ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ರೈಲ್ವೆ ಬಜೆಟ್ 2014: ಉಳಿದವರು ಕಂಡಂತೆ

By Mahesh
|
Google Oneindia Kannada News

ನವದೆಹಲಿ, ಜು.8: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲೇ ಸಿಕ್ಸರ್ ಬಾರಿಸಿದ್ದಾರೆ. ಮಂಗಳವಾರ ಮಂಡಿಸಿದ ರೈಲ್ವೆ ಬಜೆಟ್ ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರಿ ಹೊಗಳಿಕೆಯ ಮಾತುಗಳು ಕೇಳಿ ಬಂದಿವೆ. ಇದು 21ನೇ ಶತಮಾನದ ಬಜೆಟ್, ಅಭಿವೃದ್ಧಿಶೀಲ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದು ಪ್ರಾಕ್ಟಿಕಲ್ ಬಜೆಟ್ ಅಲ್ಲ ಎಂದು ಟೀಕಿಸಿದ್ದಾರೆ.

ಪ್ರಸಕ್ತ ರೈಲ್ವೇ ಬಜೆಟ್ ಪಾರದರ್ಶಕತೆಯಿಂದ ಕೂಡಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಪ್ರಮಾಣದ ಸಮಗ್ರ ಬಜೆಟ್ ಮಂಡಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಾ ನಂತರ ರೇಲ್ವೇ ಇಲಾಖೆ ಅಭಿವೃದ್ಧಿಯಾಗಿರಲಿಲ್ಲ. ಇಲಾಖೆಯ ಅಭಿವೃದ್ಧಿ ಇಂಜಿನ್ ಹಾಗೆಯೇ ಇದೆ. ಹೀಗಾಗಿ ಇಲಾಖೆಗೆ ಕಾಯಕಲ್ಪ ನೀಡುವುದು ಅವಶ್ಯಕ. ಪ್ರಸಕ್ತ ಬಜೆಟ್ ಸಂಪೂರ್ಣ ಪಾರದರ್ಶಕವಾಗಿದ್ದು, ಸಮಗ್ರ ಬಜೆಟ್ ಅನ್ನು ಇಂದು ಮಂಡನೆಯಾಗಿದೆ. ದೇಶದ ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ'. [ಡಿವಿಎಸ್ ಬುಲೆಟ್ ಬಜೆಟ್ ಹೈಸ್ಪೀಡಲ್ಲಿ ಮುಕ್ತಾಯ ]

'ದೇಶದ ರೈಲುಗಳ ವಿಸ್ತಾರ ಮತ್ತು ವಿಕಾಸವಾಗಬೇಕಿದೆ. ರೈಲ್ವೇ ಇಲಾಖೆಯ ಅಭಿವೃದ್ಧಿಯು ದೇಶದ ಆರ್ಥಿಕತೆಗೆ ಸಹಾಯಕವಾಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.[ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು? ]

ರಾಹುಲ್ ಕಿಡಿ: ಬಜೆಟ್‌ನಲ್ಲಿ ಹಲವು ರಾಜ್ಯಗಳನ್ನು ಕಡೆಗಣಿಸಲಾಗಿದ್ದು, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳನ್ನು ಕಡೆಗಣಿಸಲಾಗಿದೆ. ಯಾವುದೇ ದೂರದೃಷ್ಟಿ ಇಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಪ್ರಾಕ್ಟಿಕಲ್ ಬಜೆಟ್ ಅಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ವಿವಿಧ ಪಕ್ಷಗಳ ಜನ ನಾಯಕರ ಪ್ರತಿಕ್ರಿಯೆಗಳು ಹೀಗಿದೆ: [ರೈಲ್ವೆ ಬಜೆಟ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?]

'ಅಭಿವೃದ್ಧಿ ಶೀಲ ಬಜೆಟ್, ಶತಮಾನದ ಬಜೆಟ್' : ಮೋದಿ

'ಅಭಿವೃದ್ಧಿ ಶೀಲ ಬಜೆಟ್, ಶತಮಾನದ ಬಜೆಟ್' : ಮೋದಿ

ಸದಾನಂದಗೌಡ ಅವರ ಸತತ 1 ಗಂಟೆ 10 ನಿಮಿಷಗಳು ಸುದೀರ್ಘ ರೈಲ್ವೇ ಬಜೆಟ್ ಮಂಡನೆ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಸಕ್ತ ರೈಲ್ವೇ ಬಜೆಟ್ ಪಾರದರ್ಶಕತೆಯಿಂದ ಕೂಡಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಪ್ರಮಾಣದ ಸಮಗ್ರ ಬಜೆಟ್ ಮಂಡಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ

ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ

ಡಿ.ವಿ.ಸದಾನಂದಗೌಡ ಅವರ ಪ್ರಸಕ್ತ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ' ಎಂದು ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶರದ್ ಯಾದವ್, ಜೆಡಿಯು ಮುಖಂಡ

ಶರದ್ ಯಾದವ್ ಜೆಡಿಯು ಮುಖಂಡ ಪ್ರತಿಕ್ರಿಯಿಸುತ್ತಾ ಭಾರತದ ಬಹುತೇಕ ಭಾಗಗಳಿಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಿಂದ ತೀವ್ರ ಪ್ರತಿಭಟನೆ

ದೆಹಲಿಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಬಜೆಟ್ ಖಂಡಿಸಿ ಅವರ ನಿವಾಸದೆದುರು ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ಜಾರಿಯಲ್ಲಿದೆ.

