ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ ಆಕ್ಸಿಜನ್‌ ಟ್ವೀಟ್‌ಗೆ ಇಟಾಲಿಯನ್‌ನಲ್ಲಿ ತಿರುಗೇಟು ನೀಡಿದ ಸಚಿವ ಗಿರಿರಾಜ್

|
Google Oneindia Kannada News

ನವದೆಹಲಿ, ಜು.21: ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಬಗ್ಗೆ ಮಾಹಿತಿಯ ಕೊರತೆಯ ಬಗ್ಗೆ ಕೇಂದ್ರದ ಹೇಳಿಕೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಂಗಳವಾರ ವಾಕ್ಸಮರಕ್ಕೆ ಕಾರಣವಾಗಿದೆ. ಹಲವಾರು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಟೀಕಿಸಿದ್ದಾರೆ. ಈ ನಡುವೆ ರಾಹುಲ್‌ ಗಾಂಧಿಯ ಟ್ವೀಟ್‌ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇಟಾಲಿಯನ್ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ.

ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆಸ್ಪತ್ರೆಗಳು ನಿಭಾಯಿಸಲು ಹೆಣಗಾಡುತ್ತಿದ್ದಂತೆ, ರೋಗಿಗಳ ಸಾವು ದೇಶದ ಕೆಲವು ಭಾಗಗಳಿಂದ ವರದಿಯಾಗಿದೆ. ಹಲವಾರು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದೆ. ರಾಜ್ಯಸಭೆಯಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರವು, ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಸಾವಿನ ಬಗ್ಗೆ ರಾಜ್ಯಗಳಿಂದ ಯಾವುದೇ ಡೇಟಾ ಬಂದಿಲ್ಲ ಎಂದು ಹೇಳಿದೆ.

ಆಮ್ಲಜನಕ ಕೊರತೆ ಕಾರಣವಾಗಿ ದೇಶದಲ್ಲಿ ಯಾರೂ ಸಾವನ್ನಪ್ಪಿಲ್ಲ; ಕೇಂದ್ರಆಮ್ಲಜನಕ ಕೊರತೆ ಕಾರಣವಾಗಿ ದೇಶದಲ್ಲಿ ಯಾರೂ ಸಾವನ್ನಪ್ಪಿಲ್ಲ; ಕೇಂದ್ರ

ನಂತರ ಸಂಜೆ, ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, "ಕೇವಲ ಆಮ್ಲಜನಕದ ಕೊರತೆಯಲ್ಲ. ಸೂಕ್ಷ್ಮತೆ ಮತ್ತು ಸತ್ಯದ ತೀವ್ರ ಕೊರತೆ ಇತ್ತು. ಆಗಲೂ ಇತ್ತು, ಈಗಲೂ ಇದೆ ಎಂದು ಹೇಳಿದ್ದಾರೆ.

Minister Giriraj Singh Reply in Italian to Rahul gandhi over Oxygen Tweet

ಇದಕ್ಕೆ ಇಟಾಲಿಯನ್ ಭಾಷೆಯಲ್ಲಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ನಾನು ಈ ರಾಜಕುಮಾರನ ಬಗ್ಗೆ ಹೇಳುತ್ತೇನೆ. ಅವನಿಗೆ ಆಗ ಮೆದುಳಿನ ಕೊರತೆ ಇತ್ತು, ಈಗ ಆತನಿಗೆ ಮೆದುಳು ಇಲ್ಲ. ಇನ್ನು ಆತ ಶಾಶ್ವತವಾಗಿ ಮೆದುಳು ಕಳೆದುಕೊಳ್ಳುತ್ತಾನೆ. ಈ ಪಟ್ಟಿಗಳನ್ನು ರಾಜ್ಯಗಳು ಸಂಗ್ರಹಿಸಿವೆ. ಮಾರ್ಪಡಿಸಿದ ಪಟ್ಟಿಗಳನ್ನು ಸಲ್ಲಿಸಲು ನಿಮ್ಮ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಿಗೆ ನೀವು ಹೇಳಬಹುದು. ಅಲ್ಲಿಯವರೆಗೆ ಸುಳ್ಳು ನಿಲ್ಲಿಸಿ," ಎಂದು ಟಾಂಗ್‌ ನೀಡಿದ್ದಾರೆ.

ಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನ

ಮೇಲ್ಮನೆಯಲ್ಲಿ ಆಮ್ಲಜನಕದ ಸಾವುಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್, ಕಿರಿಯ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ವಿರುದ್ಧ "ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ" ನಿರ್ಣಯವನ್ನು ಮಂಡಿಸುವುದಾಗಿ ಹೇಳಿದರು. "ಇದು ಕುರುಡು ಮತ್ತು ಮನಸ್ಸಿಲ್ಲದ ಸರ್ಕಾರ. ಆಮ್ಲಜನಕದ ಕೊರತೆಯಿಂದಾಗಿ ಹತ್ತಿರದ ಮತ್ತು ಆತ್ಮೀಯರು ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ಜನರು ನೋಡಿದ್ದಾರೆ," ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.

ಗೋವಾದಲ್ಲಿ, ಮೇ ತಿಂಗಳಲ್ಲಿ ಐದು ದಿನಗಳಲ್ಲಿ 80 ಕ್ಕೂ ಹೆಚ್ಚು ಜನರು ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಆಂಧ್ರಪ್ರದೇಶದ ತಿರುಪತಿಯಲ್ಲಿ, ಆಸ್ಪತ್ರೆಯ ಐಸಿಯುನಲ್ಲಿದ್ದ 11 ಕೋವಿಡ್ ರೋಗಿಗಳು ವೈದ್ಯಕೀಯ ಆಮ್ಲಜನಕದ ಪೂರೈಕೆ ಕೊರತೆಯಿಂದ ಸಾವನ್ನಪ್ಪಿದರು. ಹೈದರಾಬಾದ್‌ನ ಆಸ್ಪತ್ರೆಯಲ್ಲಿ, ಆಮ್ಲಜನಕ ಪೂರೈಕೆಯಲ್ಲಿ ಎರಡು ಗಂಟೆಗಳ ಕಡಿತದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಏಳು ರೋಗಿಗಳು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿವೆ ಎಂಬುವುದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಾವನ್ನಪ್ಪಿದ ಬಗ್ಗೆ ದೆಹಲಿ ಸರ್ಕಾರ ಆದೇಶಿಸಿದ ತನಿಖೆಯನ್ನು ಕಳೆದ ತಿಂಗಳು ಕೇಂದ್ರ ವಿರೋಧಿಸಿತ್ತು. ದೆಹಲಿಯ ಒಂದು ಆಸ್ಪತ್ರೆಯಲ್ಲಿ, 21 ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಮತ್ತು ಈ ವಿಷಯವು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ವೈರಸ್‌ನ ಎರಡನೇ ಅಲೆಯ ವರದಿಯಾಗದೆ ಸಾವಿರಾರು ಸಾವುಗಳು ಸಂಭವಿಸಿವೆ ಎಂಬ ಆರೋಪಗಳ ಮಧ್ಯೆ ಗಂಗಾ ನದಿ ದಂಡೆಯಲ್ಲಿ ಸಾಮೂಹಿಕ ಸಮಾಧಿಯು ನದಿಯಲ್ಲಿ ತೇಲಿದವು. ಈ ನಡುವೆ ಸಾವಿನ ಅಂಕಿಅಂಶಗಳನ್ನು ನೋಂದಾಯಿಸುವ ಮತ್ತು ಒದಗಿಸುವ ಉಸ್ತುವಾರಿ ರಾಜ್ಯಗಳ ಮೇಲಿದೆ ಎಂದು ಸರ್ಕಾರ ವಾದಿಸಿದೆ. ಹೊಸ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಸರ್ಕಾರವನ್ನು ಸಮರ್ಥಿಸಿಕೊಂಡರು.

(ಒನ್‌ಇಂಡಿಯಾ ಸುದ್ದಿ)

English summary
Union Minister Giriraj Singh Reply in Italian to Rahul gandhi over Oxygen Tweet. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X