ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರ

|
Google Oneindia Kannada News

ನವದೆಹಲಿ, ಆಗಸ್ಟ್‌ 21: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಅನ್ನು ಘೋಷಿಸಿತು. ಪರಿಣಾಮ ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಗರಗಳನ್ನು ತೊರೆದು ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.

Recommended Video

Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

ನೂರಾರು ಕಿ.ಮೀ ದೂರವನ್ನೂ ಲೆಕ್ಕಿಸದೇ ನಡೆದುಕೊಂಡೇ ತಮ್ಮ ತಮ್ಮ ಹಳ್ಳಿಗಳನ್ನ ಕಾರ್ಮಿಕರು ತಲುಪಿದರು. ಕೊನೆಗೂ ತಮ್ಮೂರನ್ನ ತಲುಪಿದವಲ್ಲ ಎಂದು ನಿಟ್ಟುಸಿರು ಬಿಟ್ಟು ಕೆಲ ದಿನದಲ್ಲೇ ಹೊಸ ಸಮಸ್ಯೆಯನ್ನೇ ಎದುರಿಸಬೇಕಾಗಿದೆ.

15,570,087: ವಿಶ್ವದೆಲ್ಲೆಡೆ ಸೋಂಕಿನಿಂದ ಚೇತರಿಕೆ ಕಂಡವರು15,570,087: ವಿಶ್ವದೆಲ್ಲೆಡೆ ಸೋಂಕಿನಿಂದ ಚೇತರಿಕೆ ಕಂಡವರು

ಹೌದು ಗ್ರಾಮೀಣ ಪ್ರದೇಶಗಳಲ್ಲಿ ನಗರಗಳಿಂದ ಬಂದ ನಂತರ, ಅವರು ಈಗ ಸಣ್ಣ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳ ಮೇಲೂ ಜಾತಿ ತಾರತಮ್ಯವನ್ನು ಎದುರಿಸುತ್ತಾರೆ ಎಂದು ಅನೇಕ ಜನರು ಹೇಳುತ್ತಿದ್ದಾರೆ. ಮಧ್ಯಪ್ರದೇಶದ ಆಯ್ಸ್ಟನ್ ಗ್ರಾಮದಲ್ಲಿ, 33 ವರ್ಷದ ರಾಜು ಬನ್ಸ್ಕರ್, ನಾನು ಕೆಳಜಾತಿಯಿಂದ ಬಂದು ನವದೆಹಲಿಗೆ ಹೋಗಿ ಬಂದ ನಂತರ ಸಾಮಾಜಿಕ, ಆರ್ಥಿಕ ಎರಡು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಹಳ್ಳಿಗಳಿಗೆ ಹಿಂತಿರುಗಿದರೂ ಕೆಲಸವಿಲ್ಲ

ಹಳ್ಳಿಗಳಿಗೆ ಹಿಂತಿರುಗಿದರೂ ಕೆಲಸವಿಲ್ಲ

ಲಾಕ್‌ಡೌನ್‌ದಿಂದಾಗಿ ಕೈನಲ್ಲಿ ಹಣವಿಲ್ಲ ಎಂದು ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿದರು. ಆದರೆ ತಮ್ಮ ಊರಿನಲ್ಲೂ ಈಗ ಮಾಡಲು ಕೆಲಸವೇ ಇಲ್ಲದಂತಾಗಿದೆ ಎಂದು ಹೇಳುವ ಅನೇಕ ಜನರಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ರಾಜು ಬನ್ಸ್ಕರ್ ಹೇಳುವ ಪ್ರಕಾರ ''ನಾನು ದೆಹಲಿಯಲ್ಲಿದ್ದಾಗ, ನಿರ್ಮಾಣ ಕಾರ್ಯವು ಪ್ರತಿದಿನ 250-300 ರೂಪಾಯಿಗಳನ್ನು ಗಳಿಸುತ್ತಿತ್ತು. ಆದರೆ ವೈರಸ್ ತಡೆಗಟ್ಟಲು ಲಾಕ್‌ಡೌನ್ ಜಾರಿಗೆ ತಂದ ನಂತರ ನಿರ್ಮಾಣ ಸ್ಥಳಗಳನ್ನು ಮುಚ್ಚಿದರು. ಮನೆಗೆ ಹಿಂದಿರುಗಿದ , ಸರ್ಕಾರಿ ಉದ್ಯೋಗ ಕಾರ್ಯಕ್ರಮಗಳ ಮೂಲಕ ರಚಿಸಲಾದ ಕೆಲಸವನ್ನು ಹೆಚ್ಚಾಗಿ ಗ್ರಾಮದ ಮುಖ್ಯಸ್ಥರು ಮೇಲ್ಜಾತಿಯ ಕಾರ್ಮಿಕರಿಗೆ ನೀಡುತ್ತಾರೆ ಎಂದು'' ಅಳಲನ್ನು ತೋಡಿಕೊಂಡಿದ್ದಾರೆ.

