ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ಕೇಂದ್ರ ಸಚಿವ, ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಲವು ಪತ್ರಕರ್ತೆಯರು ಆರೋಪ ಹೊರೆಸಿದ್ದಾರೆ.

ಪ್ರಿಯಾ ರಮಣಿ ಎಂಬುವರು ಮೊದಲಿಗೆ ಈ ಬಗ್ಗೆ ಟ್ವೀಟ್ ಮಾಡಿ ವೋಗ್ ಇಂಡಿಯಾದ 2017ರ ಆವೃತ್ತಿಯಲ್ಲಿ ಬಂದ ಲೇಖನವೊಂದರನ್ನು ಉಲ್ಲೇಖಿಸಿದ್ದಾರೆ.

ಟೆಲಿಗ್ರಾಫ್, ಏಷ್ಯನ್ ಏಜ್, ದಿ ಸಂಡೇ ಗಾರ್ಡಿಯನ್ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರಾಗಿದ್ದ ಎಂಜೆ ಅಕ್ಬರ್ ಅವರು ಭಾರತೀಯ ಜನತಾ ಪಕ್ಷ ಸೇರಿದರು.

<br>ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ
ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ

ರಾಜ್ಯಸಭಾ ಸದಸ್ಯರಾದ ಅಕ್ಬರ್ ಅವರು ನಂತರ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಕಾರ ನಿರ್ವಹಿಸುತ್ತಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ನಂತರ, ಪ್ರಮುಖ ರಾಷ್ಟ್ರೀಯ ದೈನಿಕ ಹಿಂದೂಸ್ತಾನ್ ಟೈಮ್ಸ್ ನ ರಾಜಕೀಯ ವಿಭಾಗದ ಸಂಪಾದಕ, ಮುಖ್ಯ ಬ್ಯೂರೋ ಪ್ರಶಾಂತ್ ಝಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಎಡಿಟರ್ ಕೆಆರ್ ಶ್ರೀನಿವಾಸನ್ ವಿರುದ್ಧ ಪತ್ರಕರ್ತೆ ಸಂಧ್ಯಾ ಮೆನನ್ ಏಳು ಮಂದಿ ಮಹಿಳೆಯರು ಆರೋಪಿಸಿದ್ದಾರೆ.

ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.

ಮೊದಲು ದನಿಯೆತ್ತಿದ ಪ್ರಿಯಾ ರಮಣಿ

ಪ್ರಿಯಾ ರಮಣಿ ಎಂಬುವರು ಮೊದಲಿಗೆ ಈ ಬಗ್ಗೆ ಟ್ವೀಟ್ ಮಾಡಿ ವೋಗ್ ಇಂಡಿಯಾದ 2017ರ ಆವೃತ್ತಿಯಲ್ಲಿ ಬಂದ ಲೇಖನವೊಂದರನ್ನು ಉಲ್ಲೇಖಿಸಿದ್ದಾರೆ.

'ನಾನು ಮೊದಲಿಗೆ ನನ್ನ ಎಂಜೆ ಅಕ್ಬರ್ ಕಥೆಯೊಂದಿಗೆ ಆರಂಭಿಸುತ್ತಿದ್ದೇನೆ. ಲೇಖನದಲ್ಲಿ ಇವರ ಹೆಸರು ಸೇರಿಸಲಿಲ್ಲ ಏಕೆಂದರೆ ಇವರು 'ಏನ್ನನ್ನೂ' ಮಾಡಲಿಲ್ಲ. ಇವರ ಬಳಿ ಹಲವು ಮಹಿಳೆಯರು ಕೆಟ್ಟ ಕಥೆಗಳನ್ನು ಹೇಳಲಿದ್ದಾರೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರೇರಣಾ ಸಿಂಗ್ ಬಿಂದ್ರಾ ಅವರಿಂದ ಟ್ವೀಟ್

ಈತ ಅತ್ಯಂತ ಪ್ರತಿಭಾವಂತ ಸಂಪಾದಕ, ಈಗ ರಾಜಕಾರಣಿ, ನನ್ನ ಮೊದಲ ಉದ್ಯೋಗ ಸ್ಥಳದಲ್ಲಿ ಈತ ನನಗೆ ಬಾಸ್. ಒಮ್ಮೆ ಹೋಟೆಲ್ ರೂಮಿಗೆ ಕರೆದು ಲೇಖನವೊಂದರ ಬಗ್ಗೆ ಚರ್ಚೆ ಮಾಡಿದೆವು. ಮಧ್ಯರಾತ್ರಿ ಕಳೆಯುತ್ತಿದ್ದಂತೆ ಆತ ನನ್ನನ್ನು ಮಂಚಕ್ಕೆ ಕರೆದ, ನಾನು ನಿರಾಕರಿಸಿದೆ. ಪ್ರತಿಭಟಿಸಿದೆ. ಈ ಬಗ್ಗೆ ಮಾತನಾಡಲು ಅನೇಕ ಕಾರಣಗಳಿಂದ ಆಗಿರಲಿಲ್ಲ ಎಂದು ಹೆಸರನ್ನು ಹೇಳಲು ಬಯಸದ ಪತ್ರಕರ್ತೆಯ ನೋವನ್ನು ಟ್ವೀಟ್ ನಲ್ಲಿ ಹಾಕಲಾಗಿದೆ.

ಸುಜತಾ ಆನಂದನ್ ಟ್ವೀಟ್

ಕಾಫಿ ಕುಡಿಯಲೆಂದು ನನ್ನ ಫ್ರೆಂಡ್ ಮನೆಗೆ ರಾತ್ರಿ ವೇಳೆ ಒಂದು ದಿನ ಈತ ಬಂದಿದ್ದ. ನನ್ನ ಗೆಳತಿ ಸಿಂಗಲ್ ಮದರ್ ಆಗಿದ್ದು, ಮಗು ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಈತನ ಬಯಕೆಗೆ ಸಹಕರಿಸಲೂ ಇಲ್ಲ. ಆನಂತರ ಅವಳಿಗೆ ನರಕ ದರ್ಶನವಾಯಿತು.

ಶುಮಾ ರಹಾ ಟ್ವೀಟ್

1995ರಲ್ಲಿ ತಾಜ್ ಬೆಂಗಾಲ್, ಕೋಲ್ಕತ್ತಾದಲ್ಲಿ ನನಗಾದ ಅನುಭವದ ನಂತರ ನಾನು ಹುದ್ದೆ ತೊರೆಯಬೇಕಾಯಿತು

ಹರೀಂದರ್ ಬವೇಜಾ

ರಮ್ ಜತೆಗೆ ಇಂದು ರಾತ್ರಿ ನಿಮ್ಮ ಮನೆಗೆ ಬರುತ್ತೇನೆ ಎನ್ನುತ್ತಿದ್ದ. ಬೇಡ ಎಂದರೆ ಏನು ಅರ್ಥ ಎಂಬುದು ಆತನಿಗೆ ತಿಳಿದಿಲ್ಲ. ನಮ್ಮಲ್ಲಿ ಅನೇಕರ ಬಳಿ ಎಂಜೆ ಬಗ್ಗೆ ಕಥೆಗಳಿವೆ.

English summary
Four journalists made allegations of sexual harassment against veteran journalist and Minister of State for External Affairs, MJ Akbar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X