ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮತ್ತೆ ಹೆಚ್ಚಿದ ವಾಯುಮಾಲಿನ್ಯ: ಸಚಿವ ಗೋಪಾಲ್ ರೈ ತುರ್ತು ಸಭೆ

|
Google Oneindia Kannada News

ನವದೆಹಲಿ ಡಿಸೆಂಬರ್ 17: ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ಸಹ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಇಂದು ಮತ್ತೆ ದೆಹಲಿ ವಾಯುಮಾಲಿನ್ಯ ತುಂಬಾ ಕೆಟ್ಟದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯು ಇಂದು ಮಬ್ಬಿನ ಹೊದಿಕೆಯಲ್ಲಿ ಸುತ್ತಿಕೊಂಡಿದ್ದು, ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 339 ರಷ್ಟಿದೆ. ಇದು ಅತ್ಯಂತ ಕಳಪೆ ಮಟ್ಟಕ್ಕೆ ಕುಸಿತಿದಿದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಸಾಫರ್) ಈ ಬಗ್ಗೆ ಮಾಹಿತಿ ನೀಡಿದೆ. ಪ್ರಸ್ತುತ ದೆಹಲಿ ಮಾಲಿನ್ಯ ಮತ್ತು ಚಳಿಗಾಲ ಎರಡರಿಂದಲೂ ಬಳಲುತ್ತಿದೆ. ಇಂದು ದೆಹಲಿಯಲ್ಲಿ ಪಾದರಸ 8 ಡಿಗ್ರಿಗೆ ಇಳಿಯಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಾದ್ಯಮ ವರದಿ ಬಳಿಕ ಸಚಿವರಿಂದ ಸಭೆ

ಮಾದ್ಯಮ ವರದಿ ಬಳಿಕ ಸಚಿವರಿಂದ ಸಭೆ

ಎಸ್‌ಸಿ ಮಾಲಿನ್ಯ ನಿಯಮಗಳ ಉಲ್ಲಂಘನೆ ಕುರಿತು ದೆಹಲಿ ಸಚಿವ ಗೋಪಾಲ್ ರೈ ತುರ್ತು ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಭೆ ನಡೆಯಲಿದೆ. ಪರಿಸರ ಸಚಿವರೊಂದಿಗಿನ ಸಭೆಯಲ್ಲಿ ದೆಹಲಿ ಸಂಚಾರ ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಸಾರಿಗೆ ಇಲಾಖೆ, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಮತ್ತು NBCC ಅಧಿಕಾರಿಗಳು ಭಾಗವಹಿಸುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ನಿಯಮಗಳ ಬಹಿರಂಗ ಉಲ್ಲಂಘನೆಯ ವೀಡಿಯೊಗಳು ಮತ್ತು ಚಿತ್ರಗಳನ್ನು ಸೆರೆಹಿಡಿದಿರುವ ತನಿಖಾ ವರದಿಯನ್ನು ಇಂಡಿಯಾ ಟುಡೇ ಬಿಡುಗಡೆ ಮಾಡಿದ ಒಂದು ದಿನದ ನಂತರ ಪ್ರಮುಖ ಸಭೆಯನ್ನು ನಡೆಸಲು ಸಚಿವರು ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ.

ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಭೆ ನಡೆಯಲಿದೆ. ದೆಹಲಿಯ ಪರಿಸರ ಸಚಿವರೊಂದಿಗಿನ ಸಭೆಯಲ್ಲಿ ದೆಹಲಿ ಸಂಚಾರ ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಸಾರಿಗೆ ಇಲಾಖೆ, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಮತ್ತು NBCC ಇಂಡಿಯಾದ ಅಧಿಕಾರಿಗಳು ಭಾಗವಹಿಸುವ ಸಾಧ್ಯತೆಯಿದೆ. ನವೆಂಬರ್‌ನಲ್ಲಿ, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಪುನಃ ವಿಧಿಸಿತ್ತು ನಂತರ ಡಿಸೆಂಬರ್‌ನಲ್ಲಿ ದೆಹಲಿ ಸರ್ಕಾರವು ಸಿಎನ್‌ಜಿ, ಇ-ಟ್ರಕ್‌ಗಳು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ನಿರ್ಮಾಣ ಮತ್ತು ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧವು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ ಎಂದು ಹೇಳಿದೆ. ಆದಾಗ್ಯೂ, ಇಂಡಿಯಾ ಟುಡೇ ಟಿವಿ ಈ ಮಾನದಂಡಗಳನ್ನು ರಾತ್ರಿಯ ಸಮಯದಲ್ಲಿ ಬಹಿರಂಗವಾಗಿ ಉಲ್ಲಂಘಿಸಲಾಗಿದೆ ಎಂದು ಕಂಡುಹಿಡಿದಿದೆ. ಅಗೆಯುವ ಕೆಲಸ ಮತ್ತು ಮೆಟ್ರೋ ನಿರ್ಮಾಣವು ರಹಸ್ಯವಾಗಿ ನಡೆಯುತ್ತಿದೆ. ಡೀಸೆಲ್ ಟ್ರಕ್‌ಗಳಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡಿದೆ ಎಂದು ಕಂಡುಬಂದಿದೆ.

ಸುಪ್ರೀಂಕೋರ್ಟ್ ಆದೇಶಕ್ಕಿಲ್ಲ ಕಿಮ್ಮತ್ತು

ಸುಪ್ರೀಂಕೋರ್ಟ್ ಆದೇಶಕ್ಕಿಲ್ಲ ಕಿಮ್ಮತ್ತು

ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸುಪ್ರೀಂ ಕೋರ್ಟ್ ಆದೇಶದ ಬಹಿರಂಗ ಉಲ್ಲಂಘನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ತನಿಖಾ ವರದಿಯ ಪ್ರಕಾರ, ನವದೆಹಲಿಯ ನೇತಾಜಿ ನಗರದಲ್ಲಿ ಡಿಸೆಂಬರ್ 16 ರಂದು ಮುಂಜಾನೆ 4 ರ ಸುಮಾರಿಗೆ, ಅರ್ಥ್‌ ಮೂವರ್ಸ್, ಡ್ರಿಲ್ಲಿಂಗ್ ಮೆಷಿನ್‌ಗಳು ಮತ್ತು ಜನರೇಟರ್‌ಗಳು ಹ್ಯಾಲೊಜೆನ್ ದೀಪಗಳ ಅಡಿಯಲ್ಲಿ ಪೂರ್ಣ ಸ್ವಿಂಗ್‌ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ಇದೇ ರೀತಿಯ ದೃಶ್ಯಗಳು ದೆಹಲಿಯ ವಜೀರಾಬಾದ್ ಸೇತುವೆಯಲ್ಲಿ ಡಿಸೆಂಬರ್ 16 ರಂದು ಬೆಳಗಿನ ಜಾವ 2 ರ ಸುಮಾರಿಗೆ ಕಂಡುಬಂದವು. ಮೆಟ್ರೋ ಪಿಲ್ಲರ್‌ಗಳ ಕಾಮಗಾರಿ ಹಾನಿಕಾರಕ ಕಪ್ಪು ಹೊಗೆಯನ್ನು ಹೊರಸೂಸುವುದು ಕಂಡುಬಂದಿದೆ. ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು ಲಂಚ ಪಡೆದು ಮಾಲಿನ್ಯಕಾರಕ ಡೀಸೆಲ್ ಟ್ರಕ್‌ಗಳನ್ನು ದೆಹಲಿಗೆ ಪ್ರವೇಶಿಸಲು ಅನುಮತಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ತನಿಖೆಯಿಂದ ತಿಳಿದುಬಂದಿದೆ.