ಹಲವಾರು ರಾಜ್ಯಗಳಲ್ಲಿ ವಲಸಿಗರ ಗೋಳು ಕೇಳುವವರಿಲ್ಲ

ಹಲವಾರು ರಾಜ್ಯಗಳಲ್ಲಿ ವಲಸಿಗರ ಗೋಳು ಕೇಳುವವರಿಲ್ಲ

ಹಲವಾರು ಭಾರತೀಯ ರಾಜ್ಯಗಳಲ್ಲಿ ಬ್ಲೂಮ್‌ಬರ್ಗ್ ನ್ಯೂಸ್ ಸಂದರ್ಶಿಸಿದ ಒಂಬತ್ತು ವಲಸಿಗರ ಕಥೆಗಳು ಬನ್ಸ್ಕರ್ ಅವರ ಕಥೆಗಳಂತೆಯೇ ಇದ್ದವು. ಸಾಂಕ್ರಾಮಿಕ ರೋಗವು ದೇಶದ ತೀವ್ರ ಅಸಮಾನತೆಗಳಲ್ಲಿ ಒಂದನ್ನು ಹೇಗೆ ವಿಸ್ತರಿಸುತ್ತಿದೆ, ಭಾರತದ ಪ್ರಾಚೀನ ಜಾತಿ ವ್ಯವಸ್ಥೆಯಿಂದ ನಿರ್ಧರಿಸಲ್ಪಟ್ಟ ಸಾಮಾಜಿಕ ಶ್ರೇಣಿ, ಇದು ಸಾಮಾಜಿಕ ಸಂವಹನಗಳಿಂದ ಎಲ್ಲವನ್ನೂ ನಿರ್ಧರಿಸುತ್ತದೆ. ದಕ್ಷಿಣ ಏಷ್ಯಾದ ದೇಶಗಳು ಮುಂದಿನ ವರ್ಷ ತಮ್ಮ ಆರ್ಥಿಕ ಉದಾರೀಕರಣದ 30 ನೇ ವರ್ಷಾಚರಣೆಯನ್ನು ಆಚರಿಸುತ್ತಿವೆ. ಆದರೆ ಸಾಂಕ್ರಾಮಿಕ ರೋಗವು ಬನ್ಸ್ಕರ್‌ನಂತಹ ಕಾರ್ಮಿಕರಿಗೆ ತಂದಿರುವ ತೊಂದರೆಗಳನ್ನು ಮುಂದಿಟ್ಟಿದೆ.

ದೆಹಲಿ: ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಲ್ಲಾ ಕಡೆ ಹೋಟೆಲ್ ತೆರೆಯಲು ಅನುಮತಿದೆಹಲಿ: ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಲ್ಲಾ ಕಡೆ ಹೋಟೆಲ್ ತೆರೆಯಲು ಅನುಮತಿ

