ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸ್ಡ್‌ ಕಾಲ್ ಅಸ್ತ್ರವನ್ನು ಬಿಜೆಪಿಯತ್ತ ತಿರುಗಿಸಿದ ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಜನವರಿ 24: ಎನ್‌ಆರ್‌ಸಿ-ಸಿಎಎ ಗೆ ಬೆಂಬಲ ನೀಡುವರು ಮಿಸ್ಡ್‌ ಕಾಲ್ ಕೊಡಿ ಎಂದು ಬಿಜೆಪಿ ಅಭಿಯಾನ ಪ್ರಾರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಸಹ ಮಿಸ್ಡ್‌ ಕಾಲ್ ಅಭಿಯಾನ ಆರಂಭಿಸಿದೆ.

'ರಾಷ್ಟ್ರೀಯ ನಿರುದ್ಯೋಗ ನೊಂದಣಿ' ಅಭಿಯಾನವನ್ನು ಯೂತ್ ಕಾಂಗ್ರೆಸ್ ಆರಂಭಿಸಿದ್ದು, ನಿರುದ್ಯೋಗಿಗಳು ಕಾಂಗ್ರೆಸ್ ನೀಡಿರುವ ಸಂಖ್ಯೆಗೆ ಮಿಸ್ಡ್‌ ಕಾಲ್ ನೀಡಿ ನೊಂದಣಿ ಮಾಡಿಕೊಳ್ಳಬೇಕಿದೆ.

ಬಿಜೆಪಿ ಸೋತಿದ್ದಕ್ಕೆ ಹೀಗೆಲ್ಲಾ ಮಾಡುತ್ತಿದೆಯಾ: ಇದೇ 'ಮಹಾ' ಪ್ರಶ್ನೆ?ಬಿಜೆಪಿ ಸೋತಿದ್ದಕ್ಕೆ ಹೀಗೆಲ್ಲಾ ಮಾಡುತ್ತಿದೆಯಾ: ಇದೇ 'ಮಹಾ' ಪ್ರಶ್ನೆ?

ಕೇಂದ್ರದ ವಿರುದ್ಧ ಹೋರಾಡಲು ಈ ಹೊಸ ತಂತ್ರವನ್ನು ಕಾಂಗ್ರೆಸ್ ಆಯ್ದುಕೊಂಡಿದೆ. ಮಿಸ್ಡ್ ಕಾಲ್ ಅಭಿಯಾನಗಳು ಈ ವೆರೆಗೆ ಬಿಜೆಪಿಗೆ ಒಳ್ಳೆಯ ಪ್ರಚಾರ ಫಸಲು ತಂದುಕೊಟ್ಟಿವೆ. ಈಗ ಅದೇ ಅಸ್ತ್ರವನ್ನು ಬಿಜೆಪಿಯ ವಿರುದ್ಧ ಪ್ರಯೋಗಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.

Missed Call Campaign By Congress Against Central Government

ಡಿಮಾನಿಟೈಸೇಷನ್ ನಂತರ ಭಾರತದ ನಿರುದ್ಯೋಗದ ವಿಚಾರ ತೀವ್ರವಾಗಿ ಚರ್ಚೆಯಾಗುತ್ತಿದೆ. ಮೋದಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಕೆಲವು ವರದಿಗಳು ಸಹ ನಿರುದ್ಯೋಗ ಹೆಚ್ಚಳದ ಬಗ್ಗೆ ಪ್ರಕಟಗೊಂಡಿದೆ. ಹಾಗಾಗಿ ಇದೇ ವಿಷಯವನ್ನು ಕಾಂಗ್ರೆಸ್ ಕೇಂದ್ರದ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿದೆ.

ಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆಲೋಕಸಭೆ ಚುನಾವಣೆ ಇಂದು ನಡೆದಿದ್ದರೆ ಏನಾಗುತ್ತಿತ್ತು?: ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿದ್ದು, ' ಮೋದಿಯವರ ಅನರ್ಥ ಆರ್ಥಿಕತೆ ಮತ್ತು ದೂರದೃಷ್ಟಿಯಿಲ್ಲದ ಆಡಳಿತಾತ್ಮಕ ಕ್ರಮಗಳಿಂದ ದೇಶದ ಯುವಕರು ಕಂಗಾಲಾಗಿದ್ದು ಅಭದ್ರತೆಯನ್ನು ಎದುರಿಸುತ್ತಿದ್ದಾರೆ, ಬನ್ನಿ ಬಿಜೆಪಿ ಸುಳ್ಳುಗಳ ವಿರುದ್ಧ ದನಿ ಎತ್ತೋಣ, 8151994411 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ನಿರುದ್ಯೋಗ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳೊಣ' ಎಂದಿದ್ದಾರೆ.

English summary
Youth congress launched 'national register of unemployment'. unemployed should give miss call to given number to register their name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X