ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿನಿಸ್ಟ್ರಿ ಆಫ್....' ಅಮಿತ್ ಶಾರನ್ನು ಕೆಣಕಿದ ಪ್ರಿಯಾಂಕ್ ಖರ್ಗೆ

|
Google Oneindia Kannada News

ನವದೆಹಲಿ, ಜೂನ್ 01: ಅಮಿತ್ ಶಾ ಅವರು ಗೃಹಸಚಿವರಾಗಿ ಅಧಿಕಾರ ವಹಿಸುತ್ತಿದ್ದಂತೆಯೇ ಗೃಹಖಾತೆಯನ್ನು 'ಮಿನಿಸ್ಟ್ರಿ ಆಫ್ ಪ್ರೊವೈಡಿಂಗ್ ಕ್ಲೀನ್ ಚಿಟ್ಸ್' ಎಂದು ರಾಜ್ಯದ ಸಾಮಾಜಿಕ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕರೆದಿದ್ದಾರೆ.

ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ ಚಾಣಕ್ಯ ಅಮಿತ್ ಶಾಗೆ ಕೇಂದ್ರ ಗೃಹಖಾತೆ ಜವಾಬ್ದಾರಿ

ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದರು. "ನಾವು ಈಗ ಹೊಸ ಗೃಹಸಚಿವರನ್ನು ಹೊಂದಿದ್ದೇವೆ. ಇನ್ನು ಮೇಲೆ ಗೃಹಖಾತೆಯನ್ನು ಮಿನಿಸ್ಟ್ರಿ ಆಪ್ ಪ್ರೊವೈಡಿಂಗ್ ಕ್ಲೀನ್ ಚಿಟ್ಸ್(ಕ್ಲೀನ್ ಚಿಟ್ ಗಳನ್ನು ತಯಾರಿಸುವ ಖಾತೆ)" ಎಂದು ಮರುನಾಮಕರಣ ಮಾಡಬಹುದು ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ನೀಡಿರುವ ಕಾರಣ ಅಮಿತ್ ಶಾ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಮೋದಿ ನೇಣಿಗೇರಲು ಸಿದ್ಧ ಎನ್ನುವುದಾದರೆ, ನಾವು ರಸ್ತೆ ರೆಡಿ ಮಾಡಿಕೊಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೋದಿ ನೇಣುಹಾಕಿಕೊಳ್ಳೋದಾದ್ರೆ, ರಸ್ತೆ ರೆಡಿ ಮಾಡಿಕೊಡ್ತೀವಿ: ಪ್ರಿಯಾಂಕ್ ಖರ್ಗೆ ಮೋದಿ ನೇಣುಹಾಕಿಕೊಳ್ಳೋದಾದ್ರೆ, ರಸ್ತೆ ರೆಡಿ ಮಾಡಿಕೊಡ್ತೀವಿ: ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ ಅವರು ಅಮಿತ್ ಶಾ ಅವರ ಕುರಿತು ನೀಡಿದ ಹೇಳಿಕೆಯನ್ನು ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಮುಖ್ಯಂತ್ರಿ ಬಿ ಎಸ್ ಯಡಿಯೂರಪ್ಪ ವಿರೋಧಿಸಿದ್ದಾರೆ.

ಕೈ ತೋರಿಸಿ ಅವಲಕ್ಷಣ ಹೇಳಿಸಿಕ್ಕೊಳ್ಳಬೇಡಿ

ಮಾನ್ಯ ಪ್ರಿಯಾಂಕ್ ಖರ್ಗೆ ರವರೇ ಕೈ ತೋರಿಸಿ ಅವಲಕ್ಷಣ ಹೇಳಿಸಿಕ್ಕೊಳ್ಳಬೇಡಿ , ನಿಮ್ಮ ಪಕ್ಷದ ಚಿನ್ನೆ "ಕೈ" ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ . ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ . ಮೊದಲು ನಿಮ್ಮಮನೆ ಸರಿ ಮಾಡ್ಕೊಳಿ ಆಮೇಲೆ ಊರು ಉಸಾಬರಿಗೆ ಬರುವಿರಂತೆ .

ಅಮಿತ್ ಶಾ ಜಾತಕ ಫಲದಲ್ಲಿ ವಿವಿಧ ಹಗರಣಗಳ ಆರೋಪಿಗಳು ಜೈಲು ಪಾಲುಅಮಿತ್ ಶಾ ಜಾತಕ ಫಲದಲ್ಲಿ ವಿವಿಧ ಹಗರಣಗಳ ಆರೋಪಿಗಳು ಜೈಲು ಪಾಲು

ಖರ್ಗೆ ಸೋಲಿಗೆ ಮಗನ ಇಂಥ ಹೇಳಿಕೆಗಳೇ ಕಾರಣ

"ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲುವುದಕ್ಕೆ ಅವಅರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಇಂಥ ಹೇಳಿಕೆಗಳೇ ಕಾರಣ. ಯಾವುದೇ ಆಧೃವಿಲ್ಲದೆ ಅವರು ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ"

ರಾಜಗೋಪಾಲ್ ಎಂ

ರಾಜ್ಯದ ಗೃಹಸಚಿವರಿಗೂ ಇದೇ ಮಾತು ಅನ್ವಯವಾಗುತ್ತದೆ ಅಲ್ಲವೇ?- ರಾಜಗೋಪಾಲ್ ಎಂ.

ಯಾವ ಅರ್ಹತೆ ಇದೆ?

ಕೇಂದ್ರ ಸಚಿವ ಸಂಪುಟದ ಬಗ್ಗೆ ಮಾತನಾಡುವ ಯಾವ ಅರ್ಹತೆಯೂ ಅವರಿಗಿಲ್ಲ. ಯಾಕಂದ್ರೆ ಅವರದೇ ಪಕ್ಷ ಈಗಾಘಲೇ ಸೋತು ಸುಣ್ಣವಾಗಿದೆ. ಅವರು ಮೊದಲು ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊಡೆದೋಡಿಸಲಿ- ಬಿ ತುಲಾಜರಾವ್ ನಾಯ್ಕ್

ಜನ ಸರಿಯಾಗಿ ಉತ್ತರ ಕೊಟ್ಟಿದ್ದಾರೆ!

ಈ ತರ ಉಡಾಫೆ ಹೇಳಿಕೆ ನೀಡಿದ್ದಕ್ಕೇ ಜನ ಸರಿಯಾದ ಉತ್ತರ ಕೊಟ್ಟಿರೋದು- ಕಲ್ಲೇಶ್

ಮೀಸೆ ಮಣ್ಣಾಗಲಿಲ್ಲ ಎನ್ನುವವರು!

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾರಲ್ಲ ಆ ಜಾತಿಗೆ ಸೇರಿರುವರು ನೀವು ವಿಜೇತ ಕೆ ವಿ.

English summary
Priyank Kharge, social welfare minister from Karnataka said I think it is better to rename the Ministry of Home Affairs as Ministry of Providing Clean Chits. His statement sparks controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X