"ನನಗೆ ಯಾವುದೇ ಭೂಮಿ ಇಲ್ಲ, ಆದ್ದರಿಂದ ನಾನು ಕೆಲಸ ಹುಡುಕಲು ಮತ್ತು ಈ ವ್ಯವಸ್ಥೆಯನ್ನು ತಪ್ಪಿಸಲು 12 ವರ್ಷಗಳ ಹಿಂದೆ ನನ್ನ ಗ್ರಾಮವನ್ನು ತೊರೆದಿದ್ದೇನೆ, ಅಲ್ಲಿ ನಾನು ಅಸ್ಪೃಶ್ಯನೆಂದು ಪರಿಗಣಿಸಲಾಗಿದೆ" ಎಂದು ಬನ್ಸ್ಕರ್ ಹೇಳಿದರು. ನಾನು ಬಿಟ್ಟ ಅದೇ ಸ್ಥಾನಕ್ಕೆ ಮರಳಿದ್ದೇನೆ, ಆದರೆ ಈಗ ಪರಿಸ್ಥಿತಿ ಹದಗೆಟ್ಟಿದೆ. ಕೆಳಜಾತಿಯ ಜನರಿಗೆ ಐತಿಹಾಸಿಕವಾಗಿ ಉನ್ನತ ಜಾತಿಯ ಜನರನ್ನು ಮುಟ್ಟಲು ಅವಕಾಶವಿರಲಿಲ್ಲ. ಈ ಹಳ್ಳಿಯಲ್ಲಿ ಅನೇಕ ಪದ್ಧತಿಗಳು ಇರುತ್ತವೆ ಎಂದು ಬನ್ಸ್ಕರ್ ಹೇಳುತ್ತಾರೆ.

ಯಾವುದೇ ದೂರು ಬರದೇ ಕ್ರಮವಿಲ್ಲ

ಯಾವುದೇ ದೂರು ಬರದೇ ಕ್ರಮವಿಲ್ಲ

ಈ ಕುರಿತು ಮಾತನಾಡಿದ ಬನ್ಸ್ಕರ್ ಗ್ರಾಮದ ಜಿಲ್ಲಾ ಪಂಚಾಯತ್‌ನ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಸೇನ್ ಸಿಂಗ್, ಈ ಪ್ರದೇಶದ ಉದ್ಯೋಗ ಕಾರ್ಯಕ್ರಮವು ತುಂಬಾ ಸಕ್ರಿಯವಾಗಿದೆ ಮತ್ತು ಜಾತಿ ತಾರತಮ್ಯದ ಬಗ್ಗೆ ಅವರಿಗೆ ದೂರುಗಳು ಬಂದಿಲ್ಲ ಎಂದಿದ್ದಾರೆ.

ಸರ್ಕಾರದ ಉದ್ಯೋಗ ಕಾರ್ಯಕ್ರಮದಡಿ ವೇತನವು ಹೊರಗೆ ಗಳಿಸಿದ ಆದಾಯಕ್ಕಿಂತ ಕಡಿಮೆ ಇರುವುದರಿಂದ ಕೆಲವರು ಕೆಲಸ ಮಾಡಲು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು. ಗ್ರಾಮದಲ್ಲಿ ಕೆಲಸ ಮಾಡಲು ಹೆಚ್ಚು ಶ್ರಮ ಅಗತ್ಯವಿಲ್ಲ. ಕೊರೊನಾ ವೈರಸ್ದಿಂದಾಗಿ ಪ್ರಪಂಚದಾದ್ಯಂತದ ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತ ಕೂಡ ಕೆಟ್ಟ ಪರಿಣಾಮ ಎದುರಿಸುತ್ತಿದೆ.

ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಆರ್ಥಿಕತೆ

ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಆರ್ಥಿಕತೆ

ಲಾಕ್‌ಡೌನ್‌ದಿಂದಾಗಿ ಆರ್ಥಿಕತೆಯು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಆದರೆ ಈಗಾಗಲೇ ಉದ್ಯೋಗ ಕಳೆದುಕೊಂಡು ತಮ್ಮ ಊರುಗಳಿಗೆ ಮರಳಿರುವ ಕಾರ್ಮಿಕರು ಆರ್ಥಿಕ ಸಮಸ್ಯೆಯನ್ನು ಎದುರಿಸುವುದರ ಜೊತೆಗೆ ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯವನ್ನು ಎದುರಿಸುತ್ತಿರುವ ಆರೋಪಗಳು ಕೇಳಿ ಬಂದಿವೆ.

English summary
Millions of migrant workers made arduous journeys to their villages after India imposed the world’s largest lockdown in March. But many say caste discrimination in village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X