ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋತಿಗಳು ಸಮೋಸಾ, ಫ್ರೂಟಿ ಕೇಳುತ್ತಿವೆ: ಸಂಸದೆ ಹೇಮಾಮಾಲಿನಿ

|
Google Oneindia Kannada News

ನವದೆಹಲಿ, ನವೆಂಬರ್ 21: ಕೋತಿಗಳ ಹಾವಳಿ ಬಗ್ಗೆ ಮಥುರಾದ ಬಿಜೆಪಿ ಸಂಸದೆ, ಬಾಲಿವುಡ್ ಹಿರಿಯ ನಟಿ ಹೇಮಾಮಾಲಿನಿ ಇಂದು ಸಂಸತ್‌ನ ಗಮನ ಸೆಳೆದರು.

ಸಂಸತ್‌ನಲ್ಲಿ ಬಹುತೇಕ ಮೌನವಾಗಿರುವ ಹೇಮಾಮಾಲಿನಿ ಅವರು ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಆಶ್ಚರ್ಯವಾಗಿತ್ತು. ಕೋತಿಗಳ ಹಾವಳಿ ಬಗ್ಗೆ ಮಾತನಾಡಿದ ಅವರು, ಕೋತಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೊತೆಗೆ ಕೋತಿಗಳ ರಕ್ಷಣೆ ಬಗ್ಗೆಯೂ ಮಾತನಾಡಿದರು.

ಪೊರಕೆ ನೆಲಕ್ಕೆ ತಾಗಿಸದೆಯೇ 'ಕಸಗುಡಿಸಿದ' ಹೇಮಾಮಾಲಿನಿ! ಪೊರಕೆ ನೆಲಕ್ಕೆ ತಾಗಿಸದೆಯೇ 'ಕಸಗುಡಿಸಿದ' ಹೇಮಾಮಾಲಿನಿ!

ಪ್ರವಾಸಿ ಕ್ಷೇತ್ರಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಹೇಮಾಮಾಲಿನಿ, ಮಥುರಾದಲ್ಲಿ ಕೋತಿಗಳ ಸಫಾರಿ ಸ್ಥಾಪಿಸಬೇಕೆಂದು ಸಹ ಅವರು ಒತ್ತಾಯಿಸಿದರು.

Monkeys Asking For Samosa And Frooti: Hema Malini

ಕೋತಿಗಳು ಮಾನವನ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಬಿಟ್ಟಿವೆ ಎಂದ ಅವರು, ಹಣ್ಣುಗಳ ಬದಲಿಗೆ ಮನುಷ್ಯರಂತೆ ಸಮೋಸಾ, ಫ್ರೂಟಿಗಳನ್ನು ತಿನ್ನಲು ಕೋತಿಗಳು ಪ್ರಾರಂಭಿಸಿವೆ. ಇದು ಕೋತಿಗಳ ಆರೋಗ್ಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಹೇಳಿದರು.

ಸಂಸತ್ ತುಂಬಾ 'ರಾಧೆ' ಸದ್ದು ಮೊಳಗಿಸಿದ ಹೇಮಾ ಮಾಲಿನಿ ಸಂಸತ್ ತುಂಬಾ 'ರಾಧೆ' ಸದ್ದು ಮೊಳಗಿಸಿದ ಹೇಮಾ ಮಾಲಿನಿ

ಮಥುರಾ ಮತ್ತು ಬೃಂದಾವನಗಳಲ್ಲಿಯಂತೂ ಕೋತಿಗಳ ಹಾವಳಿ ಮಿತಿ ಮೀರಿದೆ. ಜನರಿಂದ ಪರ್ಸುಗಳನ್ನು ಸಹ ಕೋತಿಗಳು ದೋಚುತ್ತಿವೆ, ಕೋತಿಗಳ ಭಯಕ್ಕೆ ಮಕ್ಕಳು ಉದ್ಯಾನದಲ್ಲಿ ಆಡಲು ಸಹ ಭಯಪಡುತ್ತಿದ್ದಾರೆ. ಎಂದು ಹೇಮಾಮಾಲಿನಿ ಹೇಳಿದರು.

English summary
Mathura MP Hema Malini today talked about monkey menace in parliament. She said monkeys developed food habit like humans they asking for Samosa, frooti instead of fruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X