ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ಮೋದಿ

|
Google Oneindia Kannada News

ನವದೆಹಲಿ, ಮಾರ್ಚ್ 7: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ.

ಫಲುಆನುಭವಿಯೊಬ್ಬರು ತಾವು ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ತಾವು ಅನುಭವಿಸಿದ ಯಾತನೆ, ಸವಾಲುಗಳನ್ನು ಮೋದಿ ಎದುರು ಹೇಳಿಕೊಂಡಾಗ ಅವರ ಕಷ್ಟಗಳನ್ನು ಕೇಳಿ ಮೋದಿ ಕೂಡ ಕಣ್ಣೀರಿಟ್ಟರು.

ನರೇಂದ್ರ ಮೋದಿಯವರು ಡೆಹ್ರಾಡೂನ್ ಮೂಲದ ಮಹಿಳೆ ದೀಪಾ ಶಾ ಅವರ ಬಳಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಜನ್ ಔಷಧಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಭೆ ಇದಾಗಿತ್ತು.

ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಉತ್ತಮ ಚಿಕಿತ್ಸೆಗಾಗಿ ಪರದಾಡಬೇಕಾಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡರು.

2011ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದೆ

2011ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದೆ

''2011ರಲ್ಲಿ ನಾನು ಪಾರ್ಶ್ವವಾಯುವಿಗೆ ತುತ್ತಾದೆ, ನನ್ನ ಬಾಯಿಂದೇ ಮಾತೇ ಹೊರಡುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಾದೆ ಚಿಕಿತ್ಸೆಗೆ ತುಂಬಾ ವೆಚ್ಚ ತಗುಲಿತು. ತಿಂಗಳಿಗೆ 5 ಸಾವಿರ ರೂ ಚಿಕಿತ್ಸೆಗಾಗಿ ನೀಡಬೇಕಿತ್ತು. ಆದರೆ ಜನೌಷಧಿ ಯೋಜನೆ ಬಂದ ಬಳಿಕ ಕೇವಲ 1500 ರೂ.ಗೆ ಔಷಧ ದೊರೆಯುತ್ತಿದೆ. ಉಳಿದಿರುವ ಬಾಕಿ 2000-3000 ರೂ. ಹಣದಲ್ಲಿ ಹಣ್ಣು, ತರಕಾರಿಗಳನ್ನು ತಂದು ತಿನ್ನುತ್ತೇನೆ'' ಎಂದು ಅವರು ಹೇಳಿದರು.

ಮೋದೀಜಿ ನನ್ನ ಪಾಲಿಗೆ ನೀವೇ ದೇವರು

ಮೋದೀಜಿ ನನ್ನ ಪಾಲಿಗೆ ನೀವೇ ದೇವರು

ಮೋದಿಯವರೇ ನಾನು ದೇವರನ್ನು ನೋಡಿಲ್ಲ, ನನ್ನ ಪಾಲಿಗೆ ನೀವೇ ದೇವರು, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಅದು ಕಡಿಮೆಯೇ, ಮುಖ್ಯಮಂತ್ರಿಗಳು ಕೂಡ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಬದುಕುತ್ತೇನೆಂಬ ಎಲ್ಲಾ ಭರವಸೆಗಳನ್ನು ವೈದ್ಯರು ಕಳೆದುಕೊಂಡಿದ್ದರು. ಈಗ ನಾನು ಬದುಕಿದ್ದೇನೆ ಎಂದರೆ ಅದಕ್ಕೆ ನೀವೇ ಕಾರಣ ಎಂದು ಮಹಿಳೆ ಕಣ್ಣೀರಿಟ್ಟಳು.

ಜನೌಷಧಿ ದಿನ ಆಚರಣೆ ಎಂದು?

ಜನೌಷಧಿ ದಿನ ಆಚರಣೆ ಎಂದು?

ಕೇಂದ್ರ ಸರ್ಕಾರವು ಮಾರ್ಚ್ 7ರಂದು ಜನೌಷಧಿ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಜನರಿಕ್ ಮೆಡಿಸಿನ್ ಕುರಿತು ದೇಶದ ಜನರಿಗೆ ತಿಳಿ ಹೇಳಲಾಗುತ್ತಿದೆ.

ಜನೌಷಧಿ ಮಳಿಗೆಗಳಿರುವುದೆಲ್ಲಿ?

ಜನೌಷಧಿ ಮಳಿಗೆಗಳಿರುವುದೆಲ್ಲಿ?

ದೇಶದಾದ್ಯಂತ 700 ಜಿಲ್ಲೆಗಳಲ್ಲಿ ಒಟ್ಟು 6200 ಜನೌಷಧಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆ ಸಾಕಷ್ಟು ಮಂದಿಗೆ ಉದ್ಯೋಗಾವಕಾಶವನ್ನು ಕೂಡ ಕಲ್ಪಿಸಿದೆ.

English summary
Video Goes Viral, Prime minister Narendra Modi got emotional during his interaction with Jan Aushadhi Yojana Beneficiaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X