ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಯುತ್ತಿದೆ: ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 23: ನಾವು ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಖಿಲ ಭಾರತ ಪೀಠಾಸೀನ ಸಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಮುಂಬೈ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸಿದರು. 26/11 ಮುಂಬೈ ಮೇಲಿನ ದಾಳಿಯನ್ನು ಎಂದಿಗೂ ಭಾರತ ಮರೆಯಲು ಸಾಧ್ಯವಿಲ್ಲ. ದೇಶ ಹೊಸ ನೀತಿ ಹಾಗೂ ಹೊಸ ಕಾರ್ಯ ವಿಧಾನಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದರು.

26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!

ಮುಂಬೈ ದಾಳಿಯಂತಹ ದೊಡ್ಡ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ ನಮ್ಮ ಭದ್ರತಾ ಪಡೆಗೆ ತಲೆ ಬಾಗುತ್ತೇನೆ. ಅವರು ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುತ್ತಿದ್ದಾರೆ ನಮ್ಮ ಗಡಿಗಳನ್ನು ಭದ್ರಮಾಡಿಕೊಂಡಿದ್ದಾರೆ ಎಂದು ಹೇಳಿದರು.

Modi Says India Fighting Terror With New Policy, Process

2008ರ ಈ ದಿನ ಪಾಕಿಸ್ತಾನದಿಂದ ಕಳುಹಿಸಲಾದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ್ದರು. ವಿದೇಶಿಗರು , ಪೊಲೀಸರು ಸೇರಿದಂತೆ ಅನೇಕರು ಈ ದಾಳಿಗೆ ಬಲಿಯಾಗಿದ್ದರು.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಇದೀಗ ಹೊಸ ನೀತಿಗಳನ್ನು ಅಳವಡಿಸಿಕೊಂಡಿದ್ದು, ಉಗ್ರವಾದವನ್ನು ಬೇರು ಸಮೇತ ಕಿತ್ತೆಸೆಯಲು ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಎಂದು ಹೇಳಿದರು.

ಉಗ್ರವಾದದ ವಿರುದ್ಧ ಕಠಿಣ ನೀತಿ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಮುಂಬೈ ದಾಳಿಯಂತಹ ಭೀಕರ ದಾಳಿಗಳ ಯೋಜನೆಯನ್ನು ವಿಫಲಗೊಳಿಸಲು ನಮ್ಮ ಭದ್ರತಾ ಸಂಸ್ಥೆಗಳು ಶಕ್ತವಾಗಿವೆ ಎಂದು ಪ್ರಧಾನಿ ಮೋದಿ ನುಡಿದರು.

ಪಾಕ್ ಬೆಂಬಲಿತ ಭಯೋತ್ಪಾದಕರು ಮುಂಬೈನಲ್ಲಿ ನಡೆಸಿದ ಆ ಪೈಶಾಚಿಕ ಕೃತ್ಯವನ್ನು ಖಂಡಿಸಲು ಪದಗಳೇ ಸಾಲದು ಎಂದ ಪ್ರಧಾನಿ, ಈ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ತಮ್ಮ ಶ್ರದ್ಧಾಂಜಲಿ ಅರ್ಪಿಸಿದರು.

English summary
Asserting that India can never forget the wounds of 26/11 Mumbai terror attack, Prime Minister Narendra Modi on Thursday said the country is fighting terrorism with a new policy and a new process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X