• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಒಂದು ದಿನ ತಾಜ್‌ಮಹಲನ್ನೂ ಮಾರುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ

|

ನವದೆಹಲಿ, ಫೆಬ್ರವರಿ 4: ಎಲ್ಲವನ್ನೂ ಮಾರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದೊಂದು ದಿನ ತಾಜ್ ಮಹಲ್‌ಅನ್ನೂ ಮಾರಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ನವದೆಹಲಿಯ ಜಂಗಪುರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ಅವರು, ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದರು.

'ಮೇಕ್ ಇನ್ ಇಂಡಿಯಾ ಎಂಬ ಉತ್ತಮವಾದ ಘೋಷಣೆಯನ್ನೇನೋ ಪ್ರಧಾನಿ ಮೋದಿ ಮಾಡಿದರು. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ಒಂದೇ ಒಂದು ಕಾರ್ಖಾನೆಯನ್ನೂ ನಿರ್ಮಿಸಲಿಲ್ಲ' ಎಂದು ಟೀಕಿಸಿದರು.

'ಹಣಕಾಸು ಸಚಿವರೇ, ಪ್ರಶ್ನೆಗೆ ಹೆದರಬೇಡಿ, ಉತ್ತರ ಕೊಡಿ ಸಾಕು'

ಪ್ರಧಾನಿ ಮೋದಿ ಅವರಿಗೆ ಧರ್ಮಗಳ ಬಗ್ಗೆ ತಿಳಿವಳಿಕೆ ಇಲ್ಲ. ಯಾವುದೇ ಪವಿತ್ರ ಗ್ರಂಥ ಹಿಂಸೆಯ ಬಗ್ಗೆ ಮಾತನಾಡುವುದಿಲ್ಲ. ಹಿಂಸೆಯನ್ನು ಹರಡುವುದೇ ಭಾರತೀಯ ಜನತಾ ಪಕ್ಷದ ಕೆಲಸವಾಗಿದೆ ಎಂದು ಆರೋಪಿಸಿದರು.

ತಾಜ್‌ಮಹಲನ್ನೂ ಮಾರುತ್ತಾರೆ

ತಾಜ್‌ಮಹಲನ್ನೂ ಮಾರುತ್ತಾರೆ

'ಅವರು ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಇಂಡಿಯನ್ ಆಯಿಲ್, ಏರ್ ಇಂಡಿಯಾ, ಹಿಂದೂಸ್ತಾನ್ ಪೆಟ್ರೋಲಿಯಂ, ರೈಲ್ವೆ ಮತ್ತು ಕೆಂಪುಕೋಟೆಯನ್ನೂ ಮಾರುತ್ತಿದ್ದಾರೆ. ಒಂದು ದಿನ ಅವರು ತಾಜ್‌ಮಹಲ್‌ಅನ್ನು ಕೂಡ ಮಾರಾಟ ಮಾಡಬಹುದು' ಎಂದು ಲೇವಡಿ ಮಾಡಿದರು.

ಮನೆ ಬಾಗಿಲಿಗೆ ಪಡಿತರ ವಿತರಣೆ, ದೆಹಲಿಗಾಗಿ ಎಎಪಿ ಪ್ರಣಾಳಿಕೆ

ನಿಮಗೆ ಕೆಲಸ ಸಿಕ್ಕಿದೆಯೇ?

ನಿಮಗೆ ಕೆಲಸ ಸಿಕ್ಕಿದೆಯೇ?

ಅನೇಕ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರೂ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾದ ನಿರುದ್ಯೋಗದ ಪರಿಸ್ಥಿತಿಯನ್ನು ಪರಿಹರಿಸುವುದು ಪ್ರಧಾನಿ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಾಧ್ಯವಿಲ್ಲ.

ದೇಶದ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆಯನ್ನು ಮೋದಿ ಈಡೇರಿಸಿದ್ದಾರೆಯೇ? ಎಂದು ರಾಹುಲ್ ಪ್ರಶ್ನಿಸಿದರು. 'ಆ ಮಾತು ನಿಮಗೆ ನೆನಪಿದೆಯೇ? ನಿಮಗೆ ಆ ಉದ್ಯೋಗಗಳು ಸಿಕ್ಕಿದೆಯೇ? ದೆಹಲಿಯಲ್ಲಿ ನಿರುದ್ಯೋಗವನ್ನು ಕಿತ್ತೊಗೆಯಲು ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಏನು ಮಾಡಿದ್ದಾರೆ?' ಎಂದು ಕೇಳಿದರು.

ಉದ್ಯೋಗ ಸೃಷ್ಟಿಯ ಆಸಕ್ತಿ ಇಲ್ಲ

ಉದ್ಯೋಗ ಸೃಷ್ಟಿಯ ಆಸಕ್ತಿ ಇಲ್ಲ

ಮೇಡ್ ಇನ್ ಇಂಡಿಯಾ ಅನುಷ್ಠಾನಕ್ಕೆ ಬಂದರೆ ದೇಶದ ಎರಡು ಕೋಟಿ ಯುವಜನರಿಗೆ ಪ್ರತಿ ವರ್ಷ ಉದ್ಯೋಗ ಸಿಗುತ್ತದೆ. ಆದರೆ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ಅದರ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಅವರು ಬಯಸಿರುವುದು ಜನರು ಒಬ್ಬರ ಜತೆಗೊಬ್ಬರು ಹೊಡೆದಾಡಿಕೊಳ್ಳುವುದನ್ನು ಮತ್ತು ತಾವು ಅಧಿಕಾರ ಪಡೆದುಕೊಳ್ಳುವುದು ಎಂದು ಟೀಕಿಸಿದರು.

ದೆಹಲಿ ಮತದಾರರಿಗೆ ಸ್ಪೈಸ್ ಜೆಟ್ ಟಿಕೆಟ್ ದರದಲ್ಲಿ ರಿಯಾಯಿತಿ

ದೇಶ ನಡೆಸುತ್ತಿರುವುದು ಅದಾನಿ, ಅಂಬಾನಿ

ದೇಶ ನಡೆಸುತ್ತಿರುವುದು ಅದಾನಿ, ಅಂಬಾನಿ

'ಅದಾನಿ ಮತ್ತು ಅಂಬಾನಿ, ಈ ಎರಡು ಹೆಸರು ನೆನಪಿಡಿ. ಈ ಸರ್ಕಾರ ನಡೆಯುತ್ತಿರುವುದು ಅವರಿಂದಲೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಲ್ಲ. ಮತ್ತು ಎಲ್ಲ ಲಾಭಗಳನ್ನೂ ಅವರೇ ಇಬ್ಬರು ಪಡೆದುಕೊಳ್ಳುತ್ತಿದ್ದಾರೆ. ಅದಾನಿಗೆ ಮೋದಿ ನೀಡಿದ ಪ್ರಾಜೆಕ್ಟ್‌ಗಳ ಪಟ್ಟಿಯನ್ನು ನಿಮಗೆ ಕೊಡುವ ಬಗ್ಗೆ ಆಲೋಚಿಸುತ್ತಿದ್ದೇನೆ. ಆ ಯೋಜನೆಗಳ ಹೆಸರನ್ನು ಓದಲು ನನಗೆ ಕನಿಷ್ಠ 45 ನಿಮಿಷಗಳಾದರೂ ಬೇಕಾಗುತ್ತದೆ. ಅಷ್ಟು ದೊಡ್ಡದಿದೆ' ಎಂದು ಆರೋಪಿಸಿದರು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Congress leader Rahul Gandhi during his rally in Delhi assembly elections 2020, attacked PM Narendra Modi that, he might even sell the Taj Mahal one day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X