ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆ ಮೋದಿ ಚರ್ಚೆ: ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಜೂನ್ 2: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆಗೆ ಸಭೆ ಕರೆದು ಚರ್ಚೆ ನಡೆಸಿದ್ದಾರೆ.

ಕೊರೊನಾ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಉದ್ಯಮಿಗಳ ಜೊತೆ ಕರೆದ ಮೊದಲ ಸಭೆ ಇದಾಗಿದೆ. ಭಾರತದ ಆರ್ಥಿಕತೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆ ನಡೆಸಿದರು.

ಸಂಪುಟ ಸಭೆ ಬಳಿಕ ಕೇಂದ್ರ ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳುಸಂಪುಟ ಸಭೆ ಬಳಿಕ ಕೇಂದ್ರ ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

ಕಳೆದ ಎರಡು ತಿಂಗಳಿನಿಂದ ಭಾರತದ ಆರ್ಥಿಕತೆ ಕುಗ್ಗಿದೆ, ಅದನ್ನು ಮೇಲೆತ್ತಲು ಏನೆಲ್ಲಾ ಪ್ರಯತ್ನಗಳನ್ನು ನಡೆಸಬೇಕು ಎನ್ನುವ ಕುರಿತು ಮಾತನಾಡಿದರು. ಉದ್ದೇಶ, ಸೇರ್ಪಡೆ,ಹೂಡಿಕೆ, ಮೂಲ ಸೌಕರ್ಯ, ನಾವೀನ್ಯತೆ ಅಥವಾ ಸಂಶೋಧನೆ ಅತಿಮುಖ್ಯವಾಗಿರುತ್ತದೆ ಎಂದರು.

Modi Meeting With Top Industrial Body Highlights

ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು

- ಈ ರೀತಿಯ ಆನ್‌ಲೈನ್ ಸಭೆಗಳು ಕೊವಿಡ್ 19 ರೋಗ ಬಂದಾಗಿನಿಂದ ಸಾಮಾನ್ಯವಾಗಿಬಿಟ್ಟಿದೆ.
-ಭಾರತದ ಸಂಶೋಧನೆ, ಉದ್ಯಮಿಗಳು ನಿಮ್ಮನ್ನೇ ನಂಬಿದ್ದೇನೆ ನಿಮ್ಮೆಲ್ಲರ ಸಹಕಾರದಿಂದ ಆರ್ಥಿಕತೆ ಮರುಸ್ಥಾಪನೆ ಸಾಧ್ಯ.
-ಕೊರೊನಾ ವೈರಸ್ ನಮ್ಮನ್ನು ನಿಧಾನಗತಿಯಲ್ಲಿ ಸಾಗುವಂತೆ ಮಾಡಿದೆ, ಆದರೆ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಆರ್ಥಿಕತೆ ಪುನರಾರಂಭಗೊಳ್ಳಲಿದೆ.
-ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಡಬೇಕು, ನಾವು ಕೇವಲ ಭೌದ್ಧಿಕ ಸಂಪನ್ಮೂಲಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ, ಆದರೆ ಮಾನವ ಸಂಪನ್ಮೂಲಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
-ಉದ್ದೇಶ, ಸೇರ್ಪಡೆ,ಹೂಡಿಕೆ, ಮೂಲ ಸೌಕರ್ಯ, ನಾವೀನ್ಯತೆ ಅಥವಾ ಸಂಶೋಧನೆ ಅತಿಮುಖ್ಯವಾಗಿರುತ್ತದೆ.
-ಆರ್ಥಿಕತೆಯನ್ನು ಬಲಗೊಳಿಸುವ ಮೂಲಕ ದೇಶವನ್ನು ಬಲಗೊಳಿಸುವ ಅಗತ್ಯವಿದೆ
-ಎಂಎಸ್‌ಎಂಇಗೆ ಸಾಧ್ಯವಾದಷ್ಟು ಸಹಾಯ ಮಾಡಲಾಗುತ್ತದೆ, ಅದನ್ನು ಮೊದಲು ಬಲಗೊಳಿಸುವ ಅಗತ್ಯವಿದೆ.
-ಭಾರತದ ಆರ್ಥಿಕತೆಯ ಮೂಲ ಈ ಎಂಎಸ್‌ಎಂಇಗಳಾಗಿವೆ. ಎಲ್ಲಾ ವಿಧದಲ್ಲೂ ಸಹಾಯ ಮಾಡಲಾಗುತ್ತದೆ. ಭಾರತದಲ್ಲಿ ವಸ್ತುಗಳನ್ನು ಹೆಚ್ಚು ಬಳಸಿ, ಆದಷ್ಟು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಮೋದಿ ಕರೆ ನೀಡಿದ್ದಾರೆ.

English summary
Prime Minister Narendra Modi is addressing the annual session of the top industrial body - the Confederation of Indian Industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X