ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮುಸ್ಲಿಂ ವಿರೋಧಿ ಮೋದಿ',ಅಲ್ ಖೈದಾ ವಿಡಿಯೋ ಬಗ್ಗೆ ತನಿಖೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು,ಮೇ.4: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅಲ್ ಖೈದಾ ಸಂಘಟನೆ ವಿಡಿಯೋ ಸಂದೇಶದ ಮೂಲಕ ಪರೋಕ್ಷವಾಗಿ ನೀಡಿರುವ ಎಚ್ಚರಿಕೆ ಬಗ್ಗೆ ಗುಪ್ತಚರ ಇಲಾಖೆ ತನಿಖೆ ಕೈಗೊಂಡಿದೆ.

ಎಕ್ಯೂಐಎಸ್ ವಿಡಿಯೋದಲ್ಲಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿದೆ. ವಿಶ್ವಬ್ಯಾಂಕ್ ಹಾಗೂ ಐಎಂಎಫ್ ನಿಯಮಗಳ ಲಾಭ ಪಡೆದುಕೊಂಡು ಮುಸ್ಲಿಮರ ವಿರುದ್ಧ ಭಾರತದ ಪ್ರಧಾನಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. [ಐಎಸ್ಐಎಸ್ ನೇಮಕಾತಿಯ ಕೊಂಡಿ ಭಟ್ಕಳದ ಸುಲ್ತಾನ್]

ನಂತರ ಚಾರ್ಲಿ ಹೆಬ್ಡೋ ದಾಳಿ ಹಾಗೂ ಬ್ಲಾಗರ್ ಅವ್ಜಿತ್ ರಾಯ್ ಹತ್ಯೆ ಬಗ್ಗೆ ವಿಡಿಯೋದಲ್ಲಿ ಪ್ರಸ್ತಾಪಿಸಲಾಗಿದೆ. ಎಕ್ಯೂಐಎಸ್ ದಾಳಿ ನಡೆಸಲು ಕಾತುರವಾಗಿದ್ದು, ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

Modi targeting Muslims indirectly says Al-Qaeda


ಆಸೀಫ್ ಉಮರ್ ಸಂದೇಶ?:

ಅಲ್‌ಖೈದಾ ಇಸ್ಲಾಮಿಕ್ ಸ್ಟೇಟ್ (ಎಕ್ಯುಐಎಸ್) ಸಂಘಟನೆಯನ್ನು ಶೀಘ್ರದಲ್ಲಿ ಆರಂಭಿಸಲಿದ್ದು, ಅದಕ್ಕೆ ಭಾರತ ಉಪ ಖಂಡದಲ್ಲಿ ಅಸೀಮ್ ಉಮರ್ ನಾಯಕನಾಗಿರುತ್ತಾನೆ ಎಂದು ಅಲ್‌ಖೈದಾ ಮುಖ್ಯ ನಾಯಕ ಅಯ್‌ಮನ್ ಅಲ್‌ಜನಾಹಿರಿ ಘೋಷಣೆ ಮಾಡಿದ್ದಾನೆ. [ಇಂಟರ್‌ಪೋಲ್ ಭಯದಿಂದ ಊರೂರು ಸುತ್ತುತ್ತಿರುವ ದಾವೂದ್]

ಈ ವಿಷಯವನ್ನು 2014 ಸೆಪ್ಟೆಂಬರ್‌ನಲ್ಲಿಯೇ ಆನ್‌ಲೈನ್ ಮೂಲಕ ಪ್ರಚಾರ ಮಾಡಲಾಗಿದೆ. ಪ್ರಮುಖವಾಗಿ ಮ್ಯಾನ್ಮಾರ್, ಬಾಂಗ್ಲಾದೇಶ ಹಾಗೂ ಭಾರತದ ಅಸ್ಸಾಂ ನಮ್ಮ ಕಾರ್ಯ ಕ್ಷೇತ್ರಗಳಾಗಿರುತ್ತವೆ ಎಂದು ಜವಾಹಿರಿ ಹೇಳಿರುವುದಾಗಿ ವರದಿಯಾಗಿದೆ.

ಆದರೆ, ಅಕ್ಟೋಬರ್ 2014ರ ನಂತರ ಎಕ್ಯೂಐಎಸ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ ತಾಲಿಬಾನ್, ಎಕ್ಯೂಐಎಸ್ ಗಾಗಿ ಹೋರಾಡುವವರು ಇಲ್ಲಿ ಯಾರೂ ಇಲ್ಲ. ಅನೇಕರು ಸಂಘಟನೆ ತೊರೆದಿದ್ದಾರೆ ಇಲ್ಲವೇ ಯೆಮನ್ ಯುದ್ಧದಲ್ಲಿ ಕೈಜೋಡಿಸಿದ್ದಾರೆ ಎಂದಿದೆ. [ಯುವಕರ ಸೆಳೆಯಲು ಆನ್ ಲೈನ್ ಬಳಸಿಕೊಂಡ ಸಿಮಿ]

ಆದರೆ, ಭಾರತದ ಜಿಹಾದಿಗಳೂ ಕೂಡಾ ಎಕ್ಯೂಐಎಸ್ ಅಥವಾ ಐಎಸ್ಐಎಸ್ ನತ್ತ ವಾಲುತ್ತಿಲ್ಲ. ಹೀಗಾಗಿ ಮುಸ್ಲಿಮರನ್ನು ಎತ್ತಿಕಟ್ಟಿ ಮೋದಿ ವಿರುದ್ಧ ಕಾರ್ಯಾಚರಣೆ ನಡೆಸಲು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬ ಅನಿಸಿಕೆ ವ್ಯಕ್ತವಾಗಿದೆ. (ಒನ್ ಇಂಡಿಯಾ ಸುದ್ದಿ)

English summary
The Indian Intelligence Bureau officials are verifying a video message put up by the Al-Qaeda in the Indian Sub-Continent in which references to Prime Minister Narendra Modi have been made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X