ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಸ್ಪರ್ಧಿಸಿರುವ ಮಾಜಿ ಸೈನಿಕನಿಗೆ ಆಯೋಗ ನೊಟೀಸ್

|
Google Oneindia Kannada News

ನವದೆಹಲಿ, ಮೇ 01: ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಬಿಎಸ್‌ಪಿ ಅಭ್ಯರ್ಥಿ, ಮಾಜಿ ಬಿಎಸ್‌ಎಫ್‌ ಸೈನಿಕ ತೇಜ್‌ಬಹದ್ದೂರ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.

ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸೈನಿಕನ ನಾಮಪತ್ರ ತಿರಸ್ಕೃತಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸೈನಿಕನ ನಾಮಪತ್ರ ತಿರಸ್ಕೃತ

ತೇಜ್‌ಬಹದ್ದೂರ್ ಸಲ್ಲಿಸಿರುವ ನಾಮಪತ್ರದಲ್ಲಿ ಕೆಲ ವಿಷಯಗಳನ್ನು ಮುಚ್ಚಿಡಲಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದ್ದು, ಈ ಕುರಿತು ಉತ್ತರ ನೀಡುವಂತೆ ತೇಜ್ ಬಹದ್ದೂರ್ ಅವರನ್ನು ಕೋರಿದೆ.

ಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರ

ತೇಜ್ ಬಹದ್ದೂರ್ ಅವರು ಬಿಎಸ್‌ಎಫ್ ಸೇವೆಯಿಂದ ವಜಾಗೊಂಡಿದ್ದಾರೆ. ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದಡಿ ಸೇವೆಯಿಂದ ವಜಾಗೊಂಡ ವ್ಯಕ್ತಿ ಐದು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಹಾಗಾಗಿ ಸೇವೆಯಿಂದ ವಜಾಗೊಂಡಿರುವ ತೇಜ್‌ಬಹದ್ದೂರ್ ಅವರು ಬಿಎಸ್‌ಎಫ್‌ನಿಂದ ನಿರಪೇಕ್ಷಣಾ ಪತ್ರ ತರುವಂತೆ ಆಯೋಗ ಸೂಚಿಸಿದೆ.

Modi opposite candidate Tej Bahadur Yadav gets EC notice

ಮೊದಲಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ತೇಜ್‌ಬಹದ್ದೂರ್ ಅವರು, ಬಿಎಸ್‌ಎಫ್‌ನಿಂದ ವಜಾ ಆಗಿರುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಿದ್ದರು, ಆದರೆ ಬಿಎಸ್ಎಸ್‌ಪಿ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರದಲ್ಲಿ ಈ ಮಾಹಿತಿ ಇಲ್ಲ ಎನ್ನಲಾಗುತ್ತಿದೆ.

ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಚ್ಚರಿಯ ನಡೆ, ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲು ವಾರಣಾಸಿಯಲ್ಲಿ ಎಸ್ಪಿ-ಬಿಎಸ್ಪಿ ಅಚ್ಚರಿಯ ನಡೆ, ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲು

ಸೈನಿಕರಿಗೆ ಪೂರೈಸಲಾಗುತ್ತಿರುವ ಕಳಪೆ ಆಹಾರದ ಬಗ್ಗೆ ವಿಡಿಯೋ ಮಾಡಿದ್ದ ತೇಜ್‌ಬಹದ್ದೂರ್ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಇದು ಬಹುವಾಗಿ ಸುದ್ದಿಯಾಗಿತ್ತು. ಹಾಗಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ನರೇಂದ್ರ ಮೋದಿ Vs ತೇಜ್ ಬಹಾದೂರ್! ಯಾರು 'ಅಸಲಿ' ಚೌಕಿದಾರ್?ನರೇಂದ್ರ ಮೋದಿ Vs ತೇಜ್ ಬಹಾದೂರ್! ಯಾರು 'ಅಸಲಿ' ಚೌಕಿದಾರ್?

English summary
BSF former serviceman Tej Bahadur Yadav who contesting Lok sabha elections 2019 from Varanas against Narendra Modi has been issued notice from election commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X