ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರ ತಡೆ ಮಸೂದೆ ಮಂಡನೆಗೆ ಮೋದಿ ಸರ್ಕಾರ ಸಜ್ಜು

|
Google Oneindia Kannada News

ನವದೆಹಲಿ, ಆಗಸ್ಟ್ 10: ಈ ಬಾರಿಯ ಅಧಿವೇಶನದಲ್ಲಿ 30ಕ್ಕೂ ಅಧಿಕ ಮಸೂದೆಗಳನ್ನು ಮಂಡಿಸಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆಗಳಲ್ಲಿ ಅನುಮೋದನೆ ಪಡೆದುಕೊಂಡಿರುವ ಎನ್‌ಡಿಎ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಮತ್ತಷ್ಟು ಮಹತ್ವ ಮಸೂದೆಗಳನ್ನು ಮಂಡಿಸಲು ತಯಾರಿ ನಡೆಸಿದೆ.

ಮುಂಬರುವ ಅಧಿವೇಶನದಲ್ಲಿ ಮತಾಂತರ ತಡೆ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.

ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು? ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು?

ಮತಾಂತರ ತಡೆ ಮಸೂದೆಯ ಮಂಡನೆಗೆ ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆಗಳನ್ನು ನಡೆಸಿದೆ. ಯಾವುದೇ ರೀತಿಯ ಮತಾಂತರಗಳಿಗೆ ನಿರ್ಬಂಧ ವಿಧಿಸುವ ಮಸೂದೆಯನ್ನು ಜಾರಿಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

Modi Government To Introduce Prevent Religious Conversion Bll

ಜಮ್ಮು ಮತ್ತು ಕಾಶ್ಮೀರ ಪುನರ್ ರಚನಾ ಮಸೂದೆ, ತ್ರಿವಳಿ ತಲಾಕ್ ಅನ್ನು ಅಪರಾಧ ಎಂದು ಪರಿಗಣಿಸುವ ಮುಸ್ಲಿಂ ಮಹಿಳೆಯ (ವಿವಾಹದ ಹಕ್ಕು ರಕ್ಷಣೆ) ಮಸೂದೆ, ವಿವಾದ ಸೃಷ್ಟಿಸಿರುವ ಕಾನೂನು ಬಾಹಿರ ಚಟುವಟಿಕೆ (ತಿದ್ದುಪಡಿ) ಮಸೂದೆ, ಮೋಟಾರು ವಾಹನ ಕಾಯ್ದೆ, ಆರ್‌ಟಿಐ ತಿದ್ದುಪಡಿ ಮಸೂದೆ ಸೇರಿದಂತೆ 30ಕ್ಕೂ ಅಧಿಕ ಅನೇಕ ಮಸೂದೆಗಳನ್ನು ಈ ಬಾರಿಯ ಸಂಸತ್‌ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಒಂದು ಅಧಿವೇಶನದ ಅವಧಿಯಲ್ಲಿ ಇಷ್ಟೊಂದು ಮಸೂದೆಗಳನ್ನು ಅಂಗೀಕರಿಸಿರುವುದು ಇದೇ ಮೊದಲು.

ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ

33 ಮಸೂದೆಗಳನ್ನು ಲೋಕಸಭೆ ಮತ್ತು ಏಳು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಸೇರಿದಂತೆ ಒಟ್ಟು 40 ಮಸೂದೆಗಳನ್ನು ಮಂಡಿಸಲಾಗಿತ್ತು.

ಮುಂದಿನ ಸಂಸತ್ ಅಧಿವೇಶನದ ವೇಳೆಗೆ ಇನ್ನೂ ಹಲವು ಮಸೂದೆಗಳನ್ನು ಮಂಡಿಸಲಾಗುತ್ತದೆ. ಅವುಗಳಲ್ಲಿ ಧಾರ್ಮಿಕ ಮತಾಂತರ ತಡೆ ಮಸೂದೆ ಕೂಡ ಸೇರಿರುತ್ತದೆ. ಬಲವಂತ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ತಡೆ ನೀಡುವ ಕಾಯ್ದೆ ಜಾರಿ ತರಲು ಈ ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ.

English summary
Narendra Modi government is likely to introduce a bill prevent religious conversion in the next parliament session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X