ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ, ನವದೆಹಲಿಯಲ್ಲಿ ಮಧ್ಯಮ ಪ್ರಮಾಣದ ಮಳೆ

|
Google Oneindia Kannada News

ನವದೆಹಲಿ, ಸಪ್ಚೆಂಬರ್.22: ಉತ್ತರ ಭಾರತದ ಜನರನ್ನು ಮಳೆ ಬಿಟ್ಟು ಬಿಡದೇ ಕಾಡುತ್ತಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಜನಜೀವನ ತಟಸ್ಥಗೊಂಡಿದೆ. ಮಳೆಯಿಂದಾಗಿ ಜನರು ಮನೆಗಳಿಂದ ಹೊರ ಬರುವುದಕ್ಕೂ ಆಗದಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ನವದೆಹಲಿ, ಎನ್ಆರ್ ಸಿ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮುಂದಿನ ಎರಡು ಗಂಟೆಗಳ ಕಾಲ ಮಧ್ಯಮ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ, ತುಂಬಿ ಹರಿದಿವೆ ಹಳ್ಳ-ಕೊಳ್ಳಕೊಡಗು ಜಿಲ್ಲೆಯಲ್ಲಿ ಮಳೆ, ತುಂಬಿ ಹರಿದಿವೆ ಹಳ್ಳ-ಕೊಳ್ಳ

ಉತ್ತರ ಪ್ರದೇಶದ ಬುಲಂದ್ ಶಹರ್, ಅಮ್ರೊಹಾ, ಘರ್ ಮುಕ್ತೇಶ್ವರ್, ಸಿಯಾನ್, ಮೀರತ್, ಅನೂಪ್ ಶಹರ್, ಜಹಾಂಗೀರ್ ಬಾದ್, ಶಿಕಾರ್ ಪುರ್, ದಿಬೈ, ಖುರ್ಜಾ, ಪಹಸು, ಸಿಕಂದರಾಬಾದ್ ನಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ.

Moderate Intensity Rain Continued In Several Parts Of Delhi And UP In Next 2 Hours

ನವೆದಹಲಿ ಮತ್ತು ನೋಯ್ಡಾದಲ್ಲೂ ಮಳೆ:

ಈಗಾಗಲೇ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಸುರಿದ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ಇದರ ನಡುವೆ ಮಂಗಳವಾರ ಬೆಳಗ್ಗೆ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗ್ರೇಟ್ ನೋಯ್ಡಾದಲ್ಲೂ ಮಧ್ಯಮ ಪ್ರಮಾಣದಲ್ಲಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀ ಮಳೆಯನ್ನು ಅಲ್ಪ, 15 ರಿಂದ 64.5 ಮಿ.ಮೀ ಮಳೆಯನ್ನು ಸಾಧಾರಣ ಮತ್ತು 64.5 ಮಿ.ಮೀಟರ್ ಗಿಂತ ಹೆಚ್ಚಿನ ಮಳೆಯನ್ನು ಭಾರಿ ಮಳೆ ಎಂದು ಗುರುತಿಸಲಾಗುತ್ತದೆ.

English summary
Moderate Intensity Rain Continued In Several Parts Of Delhi And UP In Next 2 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X