ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಯ ಎಎನ್-32 ಯುದ್ಧ ವಿಮಾನ ಅವಶೇಷ 8 ದಿನಗಳ ಬಳಿಕ ಪತ್ತೆ

|
Google Oneindia Kannada News

ನವದೆಹಲಿ, ಜೂನ್ 11: ಜೂನ್ 3ರಂದು ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ಯುದ್ಧವಿಮಾನದ ಅವಶೇಷ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ.

ಅರುಣಾಚಲ ಪ್ರದೇಶದ ಲಿಪೋದ ಉತ್ತರ ಭಾಗದಲ್ಲಿ ವಿಮಾನದ ಕೆಲವು ಭಾಗಗಳು ಪತ್ತೆಯಾಗಿದ್ದು, ಇದು ಕಣ್ಮರೆಯಾಗಿದ್ದ ಯುದ್ಧ ವಿಮಾನದ್ದು ಎಂದು ಭಾವಿಸಲಾಗಿದೆ.

ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ

ಜೂನ್ 3ರಂದು ಮಧ್ಯಾಹ್ನ 12.35ರ ಸುಮಾರಿಗೆ ಅಸ್ಸಾಂನ ಜೊಹ್ರಾತ್‌ನ ವಾಯುನೆಲೆಯಿಂದ ಚೀನಾ ಗಡಿಯಿಂದ ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಗೆ ಆಂಟೊನೊವ್ ಎಎನ್-32 ಸೇನಾ ಸಾರಿಗೆ ಯುದ್ಧ ವಿಮಾನ ಪ್ರಯಾಣ ಬೆಳೆಸಿತ್ತು. ಇದರಲ್ಲಿ 8 ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು.

ಕಣ್ಮರೆಯಾದ ಎಎನ್ 32ರ ಅವಶೇಷ ಇಂದು ಲಿಪೋದ ಉತ್ತರ ಭಾಗದಲ್ಲಿ 16 ಕಿ.ಮೀ. ದೂರದ ಟ್ಯಾಟೊದ ಈಶಾನ್ಯ ಭಾಗದಲ್ಲಿ ಅಂದಾಜು 12,000 ಅಡಿ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದ ಎಂಐ-17 ಹೆಲಿಕಾಪ್ಟರ್ ಇದನ್ನು ಪತ್ತೆಹಚ್ಚಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

23 ಸಿಬ್ಬಂದಿ ಎಲ್ಲಿ?

23 ಸಿಬ್ಬಂದಿ ಎಲ್ಲಿ?

ಆದರೆ, ಐಎಎಫ್‌ನ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 13 ಸಿಬ್ಬಂದಿಯ ಕುರಿತು ಅದರಲ್ಲಿ ಪ್ರಸ್ತಾಪಿಸಿಲ್ಲ. ಕಣ್ಮರೆಯಾದ ವಿಮಾನದಲ್ಲಿದ್ದ ಸಿಬ್ಬಂದಿಯ ಕುಟುಂಬದವರು ಅಸ್ಸಾಂನಲ್ಲಿ ಬೀಡುಬಿಟ್ಟಿದ್ದು, ಅವರ ಕುರಿತು ಯಾವುದಾದರೂ ಸುದ್ದಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ವಿವಿಧ ವಿಮಾನಗಳಿಂದ ಹುಡುಕಾಟ

ವಿವಿಧ ವಿಮಾನಗಳಿಂದ ಹುಡುಕಾಟ

ಐಎಎಫ್‌ನ ಸಿ-130 ಸಾರಿಗೆ ವಿಮಾನ, ಸುಖೋಯ್ ಎಸ್‌ಯು-30 ಯುದ್ಧ ವಿಮಾನ, ನೇವಿ ಪಿ8-ಐ ಕಾರ್ಯಾಚರಣೆ ವಿಮಾನ ಮತ್ತು ಐಎಎಫ್ ಹಾಗೂ ಸೇನೆಯ ಹೆಲಿಕಾಪ್ಟರ್‌ಗಳ ತಂಡ ನಾಪತ್ತೆಯಾದ ವಿಮಾನಕ್ಕಾಗಿ ಹುಡುಕಾಟ ನಡೆಸಿವೆ. ಇಸ್ರೋ ಉಪಗ್ರಹಗಳು ಮತ್ತು ಮಾನವರಹಿತ ಡ್ರೋನ್‌ಗಳನ್ನು ಕೂಡ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

ಕಾಣೆಯಾದ ಎಎನ್ 32 ವಿಮಾನ ಹುಡುಕಾಟಕ್ಕೆ ಇಸ್ರೊ ನೆರವುಕಾಣೆಯಾದ ಎಎನ್ 32 ವಿಮಾನ ಹುಡುಕಾಟಕ್ಕೆ ಇಸ್ರೊ ನೆರವು

ಕಾರ್ಯಾಚರಣೆಗೆ ಅನೇಕ ಸವಾಲುಗಳು

ಕಾರ್ಯಾಚರಣೆಗೆ ಅನೇಕ ಸವಾಲುಗಳು

ಸೇನೆ, ನೌಕಾಪಡೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳು, ರಾತ್ರಿ ಸೆನ್ಸರ್‌ಗಳ ಸಹಾಯದಿಂದ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದವು. ಕೆಟ್ಟ ಹವಾಮಾನ, ಕಾಡು ಮತ್ತು ಸೂಕ್ತವಲ್ಲದ ಭೌಗೋಳಿಕ ರಚನೆಯ ಕಾರಣದಿಂದ ಅಡ್ಡಿಯಾದರೂ ಹುಡುಕಾಟದ ಪ್ರದೇಶವನ್ನು ವಿಸ್ತರಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

ರಷ್ಯಾ ನಿರ್ಮಿತ ವಿಮಾನ

ರಷ್ಯಾ ನಿರ್ಮಿತ ವಿಮಾನ

ಎಎನ್-32 ರಷ್ಯಾ ವಿನ್ಯಾಸಗೊಳಿಸಿದ ವಿಮಾನವಾಗಿದ್ದು, ಎರಡು ಎಂಜಿನ್‌ಗಳನ್ನು ಹೊಂದಿದೆ. ಭಾರತೀಯ ವಾಯು ಪಡೆಯು ಇದನ್ನು ನಾಲ್ಕು ದಶಕಗಳಿಂದ ನಿರಂತರವಾಗಿ ಬಳಸಿಕೊಳ್ಳುತ್ತಿದೆ. ವಿಮಾನದ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಐಎಎಫ್ ಶನಿವಾರ ಪ್ರಕಟಿಸಿದೆ. ಸಿಬ್ಬಂದಿಯ ಪತ್ತೆಗಾಗಿ ಹುಡುಕಾಟ ಮುಂದುವರಿಸಿದ್ದು, ರಾತ್ರಿಯೂ ಕಾರ್ಯಾಚರಣೆ ನಡೆಯಲಿದೆ ಎಂದು ಅದು ತಿಳಿಸಿದೆ.

ಮೋಡದ ಮರೆಯಲ್ಲಿ ರೇಡಾರ್: ಮೋದಿ ಹೇಳಿಕೆಗೆ ಏರ್ ಮಾರ್ಷಲ್ ಸಮರ್ಥನೆಮೋಡದ ಮರೆಯಲ್ಲಿ ರೇಡಾರ್: ಮೋದಿ ಹೇಳಿಕೆಗೆ ಏರ್ ಮಾರ್ಷಲ್ ಸಮರ್ಥನೆ

English summary
Debris of Missing IAF AN-32 aircraft found after 8 days in Lipo in Arunachal Pradesh on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X