ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

|
Google Oneindia Kannada News

Recommended Video

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್.. ಈಗ ದೇಶದ ಜನರ ಕ್ಷಮೆ ಕೇಳ್ತೀರಾ? | Oneindia Kannada

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಚ್ ಎಎಲ್ ವಿಚಾರವಾಗಿ ಮಾಡಿರುವ ಆರೋಪ ಹಾಗೂ ರಕ್ಷಣಾ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ಆಗ್ರಹಕ್ಕೆ ನಿರ್ಮಲಾ ಸೀತಾರಾಮನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾಚಿಕೆ ಆಗಬೇಕು. ಕಾಂಗ್ರೆಸ್ ಈ ವಿಚಾರದಲ್ಲಿ ದೇಶವನ್ನು ದಾರಿ ತಪ್ಪಿಸುತ್ತಿದೆ ಎಂದಿರುವ ಅವರು, ಸರಕಾರದಿಂದ ಎಚ್ ಎಎಲ್ ಜತೆಗೆ ಮಾಡಿದ ಒಪ್ಪಂದದ ದಾಖಲೆ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ದಾರಿ ತಪ್ಪಿಸುತ್ತಿರುವುದು ನಾಚಿಕೆಗೇಡು. ಎಚ್ ಎ ಎಲ್ ನಿಂದ 26,570.8 ಕೋಟಿ ರುಪಾಯಿಯ ಒಪ್ಪಂದಕ್ಕೆ (ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 2014 ಹಾಗೂ 2018ರ ಮಧ್ಯೆ) ಸಹಿ ಹಾಕಲಾಗಿದೆ. 73,000 ಕೋಟಿ ರುಪಾಯಿಯಷ್ಟು ಒಪ್ಪಂದವು ಆಗಬೇಕಿದೆ. ಈಗ ರಾಹುಲ್ ಗಾಂಧಿ ಅವರು ಸಂಸತ್ ನಲ್ಲಿ ದೇಶದ ಕ್ಷಮೆ ಕೇಳುತ್ತಾರಾ ಮತ್ತು ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Nirmala Sitharaman

ಎಚ್ ಎಎಲ್ ಗೆ ಒಂದು ಲಕ್ಷ ಕೋಟಿ ರುಪಾಯಿ ಮೌಲ್ಯದ ಆರ್ಡರ್ ಸರಕಾರ ನೀಡಿದೆ ಎಂದು ಮಾಧ್ಯಮಗಳಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೊಂಡಿದ್ದಾಗಿ ವರದಿ ಆಗಿತ್ತು. ಆ ಬಗ್ಗೆ ದಾಖಲೆಗಳನ್ನು ಸಂಸತ್ ನ ಎದುರು ನೀಡಬೇಕು. ಇಲ್ಲದಿದ್ದಲ್ಲಿ ರಕ್ಷಣಾ ಸಚಿವೆ ಆದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದರು.

English summary
Defence minister Nirmala Sitharaman on Sunday hit back at Congress President Rahul Gandhi after he accused her of lying in Parliament about procurement orders worth Rs 1 lakh crore for state-run aerospace major Hindustan Aeronautics Limited (HAL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X