• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಆರ್‌ಟಿಓ ಆ್ಯಪ್ ಬಳಸಿ ವಾಹನಗಳ ಮೇಲೆ ಅಟ್ಯಾಕ್ ಮಾಡ್ತಿದ್ರು

|

ನವದೆಹಲಿ, ಫೆಬ್ರವರಿ 27: ದುಷ್ಕರ್ಮಿಗಳು ಮೊಬೈಲ್‌ನಲ್ಲಿ ಆರ್‌ಟಿಓ ಆ್ಯಪ್ ಬಳಸಿ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ಅಪ್ಲಿಕೇಷನ್‌ಗಳಿಂದ ಕೇವಲ ಅನುಕೂಲ ಮಾತ್ರವಲ್ಲ ಅನನುಕೂಲವೂ ಇದೆ ಎಂಬುದು ದೆಹಲಿಯ ಹಿಂಸಾಚಾರ ವಿಷಯದಲ್ಲಿ ಬಹಿರಂಗಗೊಂಡಿದೆ.

ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ

ತಂತ್ರಜ್ಞಾನವನ್ನು ಜನರು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೇ ಇದೇ ಸಾಕ್ಷಿಯಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ತಮ್ಮ ಮೊಬೈಲ್ ನಲ್ಲಿ ಆ್ಯಪ್ ಬಳಕೆ ಮಾಡಿಕೊಂಡು ಆರ್'ಟಿಒ ಮೂಲಕ ಸಮುದಾಯಗಳ ತಿಳಿದು ಜನರ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವಾಹನ ಸಂಖ್ಯೆಯನ್ನು ಅಪ್ಲಿಕೇಷನ್ ಮೂಲಕ ಪಡೆಯುತ್ತಿದ್ದರು

ವಾಹನ ಸಂಖ್ಯೆಯನ್ನು ಅಪ್ಲಿಕೇಷನ್ ಮೂಲಕ ಪಡೆಯುತ್ತಿದ್ದರು

ಪ್ರತಿಭಟನೆ ವೇಳೆ ಸ್ಥಳದಲ್ಲಿರುತ್ತಿದ್ದ ವಾಹನಗಳ ಸಂಖ್ಯೆಯನ್ನು ಆ್ಯಪ್ ನಲ್ಲಿ ಹುಡುಕಿ ವಾಹನದ ಮಾಲೀಕರ ಮಾಹಿತಿ ತಿಳಿದುಕೊಂಡು ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

ವಾಹನಗಳ ಮಾಹಿತಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ

ವಾಹನಗಳ ಮಾಹಿತಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ

ವಾಹನಗಳ ಮಾಹಿತಿ ತಿಳಿದುಕೊಳ್ಳಲು ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತ ಆ್ಯಪ್ ಗಳು ಲಭ್ಯವಿದ್ದು, ಈ ಅ್ಯಪ್ ಗಳ ಮೂಲಕ ವಾಹನದ ಸಂಖ್ಯೆಯನ್ನು ನಮೂದಿಸಿದರೆ, ವಾಹನದ ಮಾಲೀಕರ ಮಾಹಿತಿ ಸುಲಭವಾಗಿ ಸಿಗುತ್ತದೆ. ಇದಲ್ಲದೆ ಬಳಕೆದಾರರಿಗೆ ಸುಲಭವಾಗಲು ಮತ್ತಷ್ಟು ಆ್ಯಪ್ ಗಳೂ ಲಭ್ಯವಿದ್ದು, ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿದರೂ ಕೂಡ ವಿವರಗಳು ಲಭ್ಯವಾಗಲಿವೆ. ಆದರೆ, ಈ ಆ್ಯಪ್ ಬಳಕೆಗೆ ಹಣವನ್ನು ವ್ಯಯಿಸಬೇಕಾಗಿರುತ್ತದೆ.

ದೆಹಲಿಯ ಹಿಂಸಾಚಾರ ಫೋಟೋ ಜರ್ನಲಿಸ್ಟ್ ಕಂಡಂತೆ

ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಕೇಂದ್ರಕ್ಕೆ ಪತ್ರ

ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಕೇಂದ್ರಕ್ಕೆ ಪತ್ರ

ಗೂಗಲ್ ಪ್ಲೇಸ್ಟೋರ್ ನಲ್ಲಿ ದೊರಕುವ ಈ ಅಸಂಖ್ಯಾತ ಅಪ್ಲಿಕೇಶನ್ ಗಳು ಡೇಟಾ ಕ್ರಾಲಿಂಗ್ ಮೂಲಕ ಕಾನೂನು ಬಾಹಿರವಾಗಿ ಡೇಟಾವನ್ನು ಪಡೆದುಕೊಂಡಿದೆ. ಈ ವಿಧಾನವು ಡೇಟಾವನ್ನು ಸಂಗ್ರಹಿಸಲು ಇಂರ್ಟನೆಟ್ ಬೋಟ್ ನ್ನು ಸ್ವಯಂಚಾಲಿತವಾಗಿ ನೆಟ್ ಬ್ರೌಸ್ ಮಾಡಲು ಅನುಮತಿ ನೀಡುತ್ತವೆ ಎಂದು ಭದ್ರತಾ ಸಂಶೋಧಕ ಶ್ರೀನಿವಾಸ್ ಕೊಡಾಲಿ ಹೇಳಿದ್ದಾರೆ. ವಿಚಾರ ಗಂಭೀರವಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮೂಲಕ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.

ವಾಹನಗಳ ಮೇಲೆ ನಡೆಯುತ್ತಿದ್ದ ದಾಳಿ ಬಹಿರಂಗ

ವಾಹನಗಳ ಮೇಲೆ ನಡೆಯುತ್ತಿದ್ದ ದಾಳಿ ಬಹಿರಂಗ

ಓಡಾಡುವ ವಾಹನಗಳ ಮೇಲೆ ನಿರಂತರ ದಾಳಿ ನಡೆಯುತ್ತಿತ್ತು, ಆದರೆ ಅಮಾಯಕರ ಮೇಲ್ಯಾಕೆ ದಾಳಿ ನಡೆಯುತ್ತಿದೆ ಎಂದು ತಿಳಿದುಬರುತ್ತಿರಲಿಲ್ಲ. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಯಾರ ಹೆಸರಿನಲ್ಲಿ ಗಾಡಿ ನೋಂದಣಿಯಾಗಿದೆ ಎನ್ನುವ ಮಾಹಿತಿ ಪಡೆದು ಅವರ ಮೇಲೆ ದಾಳಿ ನಡೆಸುತ್ತಿದ್ದರು.

ಮಧ್ಯರಾತ್ರಿ ಹೊತ್ತಿ ಉರಿದ ದೇಶದ ರಾಜಧಾನಿ; ಕಿಚ್ಚು ಹಬ್ಬಿದ ವೃತ್ತಾಂತ

English summary
In what could be termed as misuse of public data, many may have used mobile phone applications in Delhi to get the details of vehicles like owner’s name and so on to allegedly target the members of a particular community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X