ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಹಾಡಿದ್ದಕ್ಕೆ ಗಾಯಕ ಮಿಕಾ ಸಿಂಗ್‌ಗೆ ನಿಷೇಧ

|
Google Oneindia Kannada News

ನವದೆಹಲಿ, ಆಗಸ್ಟ್ 14: ಉದ್ವಿಗ್ನ ಪರಿಸ್ಥಿತಿಯ ನಡುವೆ ಪಾಕಿಸ್ತಾನದ ಕರಾಚಿಯಲ್ಲಿ ಪ್ರದರ್ಶನ ನೀಡಿದ ಗಾಯಕ ಮಿಕಾ ಸಿಂಗ್ ಮೇಲೆ ಅಖಿಲ ಭಾರತ ಸಿನಿ ನೌಕರರ ಸಂಸ್ಥೆ (ಎಐಸಿಡಬ್ಲ್ಯೂಎ) ಭಾರತೀಯ ಸಿನಿಮಾ ಉದ್ಯಮದಿಂದ ನಿಷೇಧ ಹೇರಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಹತ್ತಿರ ಸಂಬಂಧಿಯೊಬ್ಬರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಿಕಾ ಸಿಂಗ್ ಭಾಗವಹಿಸಿದ್ದರು. ಪಾಕಿಸ್ತಾನದ ಪತ್ರಕರ್ತರೊಬ್ಬರು ಮಾಡಿರುವ 30 ಸೆಕೆಂಡುಗಳ ವಿಡಿಯೋ ಟ್ವೀಟ್‌ನಲ್ಲಿ ಮಿಕಾ ಸಿಂಗ್ ಹಾಡುತ್ತಿರುವುದು ಪ್ರಸಾರವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ ಬಳಿಕ ಭಾರತವು ಪಾಕಿಸ್ತಾನದೊಂದಿಗಿನ ಎಲ್ಲ ಕಲಾ ಹಾಗೂ ಸಾಮಾಜಿಕ ಒಪ್ಪಂದಗಳನ್ನು ಕಡಿದುಕೊಳ್ಳುತ್ತಿದೆ. ಈ ನಡುವೆಯೂ ಮಿಕಾ ಸಿಂಗ್ ಅಲ್ಲಿ ಹಾಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ.

ಪಂಜಾಬಿಗಳನ್ನು ಕೆಣಕಲು ಬಂದ ಪಾಕ್ ಸಚಿವನಿಗೆ ಛೀಮಾರಿ ಹಾಕಿದ ಅಮರೀಂದರ್ಪಂಜಾಬಿಗಳನ್ನು ಕೆಣಕಲು ಬಂದ ಪಾಕ್ ಸಚಿವನಿಗೆ ಛೀಮಾರಿ ಹಾಕಿದ ಅಮರೀಂದರ್

''ಕರಾಚಿಯಲ್ಲಿ ಆಗಸ್ಟ್ 8ರಂದು ವೈಭವೋಪೇತ ಸಮಾರಂಭದಲ್ಲಿ ಹಾಡಿರುವುದಕ್ಕೆ ಎಐಸಿಡಬ್ಲ್ಯೂಎ ಗಾಯಕ ಮಿಕಾ ಸಿಂಗ್ ಅವರನ್ನು ಭಾರತೀಯ ಚಿತ್ರೋದ್ಯಮದಿಂದ ನಿಷೇಧಿಸಿದೆ ಮತ್ತು ಬಹಿಷ್ಕರಿಸಿದೆ'' ಎಂದು ಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ.

Mika Singh Banned By AICWA Indian Film Industry Performing In Pakistan

''ಮಿಕಾ ಸಿಂಗ್ ಅವರ ಎಲ್ಲ ಸಿನಿಮಾ ನಿರ್ಮಾಣ ಸಂಸ್ಥೆಗಳು, ಸಂಗೀತ ಕಂಪೆನಿಗಳು ಮತ್ತು ಅಂತರ್ಜಾಲ ಸಂಗೀತ ವಿಷಯ ಪೂರೈಕೆದಾರರೊಂದಿಗಿನ ಎಲ್ಲ ಒಪ್ಪಂದಗಳಿಂದಲೂ ಅವರನ್ನು ತಕ್ಷಣದಿಂದಲೇ ಬಹಿಷ್ಕರಿಸುವ ಕಠಿಣ ನಿಲುವನ್ನು ತೆಗೆದುಕೊಂಡಿದೆ'' ಎಂದು ಹೇಳಿದ್ದಾರೆ.

ಹೃದಯ ಗೆಲ್ಲುತ್ತಿದೆ ಭಾರತದ ರಾಯಭಾರಿ ಪಾಕ್‌ನಲ್ಲಿ ಮಾಡಿದ ಕಾರ್ಯಹೃದಯ ಗೆಲ್ಲುತ್ತಿದೆ ಭಾರತದ ರಾಯಭಾರಿ ಪಾಕ್‌ನಲ್ಲಿ ಮಾಡಿದ ಕಾರ್ಯ

''ಭಾರತದ ಯಾರೂ ಮಿಕಾ ಸಿಂಗ್ ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಎಐಸಿಡಬ್ಲ್ಯೂಎ ಕೆಲಸಗಾರರು ಖಚಿತಪಡಿಸಲಿದ್ದಾರೆ. ಒಂದು ವೇಳೆ ಅವರೊಂದಿಗೆ ಕೆಲಸ ಮಾಡಿದರೆ ಅವರು ಕಾನೂನಿನ ಅಡಿಯಲ್ಲಿ ಕಾನೂನಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ'' ಎಂದು ಎಚ್ಚರಿಕೆ ನೀಡಿದ್ದಾರೆ.

''ಎರಡೂ ದೇಶಗಳ ನಡುವಿನ ಉದ್ವಿಗ್ನ ಸನ್ನಿವೇಶ ಉತ್ತುಂಗದಲ್ಲಿ ಇರುವ ಸಂದರ್ಭದಲ್ಲಿ ಮಿಕಾ ಸಿಂಗ್ ದೇಶದ ಮೇಲಿನ ಅಭಿಮಾನವನ್ನು ಹಣಕ್ಕೆ ಪಣವಾಗಿಟ್ಟಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Singer Mika Singh has been banned by the All India Cine Workers Association from the Indian Film industry for performing at an event in Karachi, Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X