• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ, ರಾಹುಲ್ ನಿಜಕ್ಕೂ ಜನರ ನೋವು ನಿವಾರಿಸ್ತಾರಾ!?

By Srinath
|

ನವದೆಹಲಿ, ಏಪ್ರಿಲ್ 1: ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಅಘೋಷಿತ ಪ್ರಧಾನಿ ಅಭ್ಯರ್ಥಿ ರಾಹುಲ್ ನಿಜಕ್ಕೂ ನೋವು ನಿವಾರಣೆ ಮಾಡುತ್ತಾರಾ!? ಚುನಾವಣೆಗೆ ಇನ್ನು 16 ದಿನ ಬಾಕಿಯಿರುವಾಗ ಇಂತಹದೊಂದು ಪ್ರಶ್ನೆ ತೂರುಬಂದಿದೆ. ಆದರೆ, ಯಾರು ಬಂದರೂ ಕಿಸಿಯೋದು ಅಷ್ಟರಲ್ಲೇ ಇದೆ. ನಮ್ ತಲೆ ನೋವು ನಮಗೆ, ನಮ್ಮ ಕಷ್ಟ ನಮಗೆ ಅನ್ನುವವರಿಗೆ ಇಲ್ಲೊಂದು ಪರಿಹಾರ ಇದೆ.

ಏನಪ್ಪಾ ಅಂದರೆ ನಮ್ಮ ವ್ಯಾಪಾರಿಗಳು ಚುನಾವಣೆ ಸಂದರ್ಭದಲ್ಲಿ ಒಂದಷ್ಟು ಎಕ್ಸ್ ಟ್ರಾ ತಲೆ ಉಪಯೋಗಿಸಿ, ಮೋದಿ ಮತ್ತು ರಾಹುಲ್‌ ಗಾಂಧಿ ಹೆಸರಿನಲ್ಲಿ ನೋವು ನಿವಾರಕ ಮಾತ್ರೆಗಳನ್ನು ಮಾರಾಟಕ್ಕೆ ಬಿಟ್ಟಿದ್ದಾರೆ. (ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!)

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಹೆಸರಲ್ಲಿ ಟೀ ಶರ್ಟ್‌, ಹೋಳಿ ಬಣ್ಣ, ಪಿಚಕಾರಿ, ಟಿಶ್ಯು ಪೇಪರ್‌ ಅದೀ ಇದೂ ಅಂತ ಜನೋಪಯೋಗಿ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಲಾಭ ಮಾಡಿಕೊಳ್ಳುವುದುಂಟು. ಆದರೆ ಇದೇ ಮೊದಲ ಬಾರಿಗೆ ಔಷಧ ಕಂಪನಿಯೊಂದು ರಾಜಕಾರಣಿಗಳ ಹೆಸರಿನಲ್ಲಿ ಔಷಧಗಳನ್ನು ಬಿಡುಗಡೆ ಮಾಡಿದೆ. ಇದೇನು ಇಂದಿನ ಏಪ್ರಿಲ್ ಫೂಲ್ ಸುದ್ದಿಯಲ್ಲ! ನಿಜಕ್ಕೂ ಮೋದಿ ಮತ್ತು ರಾಹುಲ್‌ ಹೆಸರಿನಲ್ಲಿ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಒಳ್ಳೆಯ ವ್ಯಾಪಾರ ಮಾಡುತ್ತಿವೆ

ICI Health Care Pvt. Ltd ಎಂಬ ಔಷಧ ಕಂಪನಿ ಮಾರುಕಟ್ಟೆಗೆ ಮೊನ್ನೆ ನಮೋ ಟ್ಯಾಬ್ಲೆಟ್‌ (ಪ್ಯಾರಸೆಟಮಾಲ್‌ ಮಾತ್ರೆ) ಮತ್ತು 'ನಮೋನಿ ಜೆಲ್‌' ಎಂಬ ನೋವು ನಿವಾರಕ ಜೆಲ್‌, ಆಯಿಂಟ್ ಮೆಂಟ್, 'ರಾಗಾ ಬಾಮ್‌' ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಔಷಧಗಳ ಪರಿಚಯವಾಗಿದ್ದೇ ತಡ, ಜನ ಈ ಮಾತ್ರೆಗಳು, ನೋವು ನಿವಾರಕ ಜೆಲ್‌ ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರಂತೆ!

ಇಲ್ಲೂ ಮೋದಿಯೇ ಮುಂದು, ರಾಹುಲ್ ಹಿಂದೆ ಹಿಂದೆ:

ನಮೋ ಪ್ಯಾರಸೆಟಮಾಲ್‌ ಮಾತ್ರೆಯ ಒಂದು stripಗೆ 36 ರೂ. ಬೆಲೆಯಿದೆ. ಹಾಗೆಯೇ ರಾಹುಲ್ ಮಾತ್ರೆಗೆ 16 ರೂ. ದರ ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಮಾತ್ರೆಯನ್ನು ಬಿಡುಗಡೆ ಮಾಡಿದ 48 ಗಂಟೆಗಳಲ್ಲಿ 20 ಲಕ್ಷ ಸ್ಟ್ರಿಪ್‌ ಗಳು ಮಾರಾಟವಾಗಿವೆಯಂತೆ. ರಾಹುಲ್‌ ಮಾತ್ರೆಗಿಂತ ಮೋದಿ ಮಾತ್ರೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Election 2014: Painkillers, ointments tablets branded after Narendra Modi - Rahul Gandhi fetching good business. A pharmaceutical firm has brought out painkillers, ointments and tablets branded after BJP’s PM candidate Narendra Modi and Congress vice-president Rahul Gandhi. While the brand Modi products are called ‘NaMo tablets’ and ‘NaMoni Gel’, the Rahul Gandhi brand is called ‘RaGa-flam’.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more