ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮುಕ್ತ ರಾಜ್ಯಗಳ ಪಟ್ಟಿಗೆ ಸೇರಿದ ಮತ್ತೊಂದು ರಾಜ್ಯ

|
Google Oneindia Kannada News

ದೆಹಲಿ, ಮೇ 10: ದೇಶದಲ್ಲಿ ಮತ್ತೊಂದು ರಾಜ್ಯ ಕೊರೊನಾ ಸೋಂಕಿನಿಂದ ಮುಕ್ತವಾಗಿದೆ. ಈಶಾನ್ಯ ಭಾಗದಲ್ಲಿರುವ ಮಿಜೋರಾಂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶೂನ್ಯಕ್ಕೆ ಇಳಿದಿದೆ. ಈ ಮೂಲಕ ಕೊರೊನಾ ರೋಗದಿಂದ ಮುಕ್ತವಾಗಿದೆ.

ದೇಶಾದ್ಯಂತ ಕೊವಿಡ್ ಸೋಂಕು ಹೆಚ್ಚಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಿಜೋರಾಂ ಕೊರೊನಾ ಕಾಟದಿಂದ ತಪ್ಪಿಸಿಕೊಂಡಿರುವುದು ಸಮಾಧಾನ ತಂದಿದೆ. ಮಿಜೋರಾಂನಲ್ಲಿ ಪತ್ತೆಯಾಗಿದ್ದ ಒಂದು ಕೇಸ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ಗೆದ್ದ 'ವಿಜಯನ್': ಚಿಕಿತ್ಸೆಯೆ ಇಲ್ಲದ ರೋಗಕ್ಕೆ ಕೇರಳದ ಮದ್ದು!ಕೊರೊನಾ ಗೆದ್ದ 'ವಿಜಯನ್': ಚಿಕಿತ್ಸೆಯೆ ಇಲ್ಲದ ರೋಗಕ್ಕೆ ಕೇರಳದ ಮದ್ದು!

ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಮುಕ್ತವಾಗಿರುವ ಐದನೇ ರಾಜ್ಯ ಮಿಜೋರಾಂ ಎನಿಸಿಕೊಂಡಿದೆ. ಇದಕ್ಕು ಮುಂಚೆ ಮಣಿಪುರ, ಸಿಕ್ಕಿಂ, ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು ಕೊರೊನಾದಿಂದ ಮುಕ್ತವಾಗಿತ್ತು. ಈಗ ಮಿಜೋರಾಂ ಐದನೇ ರಾಜ್ಯ.

Mizoram State Is Now Free From Coronavirus

ಮಿಜೋರಾಂದಲ್ಲಿ ಈವರೆಗೂ ವರದಿಯಾಗಿದ್ದು ಒಂದೇ ಕೊರೊನಾ ಕೇಸ್. ಆತನೊಬ್ಬ ಪಾದ್ರಿ. ಸುಮಾರು 45 ದಿನಗಳ ಸುದೀರ್ಘ ಚಿಕಿತ್ಸೆ ಬಳಿಕ ಆತ ಡಿಸ್ಚಾರ್ಜ್ ಆಗಿದ್ದಾರೆ ಎಂದ ಮಿಜಾರೋಂ ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ. ಸತತ ನಾಲ್ಕು ಪರೀಕ್ಷೆಗಳಲ್ಲಿ ನೆಗಿಟಿವ್ ಬಂದ ಕಾರಣ ಆತನನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂದ್ಹಾಗೆ, ಮಾರ್ಚ್ 24 ರಂದು 45 ವರ್ಷದ ಪಾದ್ರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಆತನ ಮಕ್ಕಳು ಮತ್ತು ಪತ್ನಿ ಕೂಡ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಅವರಿಗೆ ನೆಗಿಟಿವ್ ಬಂದ ಕಾರಣ ಮಾರ್ಚ್ 28ರಂದೇ ಡಿಸ್ಚಾರ್ಜ್ ಮಾಡಲಾಗಿತ್ತು.

English summary
Last COVID-19 patient from Mizoram recovers. Mizoram along with 4 other northeastern states are now free of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X