ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ ಏರಿಕೆ, ಗಾಳಿಯ ಗುಣಮಟ್ಟ ತೀರಾ ಕಳಪೆ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ. ಇದೀಗ ಕನಿಷ್ಠ ಉಷ್ಣಾಂಶ 5.5 ಡಿಗ್ರಿಗೆ ಏರಿಕೆಯಾಗಿದೆ, ಆದರೂ ಗಾಳಿಯ ಶುದ್ಧತೆ ಕಡಿಮೆ ಇದೆ. ಈ ಗಾಳಿ ನೇರ ಉಸಿರಾಟಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.

ಶನಿವಾರ ಸಫ್ಜಜಂಗ್‍ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಶನಿವಾರ ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ.

ದೆಹಲಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ವಾಯುಮಾಲಿನ್ಯದೆಹಲಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ವಾಯುಮಾಲಿನ್ಯ

ಡಿಸೆಂಬರ್ 23ರಿಂದ 26ರವರೆಗೆ ಸಾಕಷ್ಟು ಕಡೆಗಳಲ್ಲಿ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಯಲು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ಇರುವಾಗ ಹವಾಮಾನ ಇಲಾಖೆ ಶೀತಲ ಗಾಳಿಯನ್ನು ಘೋಷಿಸುತ್ತದೆ.

ಜಮ್ಮು ಕಾಶ್ಮೀರದಲ್ಲಿ ಹಿಮಪಾತ

ಜಮ್ಮು ಕಾಶ್ಮೀರದಲ್ಲಿ ಹಿಮಪಾತ

ಜಮ್ಮು ಕಾಶ್ಮೀರ , ಲಡಾಖ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದೆ. ಭಾನುವಾರ 3.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು, ಸೋಮವಾರ ಬೆಳಗ್ಗೆಯಷ್ಟೊತ್ತಿಗೆ 5.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.

ಅಪ್ಪಳಿಸುತ್ತಿದೆ ಹಿಮಗಾಳಿ

ಅಪ್ಪಳಿಸುತ್ತಿದೆ ಹಿಮಗಾಳಿ

ಲೋಧಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. ಪಶ್ಚಿಮ ಹಿಮಾಲಯ ಪ್ರದೇಶ ಭಾಗದ ಮೂಲ ಹಿಮಗಾಳಿ ಅಪ್ಪಳಿಸುತ್ತಿರುವುದರಿಂದ ದೆಹಲಿ ಮಂಜಿನ ಕೋಟೆಯಾಗಿದೆ. ಶುಕ್ರವಾರ ಜಫರ್‍ಪುರ್ ಮಾಪನ ಕೇಂದ್ರದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ಶೀತವಾತಾವರಣ ದಾಖಲಾಗಿದೆ.

ಒಂದು ವಾರದ ಉಷ್ಣಾಂಶ ಹೇಗಿತ್ತು

ಒಂದು ವಾರದ ಉಷ್ಣಾಂಶ ಹೇಗಿತ್ತು

ಸರಾಸರಿ ಉಷ್ಣತೆ ಗುರುವಾರ ಗರಿಷ್ಠ 15.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಶುಕ್ರವಾರ ಅದು 19.8ಕ್ಕೆ, ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.ದೆಹಲಿಯ ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ 10 ಡಿಗ್ರಿಗಿಂತ ಕಡಿಮೆ ಇಲ್ಲದ ಮತ್ತು ಗರಿಷ್ಠ 4.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಅದನ್ನು ಶೀತದಿನ ಎಂದು ಉಲ್ಲೇಖಿಸಲಾಗುತ್ತದೆ.

6.5 ಡಿಗ್ರಿಗಿಂತ ತೇವಾಂಶ ಕಡಿಮೆ

6.5 ಡಿಗ್ರಿಗಿಂತ ತೇವಾಂಶ ಕಡಿಮೆ

6.5 ಡಿಗ್ರಿಗಿಂತ ಕಡಿಮೆ ತೇವಾಂಶ ಇರುವ ದಿನವನ್ನು ಗಂಭೀರ ಗಂಭೀರ ಶೀತದಿನ ಎಂದು ಪರಿಗಣಿಸಲಾಗುತ್ತದೆ. ಮುಂದಿನ ಐದು ದಿನಗಳಲ್ಲಿ ದೆಹಲಿಯ ಉಷ್ಣಾಂಶ 5 ಡಿಗ್ರಿ ಸೆಲ್ಸಿಯಸ್‍ಗಿಂತಲೂ ಕಡಿಮೆಯಾಗಲಿದೆ.

English summary
The minimum temperature in Delhi rose slightly to 5.5 degrees Celsius on Monday under the influence of a fresh western disturbance affecting the upper reaches of the Himalayas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X