ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟದ ಶ್ರೀಮಂತ ಸಚಿವರು ಹರ್ಸಿಮ್ರತ್ ಕೌರ್ ಬಾದಲ್!

|
Google Oneindia Kannada News

ನವದೆಹಲಿ, ಜೂನ್ 01: ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ADR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಕೇಂದ್ರ ಸಚಿವ ಸಂಪುಟದ 58(ಪ್ರಧಾನಿಯನ್ನೂ ಸೇರಿ) ಮಂತ್ರಿಗಳಲ್ಲಿ 51 ಮಂತ್ರಿಗಳು ಕೋಟ್ಯಧಿಪತಿಗಳು. ಅವರಲ್ಲಿ 22 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ!

ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಆಹಾರ ಸಂಸ್ಕರಣ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅತ್ಯಂತ ಶ್ರೀಮಂತ ಸಚಿವೆ ಎನ್ನಿಸಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರಲ್ಲಿ ಹರ್ಸಿಮ್ರತ್ ಕೌರ್ ಬಾದಲ್, ಪಿಯೂಶ್ ಗೋಯಲ್, ರಾವ್ ಇಂದ್ರಜಿತ್ ಸಿಂಗ್, ಅಮಿತ್ ಶಾ ಸಹ ಇದ್ದಾರೆ.

ಈ ಸಂಸದರ ಒಟ್ಟು ಆಸ್ತಿ, ಒಂದು ಗುಡಿಸಲು, ಒಂದು ಸೈಕಲ್, ಒಂದು ಬ್ಯಾಗು!ಈ ಸಂಸದರ ಒಟ್ಟು ಆಸ್ತಿ, ಒಂದು ಗುಡಿಸಲು, ಒಂದು ಸೈಕಲ್, ಒಂದು ಬ್ಯಾಗು!

ಬಾದಲ್ ತಮ್ಮ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ನೀಡಿದ ಒಟ್ಟು ಆಸ್ತಿಯ ಮೌಲ್ಯ 217 ಕೋಟಿ ರೂ. ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು 95 ಕೋಟಿ ರೂ. ಆಸ್ತಿ ಹೊಂದಿದ್ದರೆ, ರಾವ್ ಇಂದ್ರಜಿತ್ ಸಿಂಗ್ 42 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.

Modis new cabinet: 51 crorepatis, 22 have criminal case against them

ಸಂಪುಟದ ಸಚಿವರಾದ ಪ್ರತಾಪ್ ಚಂದ್ರ ಸಾರಂಗಿ, ಬಾಬುಲ್ ಸುಪ್ರಿಯೋ, ಗಿರಿರಾಜ್ ಸಿಂಗ್, ನಿತ್ಯಾನಂದ ರೈ, ಅಮಿತ್ ಶಾ, ಪ್ರಲ್ಹಾದ್ ಶೋಷಿ ಸೇರಿದಂತೆ 22 ಜನರ ವಿರುದ್ಧ ಕ್ರಿನಲ್ ಕೇಸುಗಳು ದಾಖಲಾಗಿವೆ.

ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ

ಭಯೋತ್ಪಾದನೆ, ಕೊಲೆ, ಅತ್ಯಾಚಾರ, ದರೋಡೆ, ಕೋಮುಗಲಭೆ, ಅಪಹರಣ ಸೇರಿದಂತೆ ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ.

ಇನ್ನು ಸಂಪುಟದ 8 ಸಚಿವರ ವಿದ್ಯಾರ್ಹತೆ 10 ನೇ ತರಗತಿಯಿಂದ 12ನೇ ತರಗತಿ. 47 ಕ್ಕೂ ಹೆಚ್ಚು ಸಚಿವರು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿರುವುದಾಗಿ ಘೋಷಿದಿದ್ದಾರೆ.

English summary
Out of 57 ministers inducted in Narendra Modi-led NDA government 22 have declared criminal cases against themselves. 51 are crorepatis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X