ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆ

|
Google Oneindia Kannada News

ನವದೆಹಲಿ, ಜೂನ್ 26: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆದಿದ್ದು, ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ವೃದ್ಧಿಗೆ ಇದು ನಾಂದಿ ಹಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇಂದು ಮೋದಿ-ಪೊಂಪಿಯೋ ಭೇಟಿ: ಮಹತ್ವದ ಚರ್ಚೆ ನಿರೀಕ್ಷೆ ಇಂದು ಮೋದಿ-ಪೊಂಪಿಯೋ ಭೇಟಿ: ಮಹತ್ವದ ಚರ್ಚೆ ನಿರೀಕ್ಷೆ

ಭಯೋತ್ಪಾದನೆ, ಎಚ್ 1 ಬಿ ವೀಸಾ ಬಗೆಗಿನ ಗೊಂದಲ, ವ್ಯಾಪಾರ, ಆದ್ಯತಾ ವಹಿವಾಟಿನ ಕುರಿತ ವಿವಾದ, ರಷ್ಯಾದೊಂದಿಗೆ ಭಾರತದ ಶಸ್ತ್ರಾಸ್ತ್ರ ಒಪ್ಪಂದ ಸೇರಿದಂತೆ ಹಲವು ಮಹತ್ವದ ಮಾತುಕತೆಗಳು ನಾಯಕರ ನಡುವೆ ನಡೆದಿವೆ ಎನ್ನಲಾಗಿದೆ.

Mike Pompeo meets Prime Minister Narendra Modi in New Delhi

ಇಂದು ಮಧ್ಯಾಹ್ನ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಪೊಂಪಿಯೋ ಭೇಟಿಯಾಗಲಿದ್ದು, ಈ ಎಲ್ಲ ವಿಷಯಗಳ ಬಗ್ಗೆ ಅವರೊಂದಿಗೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ನಮ್ಮನ್ನು ಎಲ್ಲರೂ ದರೋಡೆ ಮಾಡ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಮತ್ತೆ ಕಿಡಿನಮ್ಮನ್ನು ಎಲ್ಲರೂ ದರೋಡೆ ಮಾಡ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಮತ್ತೆ ಕಿಡಿ

ಆದ್ಯತೆಯ ವಹಿವಾಟಿನ(Generalized System of Preferences) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆದ ನಂತರ ಮೊದಲ ಬಾರಿಗೆ ಪೊಂಪಿಯೋ ಭಾರತಕ್ಕೆ ಭೇಟಿ ನೀಡುತ್ತಿದ್ದು, ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಜೊತೆಗೆ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಅನ್ಯದೇಶಿಯರಿಗೆ ನೀಡುವ H-1B ವೀಸಾ ಕಡಿತಕ್ಕೆ ಅಮೆರಿಕ ಮುಂದಾಗಿದೆ ಎಂಬ ಮಾಧ್ಯಮಗಳ ವರದಿಯ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ.

English summary
US Secretary of State Mike Pompeo met Prime Minister Narendra Modi in New Delhi on Wednesday. He will be visiting EAM S Jaishankar, and Both the leaders will discuss about terrorism, H-1B Visas, trade, India's arm deal with Russia etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X