ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ರೋ ಆಪ್‌ಗೆ ಮತ್ತೆ ಅನುಮೋದನೆ ನೀಡಿದ ಗೂಗಲ್ ಪ್ಲೇ ಸ್ಟೋರ್

|
Google Oneindia Kannada News

ದೆಹಲಿ, ಜೂನ್ 6: ಟಿಕ್‌ಟಾಕ್‌ಗೆ ಪರ್ಯಾಯ ಆಪ್ ಎಂದು ಬಿಂಬಿತವಾಗಿದ್ದ ಮಿತ್ರೋ ಆಪ್‌ಗೆ ಗೂಗಲ್ ಪ್ಲೇ ಸ್ಟೋರ್ ಮತ್ತೆ ಅನುಮೋದನೆ ನೀಡಿದೆ.

Recommended Video

ದ್ವೇಷಕ್ಕೆ ರೈತ ಬೆಳೆದ ಬಾಳೆಗಿಡಗಳನ್ನು ನಾಶ ಪಡಿಸಿದ ಕಿಡಿಗೇಡಿಗಳು | Banana Plantation | Ramanagara

ಗೂಗಲ್ ನಿಯಮಗಳ ಉಲ್ಲಂಘನೆ ಹಾಗೂ ಬೇರೆ ಆಪ್‌ನ ನಕಲು ಎಂಬ ಆರೋಪ ಕೇಳಿ ಬಂದಿದ್ದ ಹಿನ್ನೆಲೆ, ಗೂಗಲ್ ಪ್ಲೇ ಸ್ಟೋರ್‌ನಿಂದ ಮಿತ್ರೋ ಆಪ್ ತೆಗೆದು ಹಾಕಲಾಗಿತ್ತು. ಇದೀಗ, ಹೊಸ ವಿನ್ಯಾಸದೊಂದಿಗೆ ಮರುಪ್ರವೇಶ ಪಡೆದುಕೊಂಡಿರುವ ಮಿತ್ರೋ ಡೌನ್‌ಲೌಡ್‌ಗೆ ಸಿಗ್ತಿದೆ.

ಮಿತ್ರೋ ಕುರಿತಂತೆ ಇದ್ದ ಗೊಂದಲಗಳನ್ನು ಟೆಕ್‌ ತಂಡದೊಂದಿಗೆ ಬಗೆಹರಿಸಿಕೊಳ್ಳಲಾಗಿದೆ. ಹಾಗಾಗಿ, ಮತ್ತೆ ಮಿತ್ರೋ ಆಪ್ ಗೆ ಅನುಮೋದನೆ ಸಿಕ್ಕಿದೆ ಎಂದು ಗೂಗಲ್ ಪ್ಲೇ ಸ್ಟೋರ್ ಮೂಲಗಳು ಮಾಹಿತಿ ಬಿಟ್ಟುಕೊಟ್ಟಿದೆ.

ಟಿಕ್‌ಟಾಕ್‌ಗೆ ಸೆಡ್ಡು ಹೊಡೆದಿದ್ದ 'ಮಿತ್ರೋ'ಗೆ ಗೇಟ್‌ಪಾಸ್ ನೀಡಿದ ಗೂಗಲ್ಟಿಕ್‌ಟಾಕ್‌ಗೆ ಸೆಡ್ಡು ಹೊಡೆದಿದ್ದ 'ಮಿತ್ರೋ'ಗೆ ಗೇಟ್‌ಪಾಸ್ ನೀಡಿದ ಗೂಗಲ್

Mitron TV app back on Google Play Store after design change

ಚೀನಾ ಮೂಲದ ಟಿಕ್‌ಟಾಕ್‌ ಆಪ್ ಸದ್ಯ ಜಗತ್ತಿನಾದ್ಯಂತ ಆವರಿಸಿಕೊಂಡಿದೆ. ಆದರೆ, ಕೊರೊನಾ ವೈರಸ್ ಸೃಷ್ಟಿಗೆ ಕಾರಣವಾದ ಚೀನಾ ವಿರುದ್ಧ ದ್ವೇಷ ಕಾರುತ್ತಿರುವ ಇತರೆ ರಾಷ್ಟ್ರಗಳು ಚೀನಾ ಆಪ್ ಹಾಗೂ ಚೀನಾ ವಸ್ತುಗಳನ್ನು ನಿಷೇಧ ಮಾಡಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಭಾರತ ಕೂಡ ಚೀನಾದ ಟಿಕ್‌ಟಾಕ್‌ ಬಳಸುವ ಬದಲು ಭಾರತ ಮೂಲಕ ಮಿತ್ರೋ ಆಪ್ ಬಳಕೆಗೆ ಮುಂದಾಗಿತ್ತು. ಪ್ರಧಾನಿ ಮೋದಿ ಅವರು ಸ್ವದೇಶಿಗಳ ವಸ್ತುಗಳ ಬಳಕೆ ಮಾಡಿ ಎಂದು ಕರೆ ನೀಡಿದ್ದರು. ಈ ಸಂದೇಶದ ನಂತರ ಮಿತ್ರೋ ಆಪ್ ಮತ್ತಷ್ಟು ಖ್ಯಾತಿ ಪಡೆದುಕೊಂಡಿತ್ತು.

ಮತ್ತೊಂದೆಡೆ ಮಿತ್ರೋ ಆಪ್ ಭಾರತದ್ದಲ್ಲ, ಪಾಕಿಸ್ತಾನ ಮೂಲದ ಕೋಡ್ ಹೊಂದಿದೆ. ಭಾರತೀಯರು ಆ ಕೋಡ್ ಖರೀದಿ ಮಾಡಿ ವಿನ್ಯಾಸ ಬದಲಾಯಿಸಿದ್ದಾರೆ ಅಷ್ಟೇ ಎಂಬ ವಿಷಯಗಳು ಚರ್ಚೆ ಆಯಿತು.

English summary
Mitron TV app back on Google Play Store after design change. Mitron has seen more than 5 million downloads on the Google Play Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X