ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 15 : ಕೇಂದ್ರ ಸಚಿವ ಎಂಜೆ ಅಕ್ಬರ್ ಅವರು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊರಿಸಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಸೋಮವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು

ಕೆಲಸದ ಸ್ಥಳದಲ್ಲಿ ಆಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಭಾರತದಾದ್ಯಂತ #MeToo ಚಳವಳಿ ಗರೆಗೆದರುತ್ತಿದ್ದಂತೆ, ಹನ್ನೊಂದಕ್ಕೂ ಹೆಚ್ಚು ಪತ್ರಕರ್ತೆಯರು, ಏಷ್ಯನ್ ಏಜ್ ನ ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ಧ ಸಿಡಿದೆದ್ದಿದ್ದು, ಏಷ್ಯನ್ ಏಜ್ ನಲ್ಲಿ ತಮ್ಮ ಮೇಲಾದ ಕಿರುಕುಳವನ್ನು ಬಯಲಿಗೆಳೆದಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಆರೋಪಗಳ ಹಿನ್ನೆಲೆಯಲ್ಲಿ ಅಕ್ಬರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಡ ಹೇರಿತ್ತು. ರಾಜೀನಾಮೆಯ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದ ಅಕ್ಬರ್ ಅವರು, ಎಲ್ಲ ಆರೋಪಗಳನ್ನು ಪರಿಶೀಲಿಸಿ ತಮ್ಮ ವಕೀಲರು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ಅವರು ಭಾನುವಾರ ನುಡಿದಿದ್ದರು. ಇದೀಗ ಕರಂಜಾವಾಲಾ ಅಂಡ್ ಕಂಪನಿಯ ಮೂಲಕ ಕೇಸನ್ನು ದಾಖಲಿಸಿದ್ದಾರೆ.

'ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!''ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!'

MJ Akbar files criminal defamation case against Priya Ramani

ಭಾರತೀಯ ದಂಡ ಸಂಹಿತೆಯ 499 ಸೆಕ್ಷನ್ ಅಡಿಯಲ್ಲಿ ಆರೋಪಿ (ಪ್ರಿಯಾ ರಮಣಿ) ವಿರುದ್ಧ ಸೂಕ್ತ ವಿಚಾರಣೆ ನಡೆಸಿ, ಕ್ರಮ ಜರುಗಿಸಬೇಕು, ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಕ್ಬರ್ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿರುವ ಎಂಜೆ ಅಕ್ಬರ್ ಅವರು ವಾರಗಳ ಕಾಲ ಆಫ್ರಿಕಾ ಪ್ರವಾಸದಲ್ಲಿದ್ದರು. ಆಗಲೇ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳ ಸುರಿಮಳೆಯಾಗುತ್ತಿತ್ತು. ಇದರ ಬಗ್ಗೆ ಚಕಾರವೆತ್ತದ ಅವರು, ವಾಪಸ್ ಬರುತ್ತಿದ್ದಂತೆ, ನನ್ನ ಮೇಲೆ ಯಾವುದೇ ಸಾಕ್ಷ್ಯವಿಲ್ಲದೆ, ತಳಬುಡವಿಲ್ಲದ ಆರೋಪ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

MJ Akbar files criminal defamation case against Priya Ramani

#MeToo ಆರೋಪ ಆಧಾರರಹಿತ, ಕಾನೂನು ಕ್ರಮ ಕೈಗೊಳ್ಳುವೆ: ಎಂ.ಜೆ. ಅಕ್ಬರ್#MeToo ಆರೋಪ ಆಧಾರರಹಿತ, ಕಾನೂನು ಕ್ರಮ ಕೈಗೊಳ್ಳುವೆ: ಎಂ.ಜೆ. ಅಕ್ಬರ್

ಲೋಕಸಭೆ ಚುನಾವಣೆ ಇನ್ನೂ ಕೆಲವೇ ತಿಂಗಳುಗಳು ಇರುವಾಗ, ತಮ್ಮ ಇಮೇಜ್ ಗೆ ಧಕ್ಕ ತರಬೇಕೆಂಬ ಉದ್ದೇಶದಿಂದ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ, ತಮ್ಮನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದರು ಏಷ್ಯನ್ ಏಜ್ ನ ಮಾಜಿ ಸಂಪಾದಕ ಅಕ್ಬರ್. ಅವರ ವಿರುದ್ಧ ಅಕ್ಟೋಬರ್ 8ರಂದು ಪ್ರಕಟಿಸಲಾಗಿರುವ ಟ್ವೀಟ್ ನಲ್ಲಿ ಪ್ರಿಯಾ ರಮಣಿ ಅವರು ಆರೋಪ ಹೊರಿಸಿದ್ದರು.

English summary
MJ Akbar files criminal defamation case against Priya Ramani for making an allegation of sexual harassment. Many women are making allegation of sexual harassment against many as part of #MeToo movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X