ಡಿಸೆಂಬರ್ 15 ರಂದು ಬೆಳಗ್ಗೆ 12 ಗಂಟೆಗೆ ಮಾಲಿನ್ಯಕಾರಕ ಡೀಸೆಲ್ ಟ್ರಕ್‌ಗಳು ದೆಹಲಿ-ನೋಯ್ಡಾ ಗಡಿಯಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ಈ ಟ್ರಕ್‌ಗಳನ್ನು ಸುಪ್ರೀಂ ಕೋರ್ಟ್‌ಗಿಂತ ಕಡಿಮೆಯಿಲ್ಲದೆ ರಾಜಧಾನಿಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಆದಾಗ್ಯೂ, ದೆಹಲಿ ಮತ್ತು ನೋಯ್ಡಾ ಪೊಲೀಸರು ಲಂಚ ಪಡೆದು ಪ್ರವೇಶಕ್ಕೆ ಅವಕಾಶ ನೀಡಿದರು ಎಂದು ಚಾಲಕರು ಹೇಳಿದ್ದಾರೆ.

ವಾಯುಮಾಲಿನ್ಯದ ಜೊತೆಗೆ ಚಳಿಯೂ ಹೆಚ್ಚು

ವಾಯುಮಾಲಿನ್ಯದ ಜೊತೆಗೆ ಚಳಿಯೂ ಹೆಚ್ಚು

ದೆಹಲಿಯಲ್ಲಿ ಬೆಳಗ್ಗೆ 8 ಗಂಟೆವರೆಗೂ ಮಂಜು ಕವಿದಿದೆ. ವಾಯುಮಾಲಿನ್ಯದಿಂದಾಗಿ ದೆಹಲಿಯಲ್ಲಿ ಹವಾಮಾನ ಹದಗೆಡಬಹುದು ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು ಚಳಿಗಾಲವನ್ನು ಹೆಚ್ಚಿಸಲಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಚಳಿಯಾಗಲಿದೆ ಹಾಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹೀಗಿದೆ..

ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹೀಗಿದೆ..

ಪುಸಾ, ದೆಹಲಿ - 343 AQI ಅತ್ಯಂತ ಕಳಪೆಯಾಘಿದೆ

ಪಂಜಾಬಿ ಬಾಗ್-342 AQI ತುಂಬಾ ಕೆಟ್ಟದಾಗಿದೆ

ಶಾದಿಪುರ್, ದೆಹಲಿ - 344AQI ಅತ್ಯಂತ ಕೆಟ್ಟದಾಗಿದೆ

ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ 341 AQI ತುಂಬಾ ಕಳಪೆಯಾಗಿದೆ

ಅಶೋಕ್ ವಿಹಾರ್ ದೆಹಲಿ 379 AQI ಅತ್ಯಂತ ಕಳಪೆಯಾಗಿದೆ

NSIT ದ್ವಾರಕಾ, 343 AQI ತುಂಬಾ ಕಳಪೆಯಾಗಿದೆ

ಲೋಧಿ ರಸ್ತೆ, 223 AQI ತುಂಬಾ ಕೆಟ್ಟದಾಗಿದೆ

ಪ್ರಮುಖ ನಗರಗಳಲ್ಲೂ ಹೆಚ್ಚಾದ ಮಾಲಿನ್ಯ

ಪ್ರಮುಖ ನಗರಗಳಲ್ಲೂ ಹೆಚ್ಚಾದ ಮಾಲಿನ್ಯ

ಗುರುಗ್ರಾಮದಲ್ಲಿ AQI 342

ಫರಿದಾಬಾದ್‌ನಲ್ಲಿ AQI 349

ಗಾಜಿಯಾಬಾದ್‌ನಲ್ಲಿ AQI 323

ಗ್ರೇಟರ್ ನೋಯ್ಡಾದಲ್ಲಿ AQI 341

ಮೊರಾದಾಬಾದ್‌ನಲ್ಲಿ AQI 333

ಆಗ್ರಾದಲ್ಲಿ AQI 322

ಜೈಪುರದಲ್ಲಿ AQI 181

ಲಕ್ನೋದಲ್ಲಿ AQI 281

ಅಂಬಾಲಾದಲ್ಲಿ AQI 291

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

English summary
Delhi Environment Minister Gopal Rai called an emergency meeting over the alleged violation of the Supreme Court's pollution norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X