ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಹೊಗಳಿಕೆಯೂ ಸಾಲದು; ಕಿಡ್ನಿ ದಾನ ಮಾಡಿದ ಮಹಿಳೆಗೆ ಮೋದಿ ಮೆಚ್ಚುಗೆ ಪತ್ರ

|
Google Oneindia Kannada News

ನವದೆಹಲಿ, ಫೆಬ್ರುವರಿ 15: ಅನಾಥ ವ್ಯಕ್ತಿಗೆ ಮೂತ್ರಪಿಂಡ ದಾನ ಮಾಡಿದ್ದ ಕೋಲ್ಕತ್ತಾ ಮೂಲದ ಮಹಿಳೆಗೆ ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಪತ್ರ ಬಂದಿದೆ. ಈ ನಿಸ್ವಾರ್ಥ ದಾನಕ್ಕೆ ಯಾವ ಹೊಗಳಿಕೆಯೂ ಸಮವಾಗಲಾಗದು ಎಂದು ಮೋದಿ ಮಹಿಳೆಗೆ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಗಾಂಗ ದಾನದ ಮಹತ್ವದ ಬಗ್ಗೆ ಮೋದಿಯವರ ಭಾಷಣದಿಂದ ಪ್ರೇರೇಪಿತಳಾಗಿ ತಾನು ಕಿಡ್ನಿ ದಾನ ಮಾಡಿರುವುದಾಗಿ ಕೋಲ್ಕತ್ತಾದ ಮನಾಶಿ ಹಲ್ದೆರ್ (48) ಎಂಬ ಮಹಿಳೆ ತಿಳಿಸಿದ್ದಾರೆ. 2014ರಲ್ಲೇ ಮಹಿಳೆಯು ಕಿಡ್ನಿ ದಾನ ಮಾಡಿದ್ದು, ಮೋದಿ ಅವರಿಗೆ ಕೆಲವೇ ತಿಂಗಳ ಹಿಂದೆ ಪತ್ರ ಬರೆದಿದ್ದರು. ಪತ್ರಕ್ಕೆ ಉತ್ತರ ಬಂದಿದ್ದು, ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೋದಿ ಹುಟ್ಟುಹಬ್ಬದ ಪ್ರಯುಕ್ತ ಪ್ಲಾಸ್ಮಾ ದಾನ ಮಾಡಿದ ಮಂಗಳೂರು ಶಾಸಕಮೋದಿ ಹುಟ್ಟುಹಬ್ಬದ ಪ್ರಯುಕ್ತ ಪ್ಲಾಸ್ಮಾ ದಾನ ಮಾಡಿದ ಮಂಗಳೂರು ಶಾಸಕ

"ಒಂದು ಅಮೂಲ್ಯ ಜೀವ ಉಳಿಸಲು ಮೂತ್ರಪಿಂಡ ದಾನ ಮಾಡಿರುವ ನಿಮ್ಮ ಉದಾತ್ತ ಕಾರ್ಯದ ಬಗ್ಗೆ ತಿಳಿದು ನನಗೆ ತುಂಬಾ ಸಂತೋಷವಾಯಿತು. ನಿಮ್ಮ ಈ ನಿಸ್ವಾರ್ಥ ದಾನಕ್ಕೆ ಯಾವ ಹೊಗಳಿಕೆಯೂ ಸಮವಾಗದು. ತ್ಯಾಗ ಮತ್ತು ಸಹಾನುಭೂತಿ ಎಂದಿಗೂ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಮೂಲ" ಎಂದು ಮಹಿಳೆಗೆ ಉತ್ತರಿಸಿದ್ದಾರೆ.

Modi Letter Of Praise To Woman Kidney Donor From Kolkata

ಹೊಸ ಜೀವ, ಜೀವನ ನೀಡುವ ಅಂಗಾಂಗ ದಾನ ಅತಿ ದೊಡ್ಡ ದಾನ. ನಮ್ಮ ದೇಶದಲ್ಲಿ ಇದರ ಅಗತ್ಯವಿರುವ ಸಾಕಷ್ಟು ಮಂದಿ ಇದ್ದಾರೆ. ಅಂಗಾಂಗ ದಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದಿದ್ದಾರೆ. ನಿಮ್ಮ ಈ ದಾನ ಸ್ಫೂರ್ತಿದಾಯಕವಾಗಿದೆ. ಇನ್ನಷ್ಟು ಮಂದಿ ಅಂಗಾಂಗ ದಾನಕ್ಕೆ ಮುಂದೆ ಬರುವಂತೆ ಪ್ರೇರೇಪಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

English summary
Manashi Halder (48) a kidney donor from kolkatta recieves letter of praise from narendra modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X