ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಪ್ತ ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಮೋದಿಯ ವಿಶಿಷ್ಟ ಗೆಟಪ್

|
Google Oneindia Kannada News

ನವದೆಹಲಿ, ಜನವರಿ 26: ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದ ಇಲ್ಲಿಯವರೆಗೆ ಸತತ ಏಳು ಬಾರಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ತಮ್ಮ ವಿಶಿಷ್ಟ ಧಿರಿಸಿನ ಮೂಲಕ ಜನರ ಮೆಚ್ಚುಗೆ ಪಡೆದಿದ್ದಾರೆ.ಅದರಲ್ಲೂ ಪ್ರತಿ ಬಾರಿ ಒಂದೊಂದು ಸಂಸ್ಕೃತಿಯ ವಿಶಿಷ್ಟ 'ಪೇಟಾ' ತೊಡುವ ಮೂಲಕ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಜಾಮ್ ನಗರದ ರಾಜ ಕುಟುಂಬ ಧರಿಸುತ್ತಿದ್ದ ವಿಶೇಷ ಪೇಟಾವನ್ನು ಧರಿಸಿದ್ದಾರೆ. ಜಾಮ್ ನಗರದ ಶಾಹಿ ಕುಟುಂಬವು ಪ್ರಧಾನಿಗೆ ಈ ಪೇಟಾವನ್ನು ಉಡುಗೊರೆಯಾಗಿ ನೀಡಿದೆ. ಈ ಬಾರಿ ಮೋದಿ ಬೂದು ಬಣ್ಣದ ಓವರ್‌ಕೋಟ್ ಮೇಲೆ ಈ ಪೇಟಾವನ್ನು ಧರಿಸಿದ್ದರು.

2020ರ ಗಣರಾಜ್ಯೋತ್ಸವ

2020ರ ಗಣರಾಜ್ಯೋತ್ಸವ

ಕಳೆದ ವರ್ಷ 2020ರ ಗಣರಾಜ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಭಗವಾ ಬಂಧೇಜ್ ಪೇಟಾವನ್ನು ಧರಿಸಿದ್ದರು. ಕಪ್ಪು ಬಣ್ಣದ ಕೋಟು ಧರಿಸಿದ್ದರು.

2019ರ ಗಣರಾಜ್ಯೋತ್ಸವ

2019ರ ಗಣರಾಜ್ಯೋತ್ಸವ

2019ರ ಗಣರಾಜ್ಯೋತ್ಸವದಂದು ನರೇಂದ್ರ ಮೋದಿ ಹಳದಿ ಬಣ್ಣದ ಪೇಟಾ ಧರಿಸಿದ್ದರು, ಅದರಲ್ಲಿ ಕೆಂಪು ಬಣ್ಣವು ಮಿಶ್ರಿತವಾಗಿತ್ತು.ಅವರು ಸ್ಲೀವ್‌ಲೆಸ್ ಜಾಕೆಟ್ ಧರಿಸಿದ್ದರು.

2018ರ ಗಣರಾಜ್ಯೋತ್ಸವ

2018ರ ಗಣರಾಜ್ಯೋತ್ಸವ

2018ರ ಗಣರಾಜ್ಯೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಳವು ಬಣ್ಣಗಳಿರುವ ಪೇಟಾವನ್ನು ಧರಿಸಿದ್ದರು. ಅವರು ಕ್ರೀಂ ಕಲರ್ ಕುರ್ತಾ ಹಾಗೂ ಕಪ್ಪು ಜಾಕೆಟ್ ಧರಿಸಿದ್ದರು.

2017ರ ಗಣರಾಜ್ಯೋತ್ಸವ

2017ರ ಗಣರಾಜ್ಯೋತ್ಸವ

2017ರ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಗುಲಾಬಿ ಬಣ್ಣದ ಪೇಟಾ ಧರಿಸಿದ್ದರು. ಅದರಲ್ಲಿ ಬೆಳ್ಳಿ ಬಣ್ಣದ ರೇಖೆಗಳಿದ್ದವು, ಹಾಗೆಯೇ ಅವರು ಬಿಳಿ ಬಣ್ಣದ ಕುರ್ತಾ ಜತೆಗೆ ಕಪ್ಪು ಬಣ್ಣದ ಕೋಟ್ ಧರಿಸಿದ್ದರು.

2016ರ ಗಣರಾಜ್ಯೋತ್ಸವ

2016ರ ಗಣರಾಜ್ಯೋತ್ಸವ

2016ರ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಹಳದಿ ಬಣ್ಣದ ಪೇಟಾ ಧರಿಸಿದ್ದರು. ಆದರೆ ಮೋದಿ ಸ್ಲೀವ್‌ಲೆಸ್ ಜಾಕೆಟ್ ಧರಿಸದೆ ಪೂರ್ಣ ತೋಳಿನ ಜಾಕೆಟ್ ಧರಿಸಿದ್ದರು.

2015ರ ಗಣತಂತ್ರ ದಿನ

2015ರ ಗಣತಂತ್ರ ದಿನ

ಪ್ರಧಾನಿ ನರೇಂದ್ರ ಮೋದಿ 2015ರ ಗಣರಾಜ್ಯೋತ್ಸವ ದಿನದಂದು ನವಿಲಿನ ರೀತಿಯ ಪೇಟಾ ಧರಿಸಿದ್ದರು. ಅವರು ಕಪ್ಪು ಕೋಟ್ ಧರಿಸಿದ್ದರು. ಅಂದು ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಆಗಮಿಸಿದ್ದರು.

English summary
PM Narendra Modi continued with his tradition of wearing colouful turbans on the occasion of country’s Republic Day and Independence Day celebrations. This year too, the PM sported a colourful 'paghdi' which was gifted to him from the royal family of Gujarat's JamnagaR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X