ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥೇಮ್ಸ್ ದಡದಲ್ಲಿ ಬಸವಣ್ಣನ ಪುತ್ಥಳಿ, ಮೋದಿಗೆ ಆಹ್ವಾನ

By Prasad
|
Google Oneindia Kannada News

ನವದೆಹಲಿ, ಮಾ. 26 : ಹನ್ನೆರಡನೇ ಶತಮಾನದ ಪ್ರಮುಖ ವಚನಕಾರ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ತತ್ತ್ವಜ್ಞಾನಿ ಜಗಜ್ಯೋತಿ ಬಸವೇಶ್ವರ ಅವರ ಕಂಚಿನ ಪುತ್ಥಳಿಯನ್ನು ಲಂಡನ್‌ನ ಥೇಮ್ಸ್ ನದಿಯ ದಡದ ಮೇಲೆ ಅನಾವರಣಗೊಳಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ.

ಲ್ಯಾಂಬೆತ್‌ನ ಮಾಜಿ ಮೇಯರ್ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ಮಂಗಳವಾರ, ಮಾ.24ರಂದು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಪುತ್ಥಳಿ ಅನಾವರಣಗೊಳಿಸಲು ಬ್ರಿಟನ್ನಿನಲ್ಲಿರುವ ಭಾರತೀಯರ ಪರವಾಗಿ ಆಹ್ವಾನ ನೀಡಿದರು. ಮುಂದಿನ ಬಾರಿ ಲಂಡನ್ ಪ್ರವಾಸ ಕೈಗೊಂಡಾಗ ಬಸವಣ್ಣನ ಮೂರ್ತಿ ಅನಾವರಣಗೊಳಿಸಲು ಕೋರಲಾಗಿದೆ. [ಬಸವಣ್ಣನ ವಚನಗಳು ಮೊಬೈಲಿನಲ್ಲಿ]

Modi invited to unveil statue of Basavanna in London

ಈ ಸಂದರ್ಭದಲ್ಲಿ, ಹನ್ನೆರಡನೇ ಶತಮಾನದಲ್ಲಿ ಜಾತಿ, ಮತ, ಲಿಂಗ ಭೇದವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಣ್ಣನವರನ್ನು ಮತ್ತು ಅವರ ಬೋಧನೆಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದೇನೆ ಎಂದು ನರೇಂದ್ರ ಮೋದಿ ಅವರು ನೀರಜ್ ಪಾಟೀಲ್ ಅವರಿಗೆ ತಿಳಿಸಿದರು. ಪಾಟೀಲ್ ಅವರು ಮೋದಿಗೆ ಬಸವಣ್ಣನ ಪ್ರತಿಕೃತಿಯನ್ನು ನೀಡಿದರು.

ಬ್ರಿಟಿಷ್ ಪಾರ್ಲಿಮೆಂಟಿನ ಎದುರಿನಲ್ಲಿ, ಥೇಮ್ಸ್ ನದಿಯ ದಡದಲ್ಲಿ, ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ, ಬಿಗ್ ಬೆನ್ ಎದುರು ಬಸವೇಶ್ವರ ಅವರ ಕಂಚಿನ ಪುತ್ಥಳಿಯ ಅನಾವರಣಕ್ಕಾಗಿ ಬ್ರಿಟಿಷ್ ಪಾರ್ಲಿಮೆಂಟಿನ ಅನುಮತಿ ಪಡೆಯಲು ಭಾರತೀಯರು ನಡೆಸಿದ ಪ್ರಯತ್ನವನ್ನು ಮೋದಿ ಶ್ಲಾಘಿಸಿದರು. [ಬ್ರಿಟನ್ನಿನಿಂದ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಒಪ್ಪಿಗೆ]

ಮೇ 2015ರಲ್ಲಿ ಬ್ರಿಟನ್ನಿನಲ್ಲಿ ನಡೆಯಲಿರುವ ಮಹಾ ಚುನಾವಣೆಯ ನಂತರ ಜೂನ್ ಅಥವಾ ಜುಲೈ ತಿಂಗಳಲ್ಲಿ ನರೇಂದ್ರ ಮೋದಿ ಅವರು ಬ್ರಿಟನ್ನಿಗೆ ಭೇಟಿ ಕೊಡುವ ಸಂಭವನೀಯತೆಯಿದ್ದು, ಆ ಸಮಯದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಭಾರತದ ಸಂಸತ್ತಿನಲ್ಲಿಯೂ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಲಾಗಿದೆ.

English summary
Prime minister of India Narendra Modi has been invited to unveil statue of 12th century philisopher Basaveshwara, known also as Basavanna. Former mayor of Lambeth by Dr Neeraj Patil, a Kannadiga from Gulbarga, invited Modi on behalf of British Indian community. The statue will be unveiled in June or July of 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X