ಧರ್ಮೇಂದ್ರ ಪ್ರಧಾನ್ ರಿಂದ ಹೊಗಳಿಕೆ

ಬಿಜೆಪಿ ಮುಖಂಡ ಧರ್ಮೇಂದ್ರ ಪ್ರಧಾನ್ ಮಾತನಾಡಿ ಇದೊಂದು ಭವಿಷ್ಯದ ದೃಷ್ಟಿಕೋನ ಹೊಂದಿರುವ ಬಜೆಟ್ ಎಂದಿದ್ದಾರೆ.

ರೈಲ್ವೆ ಬೋರ್ಡ್ ಚೇರ್ಮನ್ ಹೇಳಿಕೆ

ರೈಲ್ವೆ ಬೋರ್ಡ್ ಚೇರ್ಮನ್ ಅರುಣೇಂದ್ರ ಕುಮಾರ್ ಮಾತನಾಡಿ, ತಂತ್ರಜ್ಞಾನದ ಸದ್ಬಳಕೆಗೆ ಒತ್ತು ನೀಡಿದ ಮೊದಲ ಬಜೆಟ್ ಇದಾಗಿದೆ. ಪಿಪಿಪಿ ಹಾಗೂ ಎಫ್ ಡಿಐ ಸರ್ವಮಾನ್ಯವಾಗಲಿದೆ ಎಂದಿದ್ದಾರೆ.

ನಷ್ಟದಲ್ಲಿರುವ ಇಲಾಖೆ ಅಧುನೀಕರಣ ಹೇಗೆ?

ನಷ್ಟದಲ್ಲಿರುವ ಇಲಾಖೆ ಅಧುನೀಕರಣಕ್ಕೆ ಒತ್ತು ನೀಡುವುದಾದರೂ ಹೇಗೆ, ಬುಲೆಟ್ ಟ್ರೈನ್ ಬಗ್ಗೆ ಇಲಾಖೆ ಸಮೀಕ್ಷೆ ಸಮಂಜಸವಾಗಿದೆಯೇ? ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ.

ಆದ್ಯತೆ ಮೇರೆಗೆ ಯೋಜನೆಗಳು ಪೂರ್ಣ

ಆದ್ಯತೆ ಮೇರೆಗೆ ಯೋಜನೆಗಳು ಪೂರ್ಣಗೊಳಿಸಲಾಗುವುದು, ಕೆಲವರಿಗೆ ಬಿಜೆಪಿ ಉತ್ತಮ ಬಜೆಟ್ ಮಂಡಿಸಿರುವುದನ್ನು ಕಂಡು ಹೊಟ್ಟೆ ಉರಿಯುತ್ತಿದೆ: ವೆಂಕಯ್ಯ ನಾಯ್ಡು, ಕೇಂದ್ರ ವಸತಿ ಸಚಿವ

ಬಜೆಟ್ ಮಂಡನೆ ನನಗೆ ಗೊತ್ತಾಗಲಿಲ್ಲ: ಲಾಲೂ

ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಮಾತನಾಡಿ, ಬರೆದುಕೊಂಡಿದ್ದನ್ನು ಅತುರಾತುರವಾಗಿ ಸದಾನಂದ ಗೌಡರು ಓದಿ ಮುಗಿಸಿದ್ದು ಬಿಟ್ಟರೆ ಮತ್ತೇನು ನಡೆಯಿತು ಗೊತ್ತಾಗಲಿಲ್ಲ ಎಂದಿದ್ದಾರೆ.

ಅಧೀರ್ ರಂಜನ್ ಚೌಧರಿ ಹೇಳಿಕೆ

ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವ ಅಧೀರ್ ರಂಜನ್ ಚೌಧರಿ ಹೇಳಿಕೆ: ಇದು ಪಿಪಿಪಿ, ಎಫ್ ಡಿಐ ಹಾಗೂ ಖಾಸಗೀಕರಣದ ಬಜೆಟ್, ಜನ ಸಾಮಾನ್ಯರ ಬಜೆಟ್ ಅಲ್ಲ

ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿಕೆ: ಇದು ರೈಲ್ವೆ ಬಜೆಟ್ ಅಲ್ಲ, ರೈಲ್ವೆ ಇಲಾಖೆ ಖಾಸಗೀಕರಣ ಪತ್ರ

English summary
Prime Minister Narendra Modi said on Tuesday his government's maiden railway budget shows the importance of Indian Railways in the journey of the country's development adding it focuses on "transparency and integrity".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X