿ ಬುಧವಾರ ಲಘು ಮಳೆಯ ಮುನ್ಸೂಚನೆ ನೀಡಿದ್ದರೆ, ದೆಹಲಿಯಲ್ಲಿ ಬುಧವಾರ ರಾತ್ರಿ 10 ಗಂಟೆಯವರೆಗೆ ಯಾವುದೇ ಮಳೆ ದಾಖಲಾಗಿಲ್ಲ. ಹೀಗಾಗಿ ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಅಧಿಕ ತಾಪಮಾನದಿಂದಾಗಿ ಜನ ಬೇಸತ್ತಿದ್ದಾರೆ. ಮಳೆರಾಯನ ಮುನಿಸಿಗೆ ಜನ ಕಂಗಾಲಾಗಿದ್ದಾರೆ. ಆದರೆ ಮುಂಗಾರು ಆಗಮನದಿಂದಾಗಿ ದೆಹಲಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಐಎಂಡಿ ಸೂಚನೆಯಂತೆ ಮಳೆಯಾದರೆ ದೆಹಲಿಯ ಜನ ಕೊಂಚ ಬಿಸಿಲಿನ ಬೇಗೆಯಿಂದ ಹೊರಬರುವುದು ಖಂಡಿತ.

English summary
Monsoon has finally reached Delhi. The national capital, which has seen high temperatures since last week, witnessed light rain on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X